ಉಪ ಚುನಾವಣೆಯಲ್ಲಿ ಗೆದ್ದ 10 ಮಂದಿಗೆ ಸಚಿವ ಸ್ಥಾನ: ಯೋಗೇಶ್ವರ್ , ಕತ್ತಿ, ಲಿಂಬಾವಳಿ ಪರಿಸ್ಥಿತಿ ಅನಿಶ್ಚಿತ

ರಾಜ್ಯ ಮಂತ್ರಿ ಮಂಡಲ ಗುರುವಾರ ವಿಸ್ತರಣೆಯಾಗಲಿದ್ದು, ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಹತ್ತು ಮಂದಿ ಸಂಪುಟಕ್ಕೆ ಸೇರುವುದು ಖಚಿತವಾಗಿದ್ದು, ಉಮೇಶ್ ಕತ್ತಿ, ಸಿ.ಪಿ. ಯೋಗೇಶ್ವರ್ ಮತ್ತು ಅರವಿಂದ ಲಿಂಬಾವಳಿ ಸಂಪುಟ ಸೇರುವ ಸಾಧ್ಯತೆಗಳು ಕ್ಷೀಣಿಸಿವೆ
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ

ಬೆಂಗಳೂರು: ರಾಜ್ಯ ಮಂತ್ರಿ ಮಂಡಲ ಗುರುವಾರ ವಿಸ್ತರಣೆಯಾಗಲಿದ್ದು, ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಹತ್ತು ಮಂದಿ ಸಂಪುಟಕ್ಕೆ ಸೇರುವುದು ಖಚಿತವಾಗಿದ್ದು, ಉಮೇಶ್ ಕತ್ತಿ, ಸಿ.ಪಿ. ಯೋಗೇಶ್ವರ್ ಮತ್ತು ಅರವಿಂದ ಲಿಂಬಾವಳಿ ಸಂಪುಟ ಸೇರುವ ಸಾಧ್ಯತೆಗಳು ಕ್ಷೀಣಿಸಿವೆ

ಸಂಪುಟಕ್ಕೆ ಸೇರುವವರಲ್ಲಿ ಚುನಾವಣೆಯಲ್ಲಿ ಗೆದ್ದಿರುವ ಹತ್ತು ಮಂದಿ ಪಟ್ಟಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜಭವನಕ್ಕೆ ರವಾನಿಸಿದ್ದು, ಉಳಿದಂತೆ ಇಬ್ಬರು, ಇಲ್ಲವೆ ಮೂವರು ಅಥವಾ ಐದು ಮಂದಿ ಮೂಲ ಬಿಜೆಪಿಯವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ವರಿಷ್ಠರು ಸೂಕ್ತ ಕಾರ್ಯತಂತ್ರ ರೂಪಿಸುತ್ತಿದ್ದು, ಅಂತಿಮ ಕ್ಷಣದಲ್ಲಿ ಯಾವುದೇ ಬದಲಾವಣೆಗಳು ಆಗುವ ಸಾಧ್ಯತೆಯಿದೆ

 ಹಾಗೊಂದು ವೇಳೆ ಕೊನೆ ಕ್ಷಣದಲ್ಲಿ ಬದಲಾವಣೆಗಳಾದರೆ ಕರಾವಳಿ ಮತ್ತು ಹೈದರಾಬಾದ್ ಕರ್ನಾಟಕ್ಕೆ ಪ್ರಾತಿನಿಧ್ಯ ನೀಡಿ ಸಮಾಧಾನಪಡಿಸುವ ಸಾಧ್ಯತೆಗಳಿವೆ.

ನಾಳೆ ರಮೇಶ್ ಜಾರಕಿಹೊಳಿ, ಎಸ್ . ಟಿ. ಸೋಮಶೇಖರ್, ಕೆ. ಸುಧಾಕರ್, ಬಿ. ಸಿ. ಪಾಟೀಲ್, ಶಿವರಾಮ್ ಹೆಬ್ಬಾರ್, ಶ್ರೀಮಂತ ಪಾಟೀಲ್, ಬಸವರಾಜ್ ಬೈರತಿ, ಗೋಪಾಲಯ್ಯ, ನಾರಾಯಣಗೌಡ, ಆನಂದ್ ಸಿಂಗ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ವರಿಷ್ಠರ ನಿರ್ದೇಶನದ ಮೇರೆಗೆ ಕೇವಲ 10 ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ದೆಹಲಿಯನ್ನು ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಇತರರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಉಮೇಶ್ ಕತ್ತಿ ಸಂಪುಟ ಸೇರುವುದರಲ್ಲಿ ಯಾವುದೇ ಅನುಮಾನ ಇಲ್ಲ. ಅವರಿಗೆ ಸಚಿವ ಸ್ಥಾನ ನೀಡಲಾಗುವುದು ಆದರೆ, ಕ್ಯಾಬಿನೆಟ್ ಸ್ಥಾನ ದೊರೆಯುವ ಸಾಧ್ಯತೆ ಕಷ್ಟಕರವಾಗಿದೆ. ಅವರಿಗೆ ದೊಡ್ಡ ಜವಾಬ್ದಾರಿ ನೀಡಲಾಗುವುದು, ಈ ಬಗ್ಗೆ ಅವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಅವರ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com