ಬೆಳಗಾವಿ ಲೋಕಸಭೆ ಉಪಚುನಾವಣೆ: ಜೆಡಿಎಸ್ ನ ಅಶೋಕ್ ಪೂಜಾರಿಗೆ ಟಿಕೆಟ್ ನೀಡಲು ಕೆಲ ಕಾಂಗ್ರೆಸ್ ನಾಯಕರ ಒಲವು!

ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ತನ್ನ ಕ್ಷೇತ್ರವನ್ನು ಉಳಿಸಿಕೊಳ್ಳಲು ಬಿಜೆಪಿ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿರುವ ಬೆನ್ನಲ್ಲೆ, ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದೆ.
ಅಶೋಕ್ ಪೂಜಾರಿ
ಅಶೋಕ್ ಪೂಜಾರಿ

ಬೆಳಗಾವಿ: ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ತನ್ನ ಕ್ಷೇತ್ರವನ್ನು ಉಳಿಸಿಕೊಳ್ಳಲು ಬಿಜೆಪಿ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿರುವ ಬೆನ್ನಲ್ಲೆ, ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದೆ.

ಗೋಕಾಕ್ ಕ್ಷೇತ್ರದ ಪ್ರಮುಖ ಮುಖಂಡ ಅಶೋಕ್ ಪೂಜಾರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಟಿಕೆಟ್ ನೀಡಲು ಕಾಂಗ್ರೆಸ್ ನಾಯಕರು ಒಲವು ತೋರಿದ್ದಾರೆ ಎನ್ನಲಾಗಿದೆ. ಲಿಂಗಾಯತ ನಾಯಕರಾಗಿರುವ ಪೂಜಾರಿ ಅವರು ಕ್ಷೇತ್ರದಲ್ಲಿ ಜನಪ್ರಿಯ ನಾಯಕರಾಗಿದ್ದಾರೆ. ಈಗ ಜೆಡಿಎಸ್ ಜೊತೆಗಿರುವ ಪೂಜಾರಿ ಗೋಕಾಕ್‌ನಿಂದ ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದರು.

ಕಾಂಗ್ರೆಸ್ ನಲ್ಲಿದ್ದ ರಮೇಶ್ ಜಾರಕಿಹೊಳಿ ಅವರಿಂದ  ಅಶೋಕ್ ಪೂಜಾರಿ ಸೋಲನುಭವಿಸಿದ್ದರು. ಜಾರಕಿಹೊಳಿ ಬಿಜೆಪಿಗೆ ಸೇರಿದ ನಂತರ ಅದೇ ಸ್ಥಾನಕ್ಕಾಗಿ ನಡೆದ ಉಪಚುನಾವಣೆಯಲ್ಲಿ, ಆ ಹೊತ್ತಿಗೆ ಜೆಡಿಎಸ್ ಸೇರಿದ್ದ ಪೂಜಾರಿ ಮತ್ತೆ ಸೋತರು.

ಕಾಂಗ್ರೆಸ್ ಇನ್ನೂ ಅಶೋಕ್ ಪೂಜಾರಿಗೆ ಟಿಕೆಟ್ ನೀಡಿಲ್ಲ, ಆದರೆ  ಅವರನ್ನು ಕಣಕ್ಕಿಳಿಸಿದರೆ ಬೆಂಬಲ ನೀಡುವುದಾಗಿ ಅನೇಕ ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.

ನಾನು ಜೆಡಿಎಸ್ ನಿಷ್ಠಾವಂತ ನಾಯಕ ಮತ್ತು ಗೋಕಾಕಿನಲ್ಲಿ ದೀರ್ಘಕಾಲದವರೆಗೆ ಅಸ್ತಿತ್ವದಲ್ಲಿರುವ ಭ್ರಷ್ಟ ಮತ್ತು ಪ್ರಬಲ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಅಶೋಕ್ ಪೂಜಾರಿ ತಿಳಿಸಿದ್ದಾರೆ. ಗೋಕಾಕಿನಲ್ಲಿರುವ ವ್ಯವಸ್ಥೆಯನ್ನು ಬದಲಾಯಿಸಲು ನಾನು ಯಾವಾಗಲೂ ಹೋರಾಟ ನಡೆಸುತ್ತೇನೆ ಎಂದು ಪೂಜಾರಿ
ತಿಳಿಸಿದ್ದಾರೆ.

ನಾನು ಇನ್ನೂ ರಾಜಕೀಯದಲ್ಲಿದ್ದೇನೆ. ನಾನು ಗೋಕಾಕಿನಲ್ಲಿ ಬದಲಾವಣೆ ತರಲು ಬಯಸುತ್ತೇನೆ, ಕಾಂಗ್ರೆಸ್ ನಿಂದ ಆಫರ್ ಬಂದರೇ ಅದರ ಬಗ್ಗೆ ಗಂಭೀರವಾಗಿ ಚಿಂತಿಸುವುದಾಗಿ ತಿಳಿಸಿದ್ದಾರೆ. ಇದುವರೆಗೂ ಕಾಂಗ್ರೆಸ್ ನ ಯಾವುದೇ ನಾಯಕರು ನನ್ನನ್ನು ಸಂಪರ್ಕಿಸಿಲ್ಲ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಕಾರ್ಯಾಧ್ಯಕ್ಷ  ಸತೀಶ್ ಜಾರಕಿಹೊಳಿ ಅವರಿಗೆ ಟಿಕೆಟ್ ನೀಡಲು ಪಕ್ಷ ಯೋಜಿಸುತ್ತಿದೆ, ಆದರೆ ಕಾಂಗ್ರೆಸ್ ಪಕ್ಷಕ್ಕೆ ಸೂಕ್ತ ಅಭ್ಯರ್ಥಿ ಸಿಕ್ಕಿಲ್ಲ, ಇನ್ನೂ ಪ್ರಬಲ ಅಭ್ಯರ್ಥಿಗಾಗಿ ಶೋಧ ನಡೆಸುತ್ತಿದೆ.  ಬಿಜೆಪಿ ವಿರುದ್ದ ಪ್ರಬಲ ಗೆಲ್ಲುವ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com