ಮೋದಿ ಆಡಳಿತದಲ್ಲಿ ರಿಸರ್ವ್ ಬ್ಯಾಂಕ್ ಹಣಕಾಸು ಸಚಿವಾಲಯದ ಇಲಾಖೆಯಾಗಿ ಮಾರ್ಪಟ್ಟಿದೆ: ಮಾಜಿ ಪ್ರಧಾನಿ ದೇವೇಗೌಡ ವಾಗ್ದಾಳಿ

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರಿಸರ್ವ್ ಬ್ಯಾಂಕ್ ಅನ್ನು 'ಅಸ್ಥಿರಗೊಳಿಸುತ್ತಿದೆ' ದರ ಸ್ವಾಯತ್ತತೆ ಮೇಲೆ ಆಕ್ರಮಣ ನಡೆಸಿ ವ್ಯವಸ್ಥೆಯನ್ನು 'ಸಡಿಲಗೊಳಿಸಿದೆ'.ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆರೋಪಿಸಿದ್ದಾರೆ. 
ಎಚ್.ಡಿ ದೇವೇಗೌಡ
ಎಚ್.ಡಿ ದೇವೇಗೌಡ

ಹುಬ್ಬಳ್ಳಿ:  ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರಿಸರ್ವ್ ಬ್ಯಾಂಕ್ ಅನ್ನು 'ಅಸ್ಥಿರಗೊಳಿಸುತ್ತಿದೆ' ದರ ಸ್ವಾಯತ್ತತೆ ಮೇಲೆ ಆಕ್ರಮಣ ನಡೆಸಿ ವ್ಯವಸ್ಥೆಯನ್ನು 'ಸಡಿಲಗೊಳಿಸಿದೆ'.ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆರೋಪಿಸಿದ್ದಾರೆ.

ಯೆಸ್ ಬ್ಯಾಂಕ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಾತ್ಯಾತೀತ ಜನತಾದಳ ಮುಖ್ಯಸ್ಥ ದೇವೇಗೌಡ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ವಾಜಪೇಯಿ ಆರು ವರ್ಷಗಳ ಕಾಲ ಪ್ರಧಾನ ಮಂತ್ರಿಯಾಗಿದ್ದರು, ಹತ್ತು ವರ್ಷಗಳ ಕಾಲ ಮನಮೋಹನ್ ಸಿಂಗ್ ಪ್ರಧಾನಿ, ಇನ್ನು ನರೇಂದ್ರ ಮೋದಿ ಪ್ರಧಾನಿಯಾಗಿ ಇದು ಆರನೇ ವರ್ಷ ಅವರ (ಮೋದಿಯವರ) ಅವಧಿಯಲ್ಲಿ ರಿಸರ್ವ್ ಬ್ಯಾಂಕ್ ಹಣಕಾಸು ಸಚಿವಾಲಯದ ಇಲಾಖೆಯಂತೆ ಮಾರ್ಪಟ್ಟಿದೆ. " ದೇವೇಗೌಡ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮೋದಿ ನಾಯಕತ್ವದಲ್ಲಿ ಆರ್‌ಬಿಐ ಅನ್ನು ಅಸ್ಥಿರಗೊಳಿಸಲಾಯಿತು, ಅದರ ಸ್ವಾಯತ್ತತೆಯ ಮೇಲೆ ದಾಳಿ ಮಾಡಲಾಗಿದೆ.ಹಣಕಾಸು ಸಲಹೆಗಾರರ ​​ನಿಷ್ಪಕ್ಷಪಾತ ಮತ್ತು ಪ್ರಾಮಾಣಿಕ ಸಲಹೆಯನ್ನು ಕಾರ್ಯಗತಗೊಳಿಸದೆ ನಿರ್ಲಕ್ಷಿಸಲಾಗಿದೆ. ರಿಸರ್ವ್ ಬ್ಯಾಂಕ್ ಎಲ್ಲಾ ಬ್ಯಾಂಕುಗಳಿಗೆ ನಿಯಂತ್ರಣ ಸ<ಸ್ಥೆಯಾಗಿದೆ. ಅಂತಹಾ ಸಂಸ್ಥೆಯ ವ್ಯವಸ್ಥೆಯನ್ನು ಸಡಿಲಗೊಳಿಸಲಾಗಿದೆ" ಎಂದು ಅವರು ಹೇಳಿದರು.

ನಗದು ಬಿಕ್ಕಟ್ಟಿನಲ್ಲಿರುವ ಯೆಸ್ ಬ್ಯಾಂಕಿನ ಆಡಳಿತ ಮಂಡಳಿಯನ್ನು ಪುನರಚಿಸಿರುವ ಆರ್‌ಬಿಐ ಖಾತೆದಾರರು ಬ್ಯಾಂಕಿನಲ್ಲಿ ಠೇವಣಿ ಹಿಂಪಡೆಯುವಿಕೆಯನ್ನು ಒಂದು ಖಾತೆಗೆ ಒಂದು ತಿಂಗಳಿಗೆ 50,000 ರೂ.ಗೆ ಮಿತಿಗೊಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com