ಹೈ ವೋಲ್ಟೇಜ್ ಕಣವಾದ ಪರಿಷತ್ ಚುನಾವಣೆ: ತೀವ್ರಗೊಂಡ ಅಭ್ಯರ್ಥಿಗಳ ಪ್ರಚಾರ

ವಿಧಾನ ಪರಿಷತ್ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪ್ರಚಾರದ ಭರಾಟೆ ಜೋರಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಾರವಾರ: ವಿಧಾನ ಪರಿಷತ್ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪ್ರಚಾರದ ಭರಾಟೆ ಜೋರಾಗಿದೆ. 

ಅಭ್ಯರ್ಥಿಗಳ ಪರ ಪಕ್ಷದ ಮುಖಂಡರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಕನ್ನೂರು ಅವರನ್ನು ಬಿಜೆಪಿ 2ನೇ ಬಾರಿ ಕಣಕ್ಕಿಳಿಸಿದೆ, ಸಂಕನೂರು ಪರ ಬಿಜೆಪಿ ಮುಖಂಡರಾದ ಜಗದೀಶ್ ಶೆಟ್ಟರ್, ಶಿವರಾಮ್ ಹೆಬ್ಬಾರ್ ಕಾರಾವಾರ -ಅಂಕೋಲಾ ಶಾಸಕಿ ರೂಪಾಲಿ ನಾಯಕ್ ಮುಂತಾದವರು ಶಿರಸಿ, ಹೊನ್ನಾವರ ಕುಮ್ಟಾ ಮತ್ತು ಭಟ್ಕಳದಲ್ಲಿ ಪ್ರಚಾರ ನಡೆಸಿದರು.

ಇಷ್ಟು ವರ್ಷಗಳ ಕಾಲ ನಾವು ವಿರೋಧ ಪಕ್ಷದಲ್ಲಿದ್ದೆವು, ಹೀಗಿದ್ದರೂ ನಾವು ನಮ್ಮ ಕೈಲಾದ ಉತ್ತಮ ಕೆಲಸ ಮಾಡಿದ್ದೇವೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಕೆಲಸ ಮಾಡುತ್ತೇವೆ ಎಂದು ಬಿಜೆಪಿ ಅಭ್ಯರ್ಥಿ ಸಂಕನೂರು ಮತಯಾಚಿಸಿದ್ದಾರೆ. ನಿಮ್ಮ ನಿರೀಕ್ಷೆ ಮತ್ತು ಭರವಸೆಗಳನ್ನು ಪೂರ್ಣಗೊಳಿಸುವಲ್ಲಿ ನಮ್ಮ ಅಭ್ಯರ್ಥಿ ಕೆಲಸ ಮಾಡುತ್ತಾರೆ ಎಂದು ಶೆಟ್ಟರ್ ಮತ್ತು ಶಿವರಾಮ್ ಹೆಬ್ಬಾರ್ ತಿಳಿಸಿದರು.

ಶಿರಶಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಪಶ್ಚಿಮ ಪದವೀಧರರ ಕ್ಷೇತದ ಚುನಾವಣಾ ಮತ ಪ್ರಚಾರ ಹಾಗೂ ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಸಕ ಆರ್.ವಿ. ದೇಶಪಾಂಡೆ ಮತಯಾಚನೆ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಕುಬೇರಪ್ಪ ಪರ ದೇಶಪಾಂಡೆ ಮತ ಯಾಚಿಸಿದರು ಈ ಸಲದ ಚುನಾವಣೆ ಹಿಂದಿನ ಎಲ್ಲ ಚುನಾವಣೆಗಳಿಗಿಂತಲೂ ಭಿನ್ನವಾಗಿದೆ. ಕುಬೇರಪ್ಪ ಅವರು ಪದವೀಧರರ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಉನ್ನತ ಶಿಕ್ಷಣ ಪಡೆದ ಶಿಕ್ಷಕ-ಶಿಕ್ಷಕಿಯರು ಹಲವಾರು ವರ್ಷಗಳಿಂದ ಯಾವುದೇ ಬಡ್ತಿ ಇಲ್ಲದೆ ವಂಚಿತರಾಗಿದಾರೆ. ಹಾಗೂ ವಿದ್ಯಾವಂತ ಯುವಕ-ಯುವತಿಯರು ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಕುಬೇರಪ್ಪನವರು ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಅನುಭವನ್ನು ಹೊಂದಿದ್ದು ಪಶ್ಚಿಮ ಪದವೀಧರರ ಕ್ಷೇತದ ಜನರ ಸೇವೆ ಮಾಡಲು ನಾವು ಅವರಿಗೆ ಸಹಕರಿಸಬೇಕಿದೆ. ಅವರನ್ನು ಆರಿಸಿ ತಂದು ಪಕ್ಷ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಎಲ್ಲ ಕಾರ್ಯಕರ್ತರು ಶ್ರಮಿಸಬೇಕು ಎಂದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com