ಮೈತ್ರಿ ಸರ್ಕಾರ ಪತನಕ್ಕೆ  ಕಾಂಗ್ರೆಸ್ ನಾಯಕರ ಅಸಹಕಾರ ಕಾರಣ: ಬಹಿರಂಗ ಚರ್ಚೆಗೆ ಕುಮಾರಸ್ವಾಮಿ ಆಹ್ವಾನ

ಮೈತ್ರಿ ಸರ್ಕಾರದಲ್ಲಿ ಸ್ವಂತ ತೀರ್ಮಾನ ಕೈಗೊಳ್ಳಲು ಅತಂತ್ರ ಸ್ಥಿತಿಯಲ್ಲಿದ್ದು, ಕಾಂಗ್ರೆಸ್‌ನ ಒಂದು ಗುಂಪಿನಿಂದ ಸರಿಯಾಗಿ ಸಹಕಾರ ಸಿಗುತ್ತಿರಲಿಲ್ಲ. ಕೆಲ ನಾಯಕರ ಒತ್ತಡಕ್ಕೆ ಮಣಿದು ಕೆಲಸ ಮಾಡುವ ಪರಿಸ್ಥಿತಿ ಇತ್ತು.
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಸ್ವಂತ ತೀರ್ಮಾನ ಕೈಗೊಳ್ಳಲು ಅತಂತ್ರ ಸ್ಥಿತಿಯಲ್ಲಿದ್ದು, ಕಾಂಗ್ರೆಸ್‌ನ ಒಂದು ಗುಂಪಿನಿಂದ ಸರಿಯಾಗಿ ಸಹಕಾರ ಸಿಗುತ್ತಿರಲಿಲ್ಲ. ಕೆಲ ನಾಯಕರ ಒತ್ತಡಕ್ಕೆ ಮಣಿದು ಕೆಲಸ ಮಾಡುವ ಪರಿಸ್ಥಿತಿ ಇತ್ತು. ಈ ಬಗ್ಗೆ ಕಾಂಗ್ರೆಸ್ ಜತೆ ಯಾವುದೇ ವೇದಿಕೆಯಲ್ಲೂ ಚರ್ಚೆಗೂ ಸಿದ್ದ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಪಕ್ಷದ ಕಾರ್ಯಕರ್ತರು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಲು ಸಾಧ್ಯವಾಗಿಲ್ಲ. ನಿಗಮ-ಮಂಡಳಿಗಳ ನೇಮಕ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಅನುಮತಿ ಬೇಕಿತ್ತು.

ಕಾಂಗ್ರೆಸಿಗರು ತಮಗೆ ಬೇಕಾದ ನಿಗಮ-ಮಂಡಳಿಗಳನ್ನು ತೆಗೆದುಕೊಂಡು ಹೆಚ್ಚಿನ ಮಹತ್ವ ಇಲ್ಲದ ನಿಗಮ-ಮಂಡಳಿಗಳನ್ನು ನೀಡುತ್ತಿದ್ದರು.ಸ್ವತಂತ್ರವಾಗಿ ತೀರ್ಮಾನ ಕೈಗೊಳ್ಳದೆ ಅತಂತ್ರದಲ್ಲಿ ಇದ್ದ ಕಾರಣ ಕಾರ್ಯಕರ್ತರ ದುಡಿಮೆಗೆ ತಕ್ಕಂತೆ ಸ್ಥಾನ ನೀಡಲು ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com