ಸಾಮಾನ್ಯ ಜನರ ವೈಯಕ್ತಿಕ ನಡೆಗಳ ಮೇಲೆ ಕಣ್ಣಿಡಲು ಅವರೇನು ಭಯೋತ್ಪಾದಕರಾ?
ಕೇಂದ್ರ ಸರ್ಕಾರ ಜನರಿಗೆ ಉಪಕಾರ ಮಾಡದಿದ್ದರೂ, ಆಧಾರ್, ಎನ್‍ಎಸ್‌ಆರ್ ಹೆಸರಿನಲ್ಲಿ ಸಾಮಾನ್ಯ ಜನರ ವೈಯಕ್ತಿಕ ನಡೆಗಳ ಮೇಲೆ ನಿಗಾ ಇಡುತ್ತಿದೆ. ಕಣ್ಣಿಡಲು ಅವರೇನು ಭಯೋತ್ಪಾದಕರಾ? ಎಂದು ನಿಯೋಜಿತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
Published: 18th March 2020 08:25 AM | Last Updated: 18th March 2020 08:25 AM | A+A A-

ಡಿ.ಕೆ ಶಿವಕುಮಾರ್
ಬೆಂಗಳೂರು: ಕೇಂದ್ರ ಸರ್ಕಾರ ಜನರಿಗೆ ಉಪಕಾರ ಮಾಡದಿದ್ದರೂ, ಆಧಾರ್, ಎನ್‍ಎಸ್‌ಆರ್ ಹೆಸರಿನಲ್ಲಿ ಸಾಮಾನ್ಯ ಜನರ ವೈಯಕ್ತಿಕ ನಡೆಗಳ ಮೇಲೆ ನಿಗಾ ಇಡುತ್ತಿದೆ. ಕಣ್ಣಿಡಲು ಅವರೇನು ಭಯೋತ್ಪಾದಕರಾ? ಎಂದು ನಿಯೋಜಿತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನರ ವೈಯಕ್ತಿಕ ಬದುಕಿನಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದು ಸರಿಯಲ್ಲ.
ಜನರನ್ನು ಕೇಂದ್ರ ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿ ಸರಿ ಇಲ್ಲ. ಅವರಿಗೆ ನೀವು ಉಪಕಾರ ಮಾಡದಿದ್ದರೂ ಪರವಾಗಿಲ್ಲ. ಅವರಿಗೆ ಮಾನಸಿಕ ಹಿಂಸೆ ನೀಡಬೇಡಿ. ಅವರು ಬದುಕಿದರೆ ದೇಶ ನೆಮ್ಮದಿಯಾಗಿ ಬದುಕುತ್ತದೆ. ಅವರು ಆರ್ಥಿಕವಾಗಿ ಬಲವಾದರೆ ದೇಶ ಬಲವಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಳ್ಳಿ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಪ್ರತಿ ಕ್ಷೇತ್ರಕ್ಕೆ ಹೋಗಿ, ಅಲ್ಲಿನ ಕಾರ್ಯಕರ್ತರನ್ನು ಭೇಟಿ ಮಾಡಿ ಅವರ ಅಹವಾಲುಗಳನ್ನು ಆಲಿಸಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ ಎಂದು ಡಿ. ಕೆ ಶಿವಕುಮಾರ್ ತಿಳಿಸಿದ್ದಾರೆ.
ಎರಡು ದಿನ ತಡವಾಗಬಹುದು. ಆದರೆ ಪ್ರತಿ ಕ್ಷೇತ್ರಕ್ಕೂ ಭೇಟಿ ನೀಡುತ್ತೇನೆ. ನಾವು ಗೆದ್ದಿರುವ ಕ್ಷೇತ್ರ ಹಾಗೂ ಸೋತಿರುವ ಕ್ಷೇತ್ರಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯಕರ್ತರನ್ನು ಭೇಟಿ ಮಾಡಿ ಅವರ ಅಭಿಪ್ರಾಯ ಪಡೆದು ಅವರಲ್ಲಿ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ. ಅಲ್ಲದೆ ಕಾರ್ಯಕರ್ತರ ಅಭಿಪ್ರಾಯದಿಂತೆ ನಾನು ನಡೆಯುತ್ತೇನೆ ಎಂದರು.