ಗಾಳಿ ಬಂದ ಕಡೆ ತೂರುವ ಜೆಡಿಎಸ್: ಹಳೇ ವೈರತ್ವ ಮರೆತು ಕಮಲದ ಜೊತೆ ಕುಮಾರಸ್ವಾಮಿ ಸಖ್ಯ!

ರಾಜ್ಯದಲ್ಲಿ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಜಾತ್ಯಾತೀತ ಜನತಾದಳ ಬಿಜೆಪಿ ಜೊತೆ ಮತ್ತೆ ಒಂದಾಗುತ್ತಿದೆ. ರಾಜಕೀಯ ವಲಯದಲ್ಲಿ ಇದು ಅಚ್ಚರಿ ಮೂಡಿಸುವ ವಿಷಯವೇನಲ್ಲ. 

Published: 24th November 2020 08:24 AM  |   Last Updated: 24th November 2020 12:09 PM   |  A+A-


HD kumaraswamy

ಕುಮಾರಸ್ವಾಮಿ

Posted By : Shilpa D
Source : The New Indian Express

ಮೈಸೂರು: ರಾಜ್ಯದಲ್ಲಿ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಜಾತ್ಯಾತೀತ ಜನತಾದಳ ಬಿಜೆಪಿ ಜೊತೆ ಮತ್ತೆ ಒಂದಾಗುತ್ತಿದೆ. ರಾಜಕೀಯ ವಲಯದಲ್ಲಿ ಇದು ಅಚ್ಚರಿ ಮೂಡಿಸುವ ವಿಷಯವೇನಲ್ಲ. 

ಇತ್ತೀಚೆಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪದೇ ಪದೇ ಭೇಟಿ ಮಾಡಿದ್ದು,ಕುತೂಹಲಕ್ಕೆ ಕಾರಣವಾಗಿತ್ತು, ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚಿಸಲು ಭೇಟಿ ಮಾಡಲಾಗಿತ್ತು ಎಂದು ಇಬ್ಬರು ನಾಯಕರು ಸಮಜಾಯಿಷಿ ನೀಡಿದ್ದರು.

ಈ ಭೇಟಿ ಹೊಸ ಸ್ನೇಹಕ್ಕೆ ಕಾರಣವಾಗಿದೆ.  ಶಿರಾ ಮತ್ತು ಆರ್ ಆರ್ ನಗರ ಉಪಚುನಾವಣೆಯಲ್ಲಿ ಜೆಡಿಎಸ್ ಸಂಪೂರ್ಣವಾಗಿ ಸೋಲನುಭವಿಸಿತು. ಈ ಎರಡು ಕ್ಷೇತ್ರಗಳಲ್ಲಿ ಒಕ್ಕಲಿಗರ ಪ್ರಾಬಲ್ಯವಿದ್ದರೂ ಎರಡನೇ ಸಾಲಿನ ನಾಯಕರ ಕೊರತೆ ಮತ್ತು ಸಂಪನ್ಮೂಲ ಕೊರತೆ ಜೆಡಿಎಸ್ ಗೆ ಪ್ರಮುಖ ಕಾರಣವಾಗಿತ್ತು.

ಬಿಜೆಪಿ ಜೊತೆಗೆ ಧ್ವೇಷ-ಪ್ರೇಮ ಹಂತದ ಮತ್ತೊಂದು ಸುತ್ತಿನ ಸಂಬಂಧವಾಗಿದ್ದು, ಜೆಡಿಎಸ್ ಬಿಜೆಪಿಗೆ ನೀಡಿದ ಬೆಂಬಲವಾಗಿತ್ತು, ಇನ್ನೂ ಆ ಎರಡು ಪಕ್ಷಗಳ ಸಾಮಾನ್ಯ ವೈರಿ ಕಾಂಗ್ರೆಸ್ ಅನ್ನು ಅಧಿಕಾರದಿಂದ ಹೊರಗಿಡುವ ಉದ್ದೇಶದಿಂದ ಮಂಡ್ಯ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಗೆ ಬೆಂಬಲ ನೀಡಿತು.

ಆರ್ ಆರ್ ನಗರ ಮತ್ತು ಶಿರಾ ಕ್ಷೇತ್ರಗಳಲ್ಲಿ ಜೆಡಿಎಸ್ ಕಳಪೆ ಪ್ರದರ್ಶನದಿಂದಾಗಿ ಜೆಡಿಎಸ್ ಮತಗಳು ಬಿಜೆಪಿಗೆ ವರ್ಗಾವಣೆಯಾಯಿತು. 20:20 ಸರ್ಕಾರದ ಪತನದ ನಂತರ ಬಿಜೆಪಿ ವಿರುದ್ಧ ತೊಡೆತಟ್ಟಿದ್ದ ಕುಮಾರಸ್ವಾಮಿ ತಮ್ಮ ಪಕ್ಷದ ಶಾಸಕರು ಬಿಜೆಪಿ ತೊರೆದ ನಂತರ ಅವರ  ಎಚ್ ಡಿಕೆ ಶತೃತ್ವ ಕರಗುತ್ತಾ ಬಂದಿತು.

ಜೆಡಿಎಸ್ ಶಾಸಕರಾದ ಎಎಚ್ ವಿಶ್ವನಾಥ್, ನಾರಾಯಣಗೌಡ, ಗೋಪಾಲಯ್ಯ,  ಅವರು ಪಕ್ಷ ತೊರೆದು ಸಮ್ಮಿಶ್ರ ಸರ್ಕಾರ ಪತನವಾಗಲು ಕಾರಣರಾದರು. ಮತ್ತೊಬ್ಬ ಶಾಸಕ ಜಿಟಿ ದೇವೇಗೌಡ ಜೆಡಿಎಸ್ ಮುಖಂಡರಿಂದ ಅಂತರ ಕಾಯ್ದುಕೊಂಡಿದ್ದಾರೆ.

ತಮ್ಮ ಪಕ್ಷದ ಬಲಹೀನತೆ ಮತ್ತು ಸಾಮರ್ಥ್ಯದ ಬಗ್ಗೆ ಅರಿವಿರಿುವ ಜೆಡಿಎಸ್ ಮುಖಂಡರು ಗಾಳಿ ಬಂದ ಕಡೆ ತೂರಿಕೊಂಡು ಹೋಗುವ ಚಾಣಾಕ್ಷತನ ತೋರುತ್ತಿದ್ದಾರೆ. 

ಹಳೇಯ ಮೈಸೂರು ಭಾಗದಲ್ಲಿ ಬಿಜೆಪಿಗೆ ಭದ್ರ ನೆಲೆಯಿಲ್ಲದ ಕಾರಣ ತಾವು ಕೇಸರಿ ಪಕ್ಷದ ಜೊತೆ ಆರಾವಮವಾಗಿದ್ದೇವೆ ಎಂದು ಜೆಡಿಎಸ್ ನಾಯಕರು ಹೇಳಿದ್ದಾರೆ.

ಮತ್ತೊಂದೆಡೆ ಜೆಡಿಎಸ್ ತೊರೆದು ಬಿಜೆಪಿ ಸೇರಿರುವ ಶಾಸಕರಿಗೆ ಈ ಬೆಳವಣಿಗೆ ಅಸಮಾಧಾನ ಮೂಡಿಸಿದೆ,  ಕುಮಾರಸ್ವಾಮಿ ಸೀಸನಲ್ ಫ್ರೆಂಡ್ ಶಿಫ್ ಮಾಡುತ್ತಾರೆ ಎಂದು ಎಂಎಲ್ ಸಿ ಎಎಚ್ ವಿಶ್ವನಾಥ್ ಲೇವಡಿ ಮಾಡಿದ್ದಾರೆ.

ಮುಂದಿನ ಚುನಾವಣೆಗಳಿಗಾಗಿ ಮತ್ತು ಉಪ ಚುನಾವಣೆಯ ಸೋಲಿನ ಕಾರಣಗಳನ್ನು ಆತ್ಮಾವಲೋಕನ ಮಾಡಿಕೊಳ್ಳುವುದಾಗಿ ಮಾಜಿ ಸಚಿವ ಸಾ.ರಾ ಮಹೇಶ್ ಹೇಳಿದ್ದಾರೆ. ಶಿರಾದಲ್ಲಿ ನಾವು ಉತ್ತಮವಾಗಿ ಪ್ರಯತ್ನ ಪಟ್ಟರು ಗೆಲ್ಲಲಾಗಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಜೆಡಿಎಸ್ ಮೂಲಭೂತ ಬಿಕ್ಕಟ್ಟನ್ನು ಎದುರಿಸುತ್ತಿದೆ ಮತ್ತು  ಜೆಡಿಎಸ್ ಪ್ರಾಬಲ್ಯ ಕ್ಷೇತ್ರಗಳನ್ನು ಬಿಜೆಪಿ ಅತಿಕ್ರಮಿಸಿದೆ. ಜೆಡಿಎಸ್ ಶಾಸಕರು ಅಭಿವೃದ್ಧಿಯ ಹಿತದೃಷ್ಟಿಯಿಂದ ಮತ್ತು ನಾಯಕತ್ವದ ಅಸಮಾಧಾನದಿಂದ ಯಾವುದೇ ಕ್ಷಣದಲ್ಲಿ ಪಕ್ಷ  ತೊರೆಬಹುದು ಎಂದು ರಾಜಕೀಯ ವಿಮರ್ಶಕ ಪ್ರೊ.ಮುಜಾಫರ್ ಅಸಾದಿ ತಿಳಿಸಿದ್ದಾರೆ. ಕುಮಾರಸ್ವಾಮಿ ಹಿಂದಿನದನ್ನು ಮರೆತು ಜೊತೆಯಾಗಬಹುದು ಆದರೆ ಬಿಜೆಪಿ ಜೆಡಿಎಸ್ ನಾಯಕರ ಮೇಲೆ ವಿಶ್ವಾಸ ಹೊಂದಿಲ್ಲ ಎಂದು ಹೇಳಿದ್ದಾರೆ.

Stay up to date on all the latest ರಾಜಕೀಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp