ಫಲಿತಾಂಶಕ್ಕೂ ಮುನ್ನವೇ ಪ್ರಬಲ ಖಾತೆಗೆ ಮುನಿರತ್ನ ಲಾಬಿ: ಇಂಧನ ಖಾತೆ ಮೇಲೆ ಕಣ್ಣು!

ಉಪಚುನಾವಣಾ ಫಲಿತಾಂಶ ಇನ್ನೂ ಪ್ರಕಟವಾಗಬೇಕಿದೆ, ಆದರೆ ಬಿಜೆಪಿ ಆರ್ ಆರ್ ನಗರ ಅಭ್ಯರ್ಥಿ ಮುನಿರತ್ನ ಪ್ರಬಲ ಖಾತೆಗಾಗಿ ಲಾಬಿ ಆರಂಭಿಸಿದ್ದಾರೆ.

Published: 06th November 2020 08:07 AM  |   Last Updated: 06th November 2020 12:21 PM   |  A+A-


Munirathna

ಮುನಿರತ್ನ

Posted By : Shilpa D
Source : The New Indian Express

ಬೆಂಗಳೂರು: ಉಪಚುನಾವಣಾ ಫಲಿತಾಂಶ ಇನ್ನೂ ಪ್ರಕಟವಾಗಬೇಕಿದೆ, ಆದರೆ ಬಿಜೆಪಿ ಆರ್ ಆರ್ ನಗರ ಅಭ್ಯರ್ಥಿ ಮುನಿರತ್ನ ಪ್ರಬಲ ಖಾತೆಗಾಗಿ ಲಾಬಿ ಆರಂಭಿಸಿದ್ದಾರೆ.

ನವೆಂಬರ್ 3 ರಂದು ನಡೆದ ಉಪಚುನಾವಣೆ ಫಲಿತಾಂಶ ನವೆಂಬರ್ 10 ರಂದು ಪ್ರಕಟವಾಗಲಿದೆ, ಇತ್ತೀಚೆಗೆ ಆರ್ ಆರ್ ನಗರ ಚುನಾವಣಾ ಪ್ರಚಾರದ ವೇಳೆ ಸಿಎಂ ಯಡಿಯೂರಪ್ಪ ಮುನಿರತ್ನ ಅವರನ್ನು ಮಂತ್ರಿಯಾಗಿ ಮಾಡುವುದಾಗಿ ಘೋಷಿಸಿದರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ 17 ಶಾಸಕರಲ್ಲಿ ಮುನಿರತ್ನ ಕೂಡ ಒಬ್ಬರಾಗಿದ್ದಾರೆ.

ಇರುವ ಒಟ್ಟು 34 ಖಾತೆಗಳಲ್ಲಿ ಆರು ಪ್ರಮುಖ ಖಾತೆ ಸಿಎಂ ಯಡಿಯೂರಪ್ಪ ಬಳಿಯಿದೆ, ಹಣಕಾಸು, ಇಂಧನ ಮತ್ತು ಬೆಂಗಳೂರು ನಗರಾಭಿವೃದ್ಧಿ ಇದರಲ್ಲಿ ಸೇರಿವೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ನಾನು ಕಾರಣರಾಗಿದ್ದೇವೆ, ಯಡಿಯೂರಪ್ಪ ಭರವಸೆ ನೀಡಿದ್ದಾರೆ, ನನಗೆ ಮಂತ್ರಿ ಸ್ಥಾನ ನೀಡುತ್ತಾರೆ ಎಂದು ಮುನಿರತ್ನ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನಾನು ಕಾಂಗ್ರೆಸ್ ತೊರೆದಾಗ ಹಲವರು ನಾನು ಇಂಧನ ಸಚಿವನಾಗಬೇಕೆಂದು ಹಾರೈಸಿದರು ಎಂದು ಮುನಿರತ್ನ ತಿಳಿಸಿದ್ದಾರೆ. ಆದರೆ ಮುನಿರತ್ನ ಜೊತೆ ಕಾಂಗ್ರೆಸ್ ತೊರೆದ ರಮೇಶ್ ಜಾರಕಿಹೊಳಿ ಕೂಡ ಇಂಧನ ಖಾತೆ ಮೇಲೆ ಕಣ್ಣಿಟ್ಟಿದ್ದರು, ಆದರೆ ಬಳಿಕ ಅವರಿಗೆ ಜಲ ಸಂಪನ್ಮೂಲ ಖಾತೆ ನೀಡಲಾಯಿತು. 

ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಸಿಎಂ ಮತ್ತು ಪಕ್ಷದ ವರಿಷ್ಠರು ಭರವಸೆ ನೀಡಿದ್ದಾರೆ, ಆದರೆ ಯಾವ ಖಾತೆ ನೀಡಲಿದ್ದಾರೆ ಎಂಬುದು ಸಿಎಂ ಗೆ ಬಿಟ್ಟ ವಿಷಯವಾಗಿದೆ, ಇಂಥದ್ದೆ ಖಾತೆ ಬೇಕೆಂದು ಮುನಿರತ್ನ ಬೇಡಿಕೆ ಇಟ್ಟಿಲ್ಲ ಎಂದು ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ.

ಆದರೆ ಮುನಿರತ್ನ ಇಂಧನ ಖಾತೆಗಾಗಿ ಲಾಬಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ,  ಮತ್ತೊಂದೆಡೆ ಬಿಜೆಪಿ ನಿಷ್ಟಾವಂತ ಶಾಸಕರು ಇದೇ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ, ನಿಷ್ಠರನ್ನು ಕಡೆಗಣಿಸುವುದು ಸಿಎಂಗೆ ಇಷ್ಟವಿಲ್ಲ, ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇದೊಂದು ಕಠಿಣ ಸವಾಲಾಗಿದ್ದು, ದೆಹಲಿ ನಾಯಕರ ಜೊತೆ ಚರ್ಚಿಸಲು ಕಾಯುತ್ತಿದ್ದಾರೆ ಎಂದು ವಿಶ್ವಸಾರ್ಹ ಮೂಲಗಳು ತಿಳಿಸಿವೆ.


Stay up to date on all the latest ರಾಜಕೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp