ಆರ್ ಆರ್ ನಗರ ಉಪ ಚುನಾವಣೆ: ಕುಸುಮಾರನ್ನು ಒಪ್ಪಿಕೊಳ್ಳೋದು ಕಷ್ಟ; ಮುನಿರತ್ನ ಕಾಂಗ್ರೆಸ್ ತೊರೆದದ್ದು ಸರಿಯಲ್ಲ!

ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ಡಿ ಸೋಜಾ ನಗರ ಪಕ್ಕದಲ್ಲಿಯೇ ನೈಸ್ ಕಾರಿಡಾರ್ ಹಾದು ಹೋಗಿದೆ. ಜೊತೆಗೆ ಗುಂಡಿಗಳಿಲ್ಲದೇ ಆರ್ ಆರ್ ನಗರ ಅಂತಾರಾಷ್ಚ್ರೀಯ ಗುಣಮಟ್ಟದ್ದಾಗಿದೆ.
ಆರ್ ಆರ್ ನಗರ ಸ್ಲಮ್ ದೃಶ್ಯ
ಆರ್ ಆರ್ ನಗರ ಸ್ಲಮ್ ದೃಶ್ಯ

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಡಿ ಸೋಜಾ ನಗರ ಪಕ್ಕದಲ್ಲಿಯೇ ನೈಸ್ ಕಾರಿಡಾರ್ ಹಾದು ಹೋಗಿದೆ. ಜೊತೆಗೆ ಗುಂಡಿಗಳಿಲ್ಲದೇ ಆರ್ ಆರ್ ನಗರ ಅಂತಾರಾಷ್ಚ್ರೀಯ ಗುಣಮಟ್ಟದ್ದಾಗಿದೆ.

ಆದರೆ ಗುಂಡಿಗಳು ತುಂಬಿದ ರಸ್ತೆಯು ವಾಹನ ಚಾಲಕರಿಗೆ ದುಃಸ್ವಪ್ನವಾಗಿದೆ. ನವೆಂಬರ್ 3 ರಂದು ಉಪಚುನಾವಣೆಗೆ ಸಿದ್ದವಾಗುತ್ತಿರುವ ಆರ್ ಆರ್ ನಗರದಲ್ಲಿ ಇದೆಲ್ಲಾ ಕಾಮನ್ ಆಗಿಬಿಟ್ಟಿದೆ.

ಒಂದೆಡೆ ಐಷಾರಾಮಿ ಅಪಾರ್ಟ್ ಮೆಂಟ್, ಅತ್ಯಾಧುನಿಕ ನಿವಾಸಗಳು, ಐಟಿ ಪಾರ್ಕ್ ಮತ್ತು ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿವೆ, ಮತ್ತೊಂದೆಡೆ ಸರಿಯಾಗಿ ನಿರ್ವಹಣೆ ಮಾಡದ ಸ್ಲಮ್ ಮತ್ತು ಕಸದ ತೊಟ್ಟಿ ಎಲ್ಲೆಂದರಲ್ಲಿವೆ. ಆದರೆ ಈ ಸಮಸ್ಯೆಗಳು ಉಪ ಚುನಾವಣೆ ಹೊತ್ತಲ್ಲಿ ಮುನ್ನಲೆಗೆ ಬರುತ್ತಲೇ ಇಲ್ಲ.

ಬೆಂಗಳೂರಿನಲ್ಲೇ ಅತಿ ದೊಡ್ಡ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಆರ್ ಆರ್ ನಗರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ,  ಕೆರೆ ಮತ್ತು ಹೊಸ ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ, ರಸ್ತೆಗಳ ರಿಪೇರಿಯಿಲ್ಲ, ರಾಜ್ಯ ಸರ್ಕಾರ ಈ ಕ್ಷೇತ್ರಕ್ಕೆ ಕೋಟ್ಯಂತರ ರು ಅನುದಾನ ನೀಡುತ್ತಿದ್ದರೂ ಅಭಿವೃದ್ಧಿ ಕಾಣುತ್ತಿಲ್ಲ ಎಂದು ಆರ್ ಆರ್ ನಗರ ತೆರಿಗೆ ಪಾವತಿ ಸಂಘದ ಅಧ್ಯಕ್ಷ ಆರ್ ಬಿ ಬದರಿನಾಥ್ ಹೇಳಿದ್ದಾರೆ.

ಯಾವುದೇ ಪಕ್ಷದ ಅಭ್ಯರ್ಥಿಗಳು ಈ ಸಮಸ್ಯೆಗಳ ಬಗ್ಗೆ ದನಿ ಎತ್ತುತ್ತಿಲ್ಲ, ಕೇವಲ ಮತದಾರರನ್ನು ಓಲೈಸಲು ಪರಸ್ಪರ ಕೆಸರೆರಚಾಟ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕೊಳಚೆ ನಿವಾಸಿಗಳ ಪ್ರಕಾರ ಬಿಜೆಪಿ ಅಭ್ಯರ್ಥಿ ಮುನಿರತ್ನ ತಮಗೆ ಸುಲಭವಾಗಿ ಸಿಗುತ್ತಾರೆ, ಅವರು ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದರು ಯಾವುದೇ ವ್ಯತ್ಯಾಸವಿಲ್ಲ, ಈ ಬಾರಿಯೂ ನಾನು ಮತ್ತೆ ಅವರಿಗೆ ಮತ ಹಾಕುತ್ತೇನೆ ಎಂದು ಕಟ್ಟಡ ಗುತ್ತಿಗೆದಾರ ಬಂಗಾರಪ್ಪ ಗುಡ್ಡೆ ಹೇಳಿದ್ದಾರೆ.  ಮಳೆಗಾಲದಲ್ಲಿ ಮೋರಿ ತುಂಬಿ ಹರಿಯುತ್ತದೆ, ಅದರ ಜೊತೆಗೆ ಸಮಸ್ಯೆಗಳಿವೆ ಆದರೆ ಮುನಿರತ್ನ ನಮಗಾಗಿ ಬೋರ್ ವೆಲ್ ಕೊರಿಸಿದ್ದಾರೆ ಎಂದು ಹೇಳಿದ್ದಾರೆ.

ಹೊಸಬರಿಗಿಂತ ಹಳೇ ಅಭ್ಯರ್ಥಿ ಉತ್ತಮ, ನಾವು ಕಾಂಗ್ರೆಸ್ ಕಟ್ಟಾ ಅನುಯಾಯಿಗಳು, ಆದರೆ ನಾವು ಮುನಿರತ್ನ ಅವರಿಗೆ ಮತ ಹಾಕುತ್ತೇವೆ, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹೊಸ ಮುಖ, ಅವರನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಕರಿಯಪ್ಪ ಲೇಔಟ್ ನ ಪ್ಲಂಬರ್ ಶ್ರೀನಿವಾಸ ಗೌಡ ಹೇಳುತ್ತಾರೆ. 

ಒಕ್ಕಲಿಗರ ಪ್ರಾಬಲ್ಯವಿರುವ ಆರ್ ಆರ್ ನಗರದಲ್ಲಿ ಮುನಿರತ್ನಗೆ ಕುಸುಮಾ ಪ್ರಬಲ ಪೈಪೋಟಿ ನೀಡಲಿದ್ದಾರೆ. ಕುಸುಮಾ ಅವರನ್ನು ನಾವು ನೋಡಿದ್ದೇವೆ, ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೆಂಬಲವಿದೆ, ಅಧಿಕಾರಕ್ಕಾಗಿ ಮುನಿರತ್ನ ಕಾಂಗ್ರೆಸ್ ತೊರೆದಿದ್ದಾರೆ ಅವರಿಗೆ ನಾವು ಮತ ಹಾಕುವುದಿಲ್ಲ ಎಂದು ಜವರೇಗೌಡ ನಗರದ ಬಾಲರಾಜ್ ತಿಳಿಸಿದ್ದಾರೆ.

2007 ರಲ್ಲಿ ಆರ್ ಆರ್ ನಗರ ಬಿಬಿಎಂಪಿಗೆ ಸೇರಿತು. 30 ಕಿಮೀ ವ್ಯಾಪ್ತಿಯಲ್ಲಿರುವ ಆರ್ ಆರ್ ನಗರದಲ್ಲಿ 1 ಲಕ್ಷ ಒಕ್ಕಲಿಗ ಮತದಾರರಿದ್ದಾರೆ, ಇದು ಮುನಿರತ್ನ ಮತ್ತು ಶಿವಕುಮಾರ್ ಮತ್ತು ಸಂಸದ ಡಿಕೆ ಸುರೇಶ್  ಅವರಿಗೆ ಪ್ರತಿಷ್ಠೆಯ ವಿಷಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com