ಹೊಸದಾಗಿ ಡಿಸಿಎಂ ಹುದ್ದೆ‌ ಇಲ್ಲ: ಯಡಿಯೂರಪ್ಪ ಸ್ಪಷ್ಟನೆ, ರಮೇಶ್ ಜಾರಕಿಹೊಳಿ, ರಾಮುಲುಗೆ ನಿರಾಸೆ

ಈಗಿರುವ ಉಪ ಮುಖ್ಯಮಂತ್ರಿಗಳೇ ಸಂಪುಟ ವಿಸ್ತರಣೆ ಬಳಿಕವೂ ಮುಂದುವರೆಯಲಿದ್ದು, ಹೊಸದಾಗಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವುದಿಲ್ಲ. ಲಕ್ಷ್ಮಣ್ ಸವದಿ ಉಪಮುಖ್ಯಮಂತ್ರಿಯಾಗಿಯೇ ಇರುತ್ತಾರೆ...
ಬೆಳಗಾವಿಯಲ್ಲಿ ಸಿಎಂ
ಬೆಳಗಾವಿಯಲ್ಲಿ ಸಿಎಂ

ಬೆಳಗಾವಿ: ಈಗಿರುವ ಉಪ ಮುಖ್ಯಮಂತ್ರಿಗಳೇ ಸಂಪುಟ ವಿಸ್ತರಣೆ ಬಳಿಕವೂ ಮುಂದುವರೆಯಲಿದ್ದು, ಹೊಸದಾಗಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವುದಿಲ್ಲ. ಲಕ್ಷ್ಮಣ್ ಸವದಿ ಉಪಮುಖ್ಯಮಂತ್ರಿಯಾಗಿಯೇ ಇರುತ್ತಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಸ್ಪಷ್ಟಪಡಿಸಿದ್ದಾರೆ. ಸಿಎಂ ಹೇಳಿಕೆಯಿಂದ ಡಿಸಿಎಂ ಆಕಾಂಕ್ಷಿಯಾಗಿದ್ದ ರಮೇಶ್ ಜಾರಕಿಹೊಳಿ ಹಾಗೂ ಸಚಿವ ಬಿ ಶ್ರೀರಾಮುಲು ಅವರಿಗೆ ತೀವ್ರ ನಿರಾಶೆಯಾಗಿದೆ.

ಇಂದು ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಕಮಾಂಡ್ ಕಂಟ್ರೋಲ್ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಉಪ ಚುನಾವಣೆಯಲ್ಲಿ ಬೆಳಗಾವಿಯಿಂದ ಗೆಲುವು ಸಾಧಿಸಿದ ಉಮೇಶ್ ಕತ್ತಿ ಸೇರಿದಂತೆ ಎಲ್ಲರೂ ಮಂತ್ರಿಯಾಗುತ್ತಾರೆ. ಇನ್ನೆರಡು ದಿನಗಳಲ್ಲಿ ಸಂಪುಟ ವಿಸ್ತರಣೆಯಾಗುವುದು ಖಚಿತ ಎಂದರು.

ನಾನು ನಾಳೆ ಮಂತ್ರಿ ಮಂಡಲ ವಿಸ್ತರಣೆ ಸಂಬಂಧ ಚರ್ಚಿಸಲು ಪಕ್ಷದ ವರಿಷ್ಠ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ದೆಹಲಿಗೆ ತೆರಳುತ್ತಿರುವುದಾಗಿ ಸಿಎಂ ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆ ಕುರಿತು ದೆಹಲಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಪ್ರಮುಖರೊಂದಿಗೆ ಚರ್ಚಿಸುತ್ತೇನೆ‌. ಎರಡು ಮೂರು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಮಂತ್ರಿಮಂಡಲ ವಿಸ್ತರಣೆಯಾಗಯವುದಿಲ್ಲ ಎಂಬ ಸುದ್ದಿಗಳೆಲ್ಲ ಊಹಾಪೋಹ ಎಂದರು.

ಸಚಿವ ಸಂಪುಟದಿಂದ ಯಾರನ್ನಾದರೂ ಕೈ ಬಿಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‌ಈ ಬಗ್ಗೆ ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಿದ ಬಳಿಕ ಎಲ್ಲವು ತೀರ್ಮಾನವಾಗಲಿದೆ ಎಂದರು.

ಮುಖ್ಯಮಂತ್ರಿ ಬಳಿ ಪವರ್ ಇಲ್ಲ ಎಂಬ ವಿಪಕ್ಷ ಸಿದ್ದರಾಮಯ್ಯ ಹೇಳಿಕೆಗೆ ಕಿಡಿಕಾರಿದ ಯಡಿಯೂರಪ್ಪ, ಹೌದು ಸಿದ್ದರಾಮಯ್ಯ ಬಳಿ ಮಾತ್ರ ಪವರ್ ಇದೆ ಎಂದು ವ್ಯಂಗ್ಯವಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com