ಖಾತೆ ಬದಲಾವಣೆ ತಪ್ಪಲ್ಲ, ಒಳ್ಳೆಯ ಕೆಲಸ ಆಗಬೇಕೆಂದು ಈ ತೀರ್ಮಾನ ಮಾಡಲಾಗಿದೆ: ಸವದಿ

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಮ್ಮ ಸಂಪುಟ ಮೂವರು ಸಚಿವರ ಖಾತೆ ಬದಲಾವಣೆ ಮಾಡಿರುವುದು ತಪ್ಪಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟಿದ್ದಾರೆ.
ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ

ಬೆಳಗಾವಿ: ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಮ್ಮ ಸಂಪುಟ ಮೂವರು ಸಚಿವರ ಖಾತೆ ಬದಲಾವಣೆ ಮಾಡಿರುವುದು ತಪ್ಪಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟಿದ್ದಾರೆ.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಒಳ್ಳೆಯ ಕೆಲಸ ಆಗಬೇಕೆಂದು ಈ ತೀರ್ಮಾನ ಮಾಡಲಾಗಿದೆ’ ವರಿಷ್ಠರ ಸಲಹೆ ಪಡೆದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಂಪುಟದ ಕೆಲವು ಸಹೋದ್ಯೋಗಿಗಳ ಖಾತೆ ಬದಲಿಸಿದ್ದಾರೆ. ಖಾತೆಗಳನ್ನು ಅದಲು–ಬದಲು ಮಾಡುವ ಅಧಿಕಾರ ಅವರಿಗಿದೆ. ಈ ಬಗ್ಗೆ ಕಾಂಗ್ರೆಸ್‌ನವರೇಕೆ ತಲೆಕೆಡಿಸಿಕೊಳ್ಳಬೇಕು?’ ಎಂದು ಪ್ರಶ್ನಿಸಿದ್ದಾರೆ.

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸರ್ಕಾರದ ವಿರುದ್ಧ ಮಾಡುತ್ತಿರುವ ಆರೋಪಗಳಲ್ಲಿ ಹರುಳಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ ಎರಡು ವರ್ಷಗಳವರೆಗೆ ಶಿವಕುಮಾರ್‌ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡಿರಲಿಲ್ಲ. ಹಾಗಾದರೆ ಅವರು ಅಸಮರ್ಥರು ಎನ್ನುವ ಕಾರಣಕ್ಕೆ ಬಿಟ್ಟಿದ್ದರೇ? ಕೆಲವು ಸನ್ನಿವೇಶದಲ್ಲಿ ಖಾತೆ ಬದಲಾವಣೆ ಮಾಡಬೇಕಾಗುತ್ತದೆ’ ಎಂದು ತಿರುಗೇಟು ನೀಡಿದ್ದಾರೆ.

‘ಉಪ ಚುನಾವಣೆಗಳಲ್ಲಿ ಜನರು ಆಡಳಿತ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವುದು ಸಾಮಾನ್ಯ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com