ಬಿಜೆಪಿ ಜತೆ ಜೆಡಿಎಸ್ ಹೊಂದಾಣಿಕೆಯಾದರೆ ಪಕ್ಷ ತೊರೆಯುತ್ತೇನೆ: ಮಾಜಿ ಸಚಿವ ಶ್ರೀನಿವಾಸ್

ಜೆಡಿಎಸ್ ಬಿಜೆಪಿ ಜೊತೆ ಹೊಂದಾಣಿಕೆ ಅಥವಾ ಮೈತ್ರಿ ಮಾಡಿಕೊಳ್ಳುವುದಕ್ಕೆ ನಮ್ಮ ವಿರೋಧವಿದೆ. ಒಂದು ವೇಳೆ ನಮ್ಮ ತೀರ್ಮಾನಕ್ಕೆ ವಿರುದ್ದವಾಗಿ ಪಕ್ಷ ನಿಲುವು ತೆಗೆದು ಕೊಂಡರೆ ನಮ್ಮ ತೀರ್ಮಾನವನ್ನು ಪ್ರಕಟಿಸಬೇಕಾಗುತ್ತದೆ.
ಎಸ್ ಆರ್ ಶ್ರೀನಿವಾಸ್
ಎಸ್ ಆರ್ ಶ್ರೀನಿವಾಸ್

ತುಮಕೂರು: ಜೆಡಿಎಸ್ ಬಿಜೆಪಿ ಜೊತೆ ಹೊಂದಾಣಿಕೆ ಅಥವಾ ಮೈತ್ರಿ ಮಾಡಿಕೊಳ್ಳುವುದಕ್ಕೆ ನಮ್ಮ ವಿರೋಧವಿದೆ. ಒಂದು ವೇಳೆ ನಮ್ಮ ತೀರ್ಮಾನಕ್ಕೆ ವಿರುದ್ದವಾಗಿ ಪಕ್ಷ ನಿಲುವು ತೆಗೆದು ಕೊಂಡರೆ ನಮ್ಮ ತೀರ್ಮಾನವನ್ನು ಪ್ರಕಟಿಸಬೇಕಾಗುತ್ತದೆ ಎಂದು ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಖಡಕ್ಕಾಗಿ ಪಕ್ಷದ ನಾಯಕರಿಗೆ ಸಂದೇಶ ರವಾನಿಸಿದ್ದಾರೆ.

ನಗರದಲ್ಲಿಂದು ಕಾಂಗ್ರಸ್ ಮುಖಂಡ ಕೆ.ಎನ್.ರಾಜಣ್ಣ ಅವರ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿ ಬಳಿಕ ಮಾತನಾಡಿಸ ಅವರು, ನಾನೀಗ ಈಗ ಜೆಡಿಎಸ್‌ ಪಕ್ಷದಲ್ಲಿದ್ದೇನೆ. ಮುಂದಿನ ಚುನಾವಣೆ ವೇಳೆಗೆ ಎಲ್ಲಿ ಯಾವ ಪಕ್ಷದಲ್ಲಿರುತ್ತೇನೆ, ಇರುವುದಿಲ್ಲವೋ ಎಂಬುದನ್ನು ಕಾದು ನೋಡೊಣ. ಬಿಜೆಪಿ ಜತೆ ಕುಮಾರಸ್ವಾಮಿ ಹೋದರೂ ನಾವು ಜೊತೆಗೆ ಇರುವುದಿಲ್ಲ ಎಂದಿದ್ದಾರೆ.

ಅಧಿಕಾರದ ಬಗ್ಗೆ ಪ್ರೀತಿ ಇರುವವರು ಮಾತ್ರ ಬಿಜೆಪಿ ಬಗ್ಗೆ ಒಲವು ಹೊಂದಿರುತ್ತಾರೆ ಎಂದು ಹೇಳುವ ಮೂಲಕ ಎಚ್.ಡಿ. ಕುಮಾರಸ್ವಾಮಿಗೆ ಅಧಿಕಾರದ ಲಾಲಸೆ ಇದೆ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ. ಆದರೆ ನನಗೆ ಬಿಜೆಪಿ ಬಗ್ಗೆ ಆಸಕ್ತಿ ಇಲ್ಲ. ಅವರು ಬಿಜೆಪಿ ಜತೆ ಹೋದರೆ ನಾನು ಪಕ್ಷದಿಂದ ದೂರವಾಗುತ್ತೇನೆ ಎಂದು ಜೆಡಿಎಸ್ ಶಾಸಕ ಹೇಳಿದ್ದಾರೆ.

ಬಿಜೆಪಿ ನಿಲುವುಗಳ ಬಗ್ಗೆ ನನ್ನ ವಿರೋಧವಿದೆ. ಮುಂದಿನ ವಿಧಾನಸಭೆ ಚುನಾವಣೆ ವೇಳೆ ನನ್ನ ಬೆಂಬಲಿಗರ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವೆ ಎನ್ನುವ ಮೂಲಕ ಜೆಡಿಎಸ್ ನಿಂದ ದೂರವಾಗುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾನು ಅಧಿಕಾರದ ಹಿಂದೆ ಹೋಗಿದ್ದರೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಆಗಿರುತ್ತಿದ್ದೆ. ನಾನು ವಾಮ ಮಾರ್ಗದಲ್ಲಿ ರಾಜಕಾರಣ ಮಾಡುವ ವ್ಯಕ್ತಿಯಲ್ಲ. ಜೆಡಿಎಸ್ ನಲ್ಲಿಯ ಕೆಲವರು ಬಿಜೆಪಿ ಜತೆ ಹೋಗುವ ಬಗ್ಗೆ ಮಾತನಾಡಿದ್ದಾರೆ. ಇನ್ನು ಕೆಲವರು ಬೇಡ ಅಂತಿದ್ದಾರೆ. ಕುಮಾರಸ್ವಾಮಿ ಅವರು ಬಿಜೆಪಿ ಜತೆ ಹೋಗುವ ನಿರ್ಧಾರವನ್ನು ನಮ್ಮದೇ ಪಕ್ಷದ ಕೆಲ ಶಾಸಕರು ವಿರೋಧಿಸಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com