ಶೀಘ್ರವೇ ಆಪರೇಷನ್ ಕಮಲ ಕುರಿತು ಪುಸ್ತಕ: ಬಿಜೆಪಿ ನಾಯಕರಿಗೆ ಎಚ್. ವಿಶ್ವನಾಥ್ ಟಾಂಗ್

ಮಾಜಿ ಸಚಿವ ಅಡಗೂರು ಎಚ್‌.ವಿಶ್ವನಾಥ್‌ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಪತನ, ಬಿಜೆಪಿ ಸರ್ಕಾರ ರಚನೆಗಾಗಿ ನಡೆದ “ಆಪರೇಷನ್‌ ಕಮಲ’ ಕುರಿತು ಪುಸ್ತಕ ಹೊರ ತರುವುದಾಗಿ ಹೊಸ ಬಾಂಬ್‌ ಸಿಡಿಸಿದ್ದಾರೆ.
ಎಚ್.ವಿಶ್ವನಾಥ್
ಎಚ್.ವಿಶ್ವನಾಥ್

ಮೈಸೂರು:  ಉಪ ಚುನಾವಣೆಯಲ್ಲಿ ಸೋತವರಿಗೆ ಮಂತ್ರಿಗಿರಿ ಇಲ್ಲ ಎಂಬ ಮಾತುಗಳಿಂದ ಸಿಟ್ಟಿಗೆದ್ದಿರುವ ಮಾಜಿ ಸಚಿವ ಅಡಗೂರು ಎಚ್‌.ವಿಶ್ವನಾಥ್‌ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಪತನ, ಬಿಜೆಪಿ ಸರ್ಕಾರ ರಚನೆಗಾಗಿ ನಡೆದ “ಆಪರೇಷನ್‌ ಕಮಲ’ ಕುರಿತು ಪುಸ್ತಕ ಹೊರ ತರುವುದಾಗಿ ಹೊಸ ಬಾಂಬ್‌ ಸಿಡಿಸಿದ್ದಾರೆ.

ಮಂತ್ರಿಮಂಡಲ ವಿಸ್ತರಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮನ್ನು ಸಹ ಪರಿಗಣಿಸುತ್ತಾರೆ ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ಹಳ್ಳಿಹಕ್ಕಿ ಹಾಡು’ ಪುಸ್ತಕ ಬರೆದು ಹಲವು ರಾಜಕೀಯ ನಾಯಕರ ಬಂಡವಾಳ ಬಯಲು ಮಾಡಿದ್ದ ವಿಶ್ವನಾಥ್‌, ಸಂಪುಟ ವಿಸ್ತರಣೆಯಲ್ಲಿ ತಮಗೆ ಸ್ಥಾನ ಸಿಗದಿದ್ದರೆ ಆಪರೇಷನ್‌ ಕಮಲದ ಬಂಡವಾಳ ಬಯಲು ಮಾಡುವ ಒತ್ತಡ ತಂತ್ರ ಪ್ರಯೋಗಿಸಿದ್ದಾರೆ.

ಇದೇ ಕಾಲಕ್ಕೆಆಪರೇಷನ್ ಕಮಲ ಕಾರ್ಯಾಚರಣೆ ಕುರಿತು ಪುಸ್ತಕ ಬರೆಯುತ್ತಿರುವುದಾಗಿಯೂ ವಿಶ್ವನಾಥ್ ಹೇಳುವ ಮೂಲಕ ಮುಂದಿನ ರಾಜಕೀಯ ಬೆಳವಣಿಗೆಗಳು ಕುತೂಹಲಕರಾಗಿರುತ್ತವೆ ಎನ್ನುವ ಸಂಕೇತ ನೀಡಿದ್ದಾರೆ.

, ರಾಜ್ಯದಲ್ಲಿ ಹದಿನಾಲ್ಕು ತಿಂಗಳ ಜೆಡಿಎಸ್‌-ಕಾಂಗ್ರೆ ಸ್‌ ಸಮ್ಮಿಶ್ರ ಸರ್ಕಾರದ ಪತನಕ್ಕೆ ಏನೆಲ್ಲ ನಡೆಯಿತು, ಆಪರೇಷನ್‌ ಕಮಲದ ಹಿಂದೆ ಯಾರ್ಯಾರು ಇದ್ದರು, ಮುಂಬೈ, ಕೋಲ್ಕತಾದಲ್ಲಿ ಏನೇನು ನಡೆಯಿತು, 17 ಶಾಸಕರ ರಾಜೀನಾಮೆ ಪ್ರಸಂಗ, ಬಿಜೆಪಿ ಸರ್ಕಾರ ರಚನೆ, ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದು,

ಉಪ ಚುನಾವಣೆ, ಬಿಜೆಪಿ ನಾಯಕರ ಜತೆಗೆ ಏನೇನು ಮಾತುಕತೆ ನಡೆಯಿತು ಎಂಬುದನ್ನೆಲ್ಲ ದಾಖಲಿಸಿ ಪುಸ್ತಕ ರೂಪದಲ್ಲಿ ಹೊರ ತಂದು ಜನತೆಗೆ ತಿಳಿಸುತ್ತೇನೆ. ಈಗಾಗಲೇ ಎಲ್ಲ ಮಾಹಿತಿಗಳ ಟಿಪ್ಪಣಿ ಬರೆದಿಟ್ಟುಕೊಂಡಿದ್ದೇನೆ. ಅದಕ್ಕೆ ಅಂತಿಮ ರೂಪ ಕೊಟ್ಟು, ಪುಸ್ತಕ ಹೊರತರುವುದಷ್ಟೇ ಬಾಕಿ ಇದೆ ಎಂದರು. “ಆಪರೇಷನ್‌ ಕಮಲ’ದಲ್ಲಿ ಬಿಜೆಪಿಯವರು ಮಾತ್ರ ಅಲ್ಲ. ಕಾಂಗ್ರೆಸ್‌ ನಾಯಕರೂ ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com