ಕೊರೋನಾ ವೈರಸ್ ಎಚ್ಚರಿಕೆಯ ಕಾಲರ್ ಟ್ಯೂನ್ 'ಕಿರಿಕಿರಿ' ಎಂದು ಡಿಕೆ ಶಿವಕುಮಾರ್ ಲೇವಡಿ!

ಭಾರತದಲ್ಲಿ ಮಾರಣಾಂತಿಕ ಕೊರೋನಾ ವೈರಸ್ ಭೀತಿ ಎದುರಾಗಿದ್ದು ಈ ಬಗ್ಗೆ ಕೇಂದ್ರ ಸರ್ಕಾರ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು ಕೊರೋನಾ ಬಗ್ಗೆ ಜಾಗೃತಿ ಮೂಡಿಸಲು ಮೊಬೈಲ್ ಗಳ ಕಾಲರ್ ಟ್ಯೂನ್ ಗಳ ಮೂಲಕ ಎಚ್ಚರಿಕೆ ಸಂದೇಶ ನೀಡಲಾಗುತ್ತಿದೆ.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಬೆಂಗಳೂರು: ಭಾರತದಲ್ಲಿ ಮಾರಣಾಂತಿಕ ಕೊರೋನಾ ವೈರಸ್ ಭೀತಿ ಎದುರಾಗಿದ್ದು ಈ ಬಗ್ಗೆ ಕೇಂದ್ರ ಸರ್ಕಾರ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು ಕೊರೋನಾ ಬಗ್ಗೆ ಜಾಗೃತಿ ಮೂಡಿಸಲು ಮೊಬೈಲ್ ಗಳ ಕಾಲರ್ ಟ್ಯೂನ್ ಗಳ ಮೂಲಕ ಎಚ್ಚರಿಕೆ ಸಂದೇಶ ನೀಡಲಾಗುತ್ತಿದೆ. ಆದರೆ ಈ ಬಗ್ಗೆ ಮಾಜಿ ಸಚಿವ ಡಿಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ. 

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಲ್ಲ ದೂರವಾಣಿ ಕರೆಗಳ ಆರಂಭದಲ್ಲಿ ಕೊರೋನಾ ವೈರಸ್ ಬಗ್ಗೆ ನೀಡುತ್ತಿರುವ ಮುನ್ನೆಚ್ಚರಿಕಾ ಸಂದೇಶವನ್ನು ನೋಡಿದರೆ ಎಮ್ಮೆಗೆ ಜ್ವರ ಬಂದರೆ ಎತ್ತಿಗೆ ಬರೆ ಹಾಕುವ ಆಗಿದೆ ಪರಿಸ್ಥಿತಿ. ಮೊದಲೇ ದೇಶದ ಜನತೆ ಕೊರೋನಾ ಭೀತಿಯಿಂದ ತತ್ತರಿಸಿದ್ದಾರೆ. 

ಇದರಿಂದಾಗಿ ಹಣ್ಣು, ಕಾಯಿಯಿಂದ ಹಿಡಿದು ಷೇರು ಮಾರುಕಟ್ಟೆವರೆಗೆ ಎಲ್ಲವೂ ಪಾತಾಳಕ್ಕೆ ಕುಸಿದಿದೆ. ಸಮಸ್ಯೆ ಇರುವೆಡೆ ಕ್ರಮಕೈಗೊಳ್ಳಬೇಕೇ ಹೊರತು ಜನರನ್ನು ಸಾಮೂಹಿಕವಾಗಿ ಹೆದರಿಸುವುದು ಸರಿಯಲ್ಲ ಎಂದು ಟ್ವೀಟಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com