ರಾಜ್ಯದಲ್ಲಿ ಪ್ರಜಾಪ್ರಭುತ್ವ ಅಸ್ಥಿತ್ವದಲ್ಲಿದೆಯೇ? ವಿಪಕ್ಷ ನಾಯಕನ ಪತ್ರಗಳಿಗೆ ಉತ್ತರಿಸುವ ಸೌಜನ್ಯವಿಲ್ಲವೇ?: ಸಿದ್ದರಾಮಯ್ಯ 

ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರಿಗೆ ಮೂರು ಬಾರಿ ಪತ್ರ ಬರೆದೆ. ಈವರೆಗೂ ಉತ್ತರ ಬರಲಿಲ್ಲ. ವಿರೋಧ ಪಕ್ಷ ನಾಯಕನ ಪತ್ರಗಳಿಗೆ ಉತ್ತರ ನೀಡುವ ಸೌಜನ್ಯ ಇವರಿಗಿಲ್ಲ ’ಎಂದೂ ಕಿಡಿಕಾರಿದರು.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಪ್ರಜಾಪ್ರಭುತ್ವ ಅಸ್ಥಿತ್ವದಲ್ಲಿದೆಯೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಪ್ರಶ್ನಿಸಿದ್ದಾರೆ.

ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರಿಗೆ ಮೂರು ಬಾರಿ ಪತ್ರ ಬರೆದೆ. ಈವರೆಗೂ ಉತ್ತರ ಬರಲಿಲ್ಲ. ವಿರೋಧ ಪಕ್ಷ ನಾಯಕನ ಪತ್ರಗಳಿಗೆ ಉತ್ತರ ನೀಡುವ ಸೌಜನ್ಯ ಇವರಿಗಿಲ್ಲ ಎಂದೂ ಕಿಡಿಕಾರಿದರು.

ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ), ನಿಗದಿತ ಬೆಲೆಗಳು ವೈಜ್ಞಾನಿಕವಲ್ಲ ಮತ್ತು ಅದನ್ನು ಮರುಪರಿಶೀಲಿಸುವಂತೆ ಜೂನ್ 6 ರಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದೇನೆ ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯ ಸರ್ಕಾರವೇ  ಪತ್ರಕ್ಕೆ ಉತ್ತರಿಸಲಿಲ್ಲ ಎಂದರೇ ಪ್ರಧಾನಿ ಅಂದರೇ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡುತ್ತದಾ ಎಂದು ಪ್ರಶ್ನಿಸಿದ್ದಾರೆ. ‘ಪ್ರವಾಹ ಪರಿಹಾರದ ಮೊತ್ತ ನೀಡಿಕೆಯಲ್ಲೂ ಕೇಂದ್ರ ಸರ್ಕಾರಓ ಚುನಾವಣಾ ರಾಜಕಾರಣ ಮಾಡುತ್ತಿದೆ. ಚುನಾವಣೆ ಎದುರಿಸುತ್ತಿರುವ ಪಶ್ಚಿಮ ಬಂಗಾಳಕ್ಕೆ ಹೆಚ್ಚು ಪರಿಹಾರ ನೀಡಿರುವ ಕೇಂದ್ರ, ರ್ನಾಟಕಕ್ಕೆ ಕಡಿಮೆ ಮೊತ್ತದ ಪರಿಹಾರ ನೀಡಿ ತಾರತಮ್ಯ ಧೋರಣೆ ತೋರಿಸಿದೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರವಾಗಿ ಆರೋಪಿಸಿದರು.

ಕನಿಷ್ಟ ಬೆಂಬಲ ಬೆಲೆ ಬಗ್ಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಪತ್ರ ಬರೆದಿದ್ದೇನೆ, ಜೂನ್ ನಲ್ಲಿ ಬರೆದ ಪತ್ರಕ್ಕೆ ಅಕ್ಟೋಬರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.  ಆದರೆ ನನ್ನ ಪತ್ರಕ್ಕೆ ರಾಜ್ಯ ಸರ್ಕಾರವೂ ಸ್ಪಂದಿಸಲಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಇಷ್ಟಕ್ಕೆ ನಾನು ಸುಮ್ಮನಾಗುವುದಿಲ್ಲ, ಪತ್ರ ಬರೆಯುತ್ತಲೇ ಇರುತ್ತೇನೆ.

ಪ್ರಜಾಪ್ರಭುತ್ವದಲ್ಲಿ ನಿಮಗೆ ವಿಶೇಷ ಸವಲತ್ತು ಇದೆಯೇ?  ಪ್ರತಿಪಕ್ಷದ ನಾಯಕರಾಗಲಿ ಅಥವಾ ಯಾರಿಗಾದರೂ ಪ್ರತಿಕ್ರಿಯಿಸದಿರಲು ನಿಮಗೆ ಸಂವಿಧಾನದಲ್ಲಿ ವಿಶೇಷ ಸವಲತ್ತು ಸಿಕ್ಕಿದೆಯೇ? ನಾನು ಮುಖ್ಯಮಂತ್ರಿಗೆ ಮೂರು ಪತ್ರಗಳನ್ನು ಬರೆದಿದ್ದೇನೆ, ಕಳೆದ ವರ್ಷ ಅಕ್ಟೋಬರ್ನಲ್ಲಿ, ಜನವರಿ ಮತ್ತು ಮತ್ತೆ ಈ ವರ್ಷದ ಅಕ್ಟೋಬರ್ ನಲ್ಲಿ, ಇದು ಯಾವುದೇ
ಪ್ರತಿಕ್ರಿಯೆ ನೀಡಿಲ್ಲ, ರಾಜ್ಯದ ಜನರಿಗೆ ನಾವು ಏನು ಹೇಳಬೇಕೆಂದು  ಸಿದ್ದರಾಮಯ್ಯ ಪ್ರಶ್ನಿಸಿದರು.

ಪಶ್ಚಿಮ ಬಂಗಾಳಕ್ಕೆ 2,707 ಕೋಟಿ ಪರಿಹಾರ ಕೊಟ್ಟಿದ್ದರೆ, ರಾಜ್ಯಕ್ಕೆ  577 ಕೋಟಿ ಮಾತ್ರ ನೀಡಿದೆ. ಕೇಂದ್ರ ಪರಿಹಾರ ಕೊಡುತ್ತದೆಯೋ ಬಿಡುತ್ತೋ, ರಾಜ್ಯದ ಖಜಾನೆ ಖಾಲಿ ಆಗಿದೆ. ನೀವಾದರೂ ಸಾಲ ಎತ್ತಿ ಪರಿಹಾರ ಕೊಡಿ. ಸರ್ಕಾರ ನಿಗಮ–ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸುವ ಮೂಲಕ ದುಂದು ವೆಚ್ಚ ನಿಲ್ಲಿಸಲಿ’ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com