ಆರ್ ಆರ್ ನಗರ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಆಸ್ತಿ ಎಷ್ಟು?

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಐಎಎಸ್ ಅಧಿಕಾರಿ ದಿ. ಡಿಕೆ ರವಿ ಅವರ ಪತ್ನಿ ಕುಸುಮಾ ಹನುಮಂತರಾಯಪ್ಪ ಅವರು ಸಾಲಗಾರ್ತಿಯಾಗಿದ್ದು, ಬೈರಮ್ಮ ಎಂಬುವರಿಂದ 20,48,000 ರೂ. ಸಾಲ ಪಡೆದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಕುಸುಮಾ
ಕುಸುಮಾ

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಐಎಎಸ್ ಅಧಿಕಾರಿ ದಿ. ಡಿಕೆ ರವಿ ಅವರ ಪತ್ನಿ ಕುಸುಮಾ ಹನುಮಂತರಾಯಪ್ಪ ಅವರು ಸಾಲಗಾರ್ತಿಯಾಗಿದ್ದು, ಬೈರಮ್ಮ ಎಂಬುವರಿಂದ 20,48,000 ರೂ. ಸಾಲ ಪಡೆದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಪ್ರಮಾಣಪತ್ರದಲ್ಲಿ ಪತಿಯ ಹೆಸರಾಗಲೀ ಕುಟುಂಬಸ್ಥರ ವಿವರವಾಗಲೀ ಉಲ್ಲೇಖಿಸಿಲ್ಲ.

ಚುನಾವಣಾಧಿಕಾರಿಗಳಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ 1,41,050 ರೂ. ನಗದು, ಕೆನರಾ ಬ್ಯಾಂಕಿನಲ್ಲಿ 1,76,670.85 ರೂ, ಬ್ಯಾಂಕ್ ಆಫ್ ಬರೋಡಾದಲ್ಲಿ 1,000 ರೂ, ಎಸ್ ಬಿಐ ನಾಗರಭಾವಿ ಬ್ಯಾಂಕ್ - 41,620. 24 ರೂ. ಹೊಂದಿದ್ದು, ವಿವಿಧ ಬಾಂಡ್, ಶೇರುಗಳಲ್ಲಿ ಹೂಡಿಕೆ ಮಾಡಿದ್ದಾರೆ.

2,05,000 ರೂ ವೈಯಕ್ತಿಕ ಸಾಲ, 56,58,316 ರೂ. ಎಬಿಎಚ್ ಇನ್ಫ್ರಾಸ್ಟ್ರಕ್ಚರ್ಸ್ ಹೆಸರಿನಲ್ಲಿ ಸಾಲ ಹೊಂದಿದ್ದಾರೆ. 1,100 ಗ್ರಾಂ ಒಡವೆ, 45,00,000 ರೂ. ಮೌಲ್ಯದ ಉಡುಗೊರೆ ಕುಸುಮಾ ಬಳಿಯಿದೆ.

ಕುಸುಮಾ ಬಳಿ ಯಾವುದೇ ಸ್ವಂತ ವಾಹನವಿಲ್ಲ. ಒಟ್ಟು 1,13,02,197. 38 ರೂ ಮೌಲ್ಯದ ಚರಾಸ್ತಿ ಹೊಂದಿರುವ ಕುಸುಮಾಗೆ ಯಾವುದೇ ಕೃಷಿ ಭೂಮಿಯಿಲ್ಲ. 

ಬಿಬಿಎಂಪಿ ವಾರ್ಡ್ 40ರಲ್ಲಿ 17, 84, 575 ರೂ. ಮೌಲ್ಯದ 1500 ಚದರ ಅಡಿ ಹಾಗೂ 2380 ಚದರಡಿ ವಿಸ್ತೀರ್ಣದ ಎರಡು ನಿವೇಶನನ ಹೊಂದಿದ್ದು, ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದು, ವೇತನವೇ ಆರ್ಥಿಕ ಮೂಲ ಎಂದಿದ್ದಾರೆ.

ಕುಸುಮಾ ಅವರು ಮೂಲತಃ ಶ್ರೀಮಂತ ಕುಟುಂಬದಿಂದ ಬಂದಿದ್ದಾರೆ. ಮಾಜಿ ಐಎಎಸ್ ಅಧಿಕಾರಿ ಡಿಕೆ ರವಿಯನ್ನು ವಿವಾಹವಾಗಿದ್ದ ಕುಸುಮಾ ವಿದೇಶದಲ್ಲಿ ಶಿಕ್ಷಣ ಪೂರೈಸಿದ್ದಾರೆ. ಚುನಾವಣಾ ಅಖಾಡಕ್ಕೆ ಇಳಿಯುವುದಕ್ಕಿಂತ ಮೊದಲು ಬೆಂಗಳೂರಿನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com