ಜಿ.ಟಿ. ದೇವೇಗೌಡ ಮನೆಗೆ ನಿಖಿಲ್ ದಂಪತಿ ಭೇಟಿ: ಮುರಿದ ಸಂಬಂಧಕ್ಕೆ ಜೆಡಿಎಸ್ ಯುವರಾಜನಿಂದ ಬೆಸುಗೆ?

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಮಾಜಿ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡರ ಮನೆಗೆ ದಿಢೀರ್ ಭೇಟಿ ನೀಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
ಜಿ.ಟಿ ದೇವೇಗೌಡ ಮನೆಗೆ ನಿಖಿಲ್ ಭೇಟಿ
ಜಿ.ಟಿ ದೇವೇಗೌಡ ಮನೆಗೆ ನಿಖಿಲ್ ಭೇಟಿ

ಬೆಂಗಳೂರು: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಮಾಜಿ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡರ ಮನೆಗೆ ದಿಢೀರ್ ಭೇಟಿ ನೀಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ಮೈಸೂರಿನ ಜೆಡಿಎಸ್ ದೈತ್ಯ ನಾಯಕ ಎಂದೇ ಪರಿಗಣಿತವಾಗಿರುವ ಜಿ,ಟಿ ದೇವೇಗೌಡ 2018ರ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸೋಲಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.

ಕಳೆದ 16 ತಿಂಗಳಿಂದ ಜೆಡಿಎಸ್ ಪಕ್ಷದ ಜೊತೆ ಜಿ.ಟಿ ದೇವೇಗೌಡರ ಸಂಬಂಧ ಹಳಸಿದೆ, ಜೆಡಿಎಸ್ ಶಾಸಕಾಂಗ ಸಭೆ ಸೇರಿದಂತೆ ಹಲವು ಸಭೆಗಾಳಿಗೆ ಗೈರಾಗುವ ಮೂಲಕ ಜಿಟಿಡಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದರು.

ಶುಕ್ರವಾರ ಸಂಜೆ 5 ಗಂಟೆಗೆ ನಿಖಿಲ್ ಮತ್ತು ಪತ್ನಿ ರೇವತಿ ತಮ್ಮ ಮನೆಗೆ ಭೇಟಿ ನೀಡಿದ್ದರು, ನಿಖಿಲ್ ಮತ್ತು ತಮ್ಮ ಪುತ್ರ ಹರೀಶ್ ಸ್ನೇಹಿತರು, ಹೀಗಾಗಿ ಅವರಿಗೆ ಹೋಳಿಗೆ ಸಿದ್ದಪಡಿಸಲಾಗಿತ್ತು. ಸಂಜೆ 7 ಗಂಟೆವರೆಗೂ ನಮ್ಮ ಮನೆಯಲ್ಲಿದ್ದು, ನಂತರ ನಂಜನಗೂಡು ದೇವಾಲಯಕ್ಕೆ ತೆರಳಿದರು ಎಂದು ಜಿ.ಟಿ ದೇವೇಗೌಡ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಜೆಡಿಎಸ್ ಜೊತೆ ಜಿ.ಟಿ ದೇವೇಗೌಡರ ಸಂಬಂಧ ಹಳಸಿರುವ ಕಾರಣ ನಿಖಿಲ್ ಅದನ್ನು ಸರಿಪಡಿಸಲು ಭೇಟಿ ನೀಡಿರಬಹುದು ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನೂ ಇತ್ತೀಚೆಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿ.ಟಿ ದೇವೇಗೌಡ ಇನ್ನೂ ಜೆಡಿಎಸ್ ಪಕ್ಷದಲ್ಲೇ ಇದ್ದಾರೆ ಎಂದು ಹೇಳಿಕೆ ನೀಡಿದ್ದರು.

ನಿಖಿಲ್ ಪ್ರಯತ್ನ ಮುರಿದ ಸಂಬಂಧ ಒಗ್ಗೂಡಿಸುವುದಾಗಿದೆ, ಸಂಸತ್ ಚುನಾವಣೆ ಮತ್ತು ಉಪ ಚುನಾವಣೆಯಲ್ಲಿ ಪಕ್ಷ ಸೋಲನುಭವಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಅನ್ನು ಬಲಗೊಡಿಸಲು ಈ ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ.

2008-13ರಲ್ಲಿ ಕರ್ನಾಟಕದಲ್ಲಿ ಬಿಜೆಪಿಯ ಮೊದಲ ಅಧಿಕಾರಾವಧಿಯಲ್ಲಿ ಕಾಂಗ್ರೆಸ್ ಗಿಂತ ಜೆಡಿಎಸ್ ಚಿಕ್ಕದಾಗಿದ್ದರೂ ದೊಡ್ಡ ಪ್ರತಿಪಕ್ಷಗಳ ಪಾತ್ರವನ್ನು ವಹಿಸಿದ್ದಕ್ಕಿಂತಲೂ ಈಗ ಅದು ಹೆಚ್ಚು ದುರ್ಬಲವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆಕ್ರಮಣಕಾರಿ ವಿರೋಧಿಯಾಗುವ ಮೊದಲು ತನ್ನ ಮನೆಯನ್ನು ಭದ್ರಪಡಿಸಿಕೊಳ್ಳಲು ಜೆಡಿಎಸ್ ಪ್ರಯತ್ನಿಸುತ್ತಿದೆ ಎಂಬುದು ಇದರ ಸಂಕೇತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com