ಸಂಪುಟದಲ್ಲಿ ಸ್ಥಾನ ಪಡೆಯಲು ಸೋತವರ ಸರ್ಕಸ್ : ಮಠದ ಸ್ವಾಮೀಜಿಗಳಿಗೆ ದುಂಬಾಲು! 

ಧನುರ್ ಮಾಸ ಮುಗಿಯುತ್ತಾ ಬರುತ್ತಿದ್ದು, ಸಂಪುಟ ವಿಸ್ತರಣೆಗೆ ಸಮಯ ಹತ್ತರ ಬರುತ್ತಿದ್ದಂತೆ, ಗೆದ್ದ ಹಾಗೂ ಸೋತಿರುವ ಬಂಡಾಯ ಶಾಸಕರು ಸಂಪುಟದಲ್ಲಿ ಸ್ಥಾನ ಪಡೆಯಲು ಲಾಬಿ ಆರಂಭಿಸಿದ್ದಾರೆ. 
ನಾಗರಾಜ್ ಮತ್ತು ಎಚ್.ವಿಶ್ವನಾಥ್
ನಾಗರಾಜ್ ಮತ್ತು ಎಚ್.ವಿಶ್ವನಾಥ್

ಮೈಸೂರು: ಧನುರ್ ಮಾಸ ಮುಗಿಯುತ್ತಾ ಬರುತ್ತಿದ್ದು, ಸಂಪುಟ ವಿಸ್ತರಣೆಗೆ ಸಮಯ ಹತ್ತರ ಬರುತ್ತಿದ್ದಂತೆ, ಗೆದ್ದ ಹಾಗೂ ಸೋತಿರುವ ಬಂಡಾಯ ಶಾಸಕರು ಸಂಪುಟದಲ್ಲಿ ಸ್ಥಾನ ಪಡೆಯಲು ಲಾಬಿ ಆರಂಭಿಸಿದ್ದಾರೆ. 

ಮಾಜಿ ಶಾಸಕರುಗಳಾದ ಎಚ್. ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಸಂಪುಟದಲ್ಲಿ ಸ್ಥಾನ ಪಡೆಯಲಬೇಕೆಂದು ಹಠ ತೊಟ್ಟಿದ್ದಾರೆ  ಉಪ ಚುನಾವಣೆಗೊ ಮುನ್ನ ಸಿಎಂ ಯಡಿಯೂರಪ್ಪ ಕೊಟ್ಟಿದ್ದ ಮಾತಿನಂತೆ ಅವರಿಗೆಲ್ಲಾ ಸಚಿವ ಸ್ಥಾನ ಕೊಡಬೇಕಿದೆ. 

ಗೆದ್ದವರ ಜೊತೆ ಸೋತವರು ಕೂಡ ಸ್ಥಾನ ಪಡೆಯಲು  ಮಠ ಮಾನ್ಯಗಳಿಗೆ ತೆರಳಿ ತಮಗೆ ಸಚಿವ ಸ್ಥಾನ ಕೊಡಿಸು ಸಿಎಂಗೆ ಶಿಫಾರಸು ಮಾಡಲು ಸ್ವಾಮೀಜಿಗಳಿಗೆ ದುಂಬಾಲು ಬೀಳುತ್ತಿದ್ದಾರೆ.  ಜೊತೆಗೆ ಆರ್ ಎಸ್ ಎಸ್ ಮುಖಂಡರ ಮೇಲು ಒತ್ತಡ ಹೇರಲಾಗುತ್ತಿದೆ 

ಸೋತ ಶಾಸಕರು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ,ಎಸ್  ಸಂತೋಷ್ ಅವರ ಜೊತೆ ಸಂಪುರ್ಕ ಹೊಂದಿದ್ದಾರೆ.  ಬಿಜೆಪಿ ಸಂಸದ ಬಚ್ಚೇಗೌಡ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಜಿ ಶಾಸಕ ಎಂಟಿಬಿ ನಾಗರಾಜ್  ಒತ್ತಾಯಿಸಿದ್ದಾರೆ.

ಎಸ್.ಟಿ ಸೋಮಶೇಖರ್, ಬೈರತಿ ಬಸವರಾಜ್, ಇಬ್ಬರು ಸೋತ ಶಾಸಕರಿಗೆ ಸ್ಥಾನ ನೀಡುವಂತೆ ಸಿಎಂ ಬಳಿ ಬೇಡಿಕೆ ಇಟ್ಟಿದ್ದಾರೆ. ಸಮ್ಮಿಶ್ರ ಸರ್ಕಾರಿ ಪತನಗೊಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುವ ಮೊದಲು 13 ಶಾಸಕರು ರಾಜಿನಾಮೆ ನೀಡುವ ಮುನ್ನ ಬಿಜೆಪಿ ನಾಯಕ ಎಸ್ ಎಂ ಕೃಷ್ಣ ಅವರ ಜೊತೆ ಚರ್ಚಿಸಿದ್ದು, ಆಗ ನೀಡಿದ ಭರವಸೆಯಂತೆ ಈಗ ಸಂಪುಟದಲ್ಲಿ ಸ್ಥಾನ ನೀಡಲೇ ಬೇಕಾಗಿದೆ,.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com