ಬಿಜೆಪಿ ಸಂಭವನೀಯರ ಪಟ್ಟಿಯಲ್ಲಿ 'ಆಯಾ ರಾಮ್' ಗಳ ಹೆಸರು: ವಿರೋಧಿಗಳಿಗೆ ಸಿಎಂ ಬಿಎಸ್ ವೈ ಸಂದೇಶವೇನು?

ಕಳೆದ ವರ್ಷ ಜೆಡಿಎಸ್-ಕಾಂಗ್ರೆಸ್ ತೊರೆದು ಬಿಜೆಪಿ ಸರ್ಕಾರ ರಚನೆಯಾಗಲು ಕಾರಣರಾದ ಶಾಸಕರ ಪೈಕಿ ಮೂವರ ಹೆಸರನ್ನು ಪರಿಷತ್ ಅಭ್ಯರ್ಥಿಗಳ ಪಟ್ಟಿಗೆ ಸೇರಿಸಲಾಗಿದೆ.
ಯಡಿಯೂರಪ್ಪ
ಯಡಿಯೂರಪ್ಪ

ಮೈಸೂರು: ಕಳೆದ ವರ್ಷ ಜೆಡಿಎಸ್-ಕಾಂಗ್ರೆಸ್ ತೊರೆದು ಬಿಜೆಪಿ ಸರ್ಕಾರ ರಚನೆಯಾಗಲು ಕಾರಣರಾದ ಶಾಸಕರ ಪೈಕಿ ಮೂವರ ಹೆಸರನ್ನು ಪರಿಷತ್ ಅಭ್ಯರ್ಥಿಗಳ ಪಟ್ಟಿಗೆ ಸೇರಿಸಲಾಗಿದೆ.

ಈ ಮೂವರು ಕುರುಬ ಸಮುದಾಯಕ್ಕೆ ಸೇರಿದವರಾಗಿರುವುದು ಮತ್ತೊಂದು ವಿಶೇಷ.  ಎಚ್ ವಿಶ್ವನಾಥ್, ಎಂಟಿಬಿ ನಾಗರಾಜ್ ಮತ್ತು ಆರ್ ಶಂಕರ್ ಅವರಿಗೆ ಪರಿಷತ್ ಸ್ಥಾನ ನೀಡುವುದಾಗಿ ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದರು. ಯಡಿಯುರಪ್ಪ ಅವರು ಪಕ್ಷದಲ್ಲಿನ ಎಲ್ಲ ಪ್ರತಿರೋಧ ಮತ್ತು ಗೊಣಗಾಟಗಳನ್ನು ಬದಿಗೊತ್ತಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಂಡಾಯ ಶಾಸಕರಿಗೆ ನೀಡಿದ ಭರವಸೆಯ ಬಗ್ಗೆ ಕೋರ್ ಕಮಿಟಿಗೆ ತಿಳಿಸಿದ್ದಾರೆ.

ಸಿಎಂ ಯಡಿಯೂರಪ್ಪ ಭರವಸೆಯ ಮೇಲೆ ಈ ಮೂವರು ನಂಬಿಕೆ ಇಟ್ಟಿದ್ದು ಕೊಟ್ಟ ಮಾತು ಉಳಿಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಪಕ್ಷಕ್ಕೆ ಬಂದ ಎಲ್ಲಾ 15ಶಾಸಕರುಗಳಿಗೆ ಸ್ಥಾನ ನೀಡುವುದು ಸುಲಭದ ವಿಷಯವಲ್ಲ, ಪಕ್ಷದ ಟಿಕೆಟ್ ಮತ್ತು ಸಚಿವ ಸ್ಥಾನ ನೀಡಲು ಹಲವು ಅಡೆತಡೆಗಳಿವೆ, 

ಯಡಿಯೂರಪ್ಪ 10 ಮಂದಿಯನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಇದು ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಿದೆ. ಸಂಭವನೀಯ ಪರಿಷತ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಮೂರು ಮಾಜಿ ಶಾಸಕರನ್ನು ಸೇರಿಸಿ. ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವವರೆಂದು ಸಾಬೀತುಪಡಿಸಿದ್ದಾರೆ.

ವಿಶ್ವನಾಥ್ ಅವರಿಗೆ ಸ್ಥಾನ ನೀಡಲು ಪಕ್ಷದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು, ಆದರೆ ಯಡಿಯೂರಪ್ಪ ಅವರೊಬ್ಬರೇ ಸದ್ಯಕ್ಕೆ ಅವರಿಗಿರುವ ಒಂದೇ ಒಂದು ಆಸರೆ, ಎಂದು ಬಿಜಿಪಿ ಎಂಎಲ್ ಸಿ ಟಿಕೆಟ್ ಆಕಾಂಕ್ಷಿಯೊಬ್ಬರು ಹೇಳಿದ್ದಾರೆ.

ವಿಶ್ವನಾಥ್ ಮತ್ತು ಇತರರಿಗೆ ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದಾರೆ ಮತ್ತು ಅದರಂತೆ ನಡೆದುಕೊಳ್ಳಲಿದ್ದಾರೆ ಎಂದು ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ. ಆದರೆ ಡಿಸಿಎಂ ಅಶ್ವತ್ಥ ನಾರಾಯಣ, ಕೇವಲ ಆರ್.ಶಂಕರ್ ಅವರಿಗೆ ಮಾತ್ರ ಪರಿಷತ್ ಟಿಕೆಟ್ ಎಂದು ಹೇಳಿದ್ದಾರೆ,

ಆದರೆ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಎಸ್ ಟಿ ಸೋಮಶೇಖರ್ ಡಿಸಿಎಂ  ನಿರ್ಧಾರ ಕೈಗೊಳ್ಳುವ ಸಮಿತಿ ಸದಸ್ಯರಲ್ಲ ಎಂದು ಹೇಳಿದ್ದಾರೆ. ಈ ಮೂರು ಹೆಸರುಗಳ ಸೇರ್ಪಡೆಯಿಂದ ಯಡಿಯೂರಪ್ಪ ನಾಯಕತ್ವದ ಮೇಲೆ ನಂಬಿಕೆ ಇಡುವಂತಾಗಿದೆ, 

ತಾವು ಇನ್ನೂ ರಾಜ್ಯದ ಪ್ರಶ್ನಾತೀತ ನಾಯಕ ಸ್ಥಿರ ಸರ್ಕಾರ ನೀಡಲು ತಾವು ಬಯಸುತ್ತಿರುವ ಸಂದೇಶವನ್ನು ಸಿಎಂ ರವಾನಿಸಿದ್ದಾರೆ, ಆದರೆ ಬಿಜೆಪಿ ಹೈಕಮಾಂಡ್ ಈ ಹೆಸರುಗಳಿಗೆ ಗ್ರೀನ್ ಸಿಗ್ನಲ್ ನೀಡುವುದೋ ಅಥವಾ ಬಿಎಸ್ ವೈ ಸರ್ಕಾರದ ಮೇಲೆ ಹಿಡಿತ ಹೊಂದುವುದೋ ಎಂಬುದನ್ನು ನೋಡಬೇಕು ಎಂದು  ರಾಜಕೀಯ ತಜ್ಞ ಹರೀಶ್ ರಾಮಸ್ವಾಮಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com