ಆರು ತಿಂಗಳಲ್ಲಿ ಮದಲೂರು ಕೆರೆ ತುಂಬಲಿದೆ: ನಾನೇ ಈ ಯೋಜನೆ ಉದ್ಘಾಟಸಿಸಲಿದ್ದೇನೆ; ಶಿರಾದಲ್ಲಿ ಸಿಎಂ ಘೋಷಣೆ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಶಿರಾ ಕ್ಷೇತ್ರದಲ್ಲಿ ಶುಕ್ರವಾರ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಪರ ಪ್ರಚಾರ ನಡೆಸಿದರು.
ಯಡಿಯೂರಪ್ಪ
ಯಡಿಯೂರಪ್ಪ

ತುಮಕೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಶಿರಾ ಕ್ಷೇತ್ರದಲ್ಲಿ ಶುಕ್ರವಾರ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಪರ ಪ್ರಚಾರ ನಡೆಸಿದರು.

ತಮ್ಮ ತವರು ಕ್ಷೇತ್ರ ಶಿಕಾರಿಪುರದಲ್ಲಿ ಮಾಡಿದ ರೀತಿ ಶಿರಾದಲ್ಲಿಯೂ ಅಭಿವೃದ್ಧಿ ಮಾಡುತ್ತೇನೆ. ಶಿರಾವನ್ನು ಮಾದರಿ ತಾಲೂಕಾಗಿ  ಅಭಿವೃದ್ಧಿ ಮಾಡಲು ಏನು ಹಣಕಾಸು ಸಹಾಯ ಬೇಕೋ ಅದನ್ನು ನೀಡಲು ಸಿದ್ಧ. ಚುನಾವಣೆಯಲ್ಲಿ  ನೀವು ಬಿಜೆಪಿ ಅಭ್ಯರ್ಥಿಯನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಶಿರಾ ಕ್ಷೇತ್ರದ ಜನತೆಯಲ್ಲಿ ಮನವಿ ಮಾಡಿದರು. 

ಪ್ರಚಾರದ ವೇಳೆ ಸಿಕ್ಕ ಸ್ವಾಗತಕ್ಕೆ ಪ್ರತಿಕ್ರಿಯಿಸಿದ ಅವರು, ಈ ಅಭೂತಪೂರ್ವ ಮೆರವಣಿಗೆ ನೋಡಿ ನಾನು ಶಿಕಾರಿಪುರದಲ್ಲಿ ಇರುವಂತೆ ಭಾಸವಾಗುತ್ತಿದೆ ಎಂದು ಭಾವನಾತ್ಮಕವಾಗಿ ಮಾತನಾಡಿದರು.  

ಈಗಾಗಲೇ ಕಾಡುಗೊಲ್ಲ ಅಭಿವೃದ್ಧಿ ಮಂಡಳಿ ಸ್ಥಾಪಿಸಿದ್ದೇವೆ, ಶಿರಾ ಕ್ಷೇತ್ರದಲ್ಲಿ ಕುಂಚಿಟಿಗ ಒಕ್ಕಲಿಗ ಸಮುದಾಯ ಅಧಿಕ ಪ್ರಮಾಣದಲ್ಲಿದ್ದು, ಹಿಂದುಳಿದ ವರ್ಗ 2 ಟ್ಯಾಗ್ ಅನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಮದಲೂರು ಕೆರೆಯನ್ನು ಇನ್ನು ಆರು ತಿಂಗಳಲ್ಲಿ ತುಂಬಿಸಲಾಗುವುದು ಮತ್ತು  ನಾನೇ ಬಂದು ಈ ಯೋಜನೆ ಉದ್ಘಾಟಿಸಲಿದ್ದೇನೆ ಎಂದು ಹೇಳಿದ್ದಾರೆ.

ವಿಜಯೇಂದ್ರ ಕೆಆರ್ ಪೇಟೆ ಮಾದರಿಯಲ್ಲೇ ಶಿರಾ ಅಭಿವೃದ್ಧಿ ಮಾಡುವುದಾಗಿ ತಿಳಿಸಿದ್ದಾರೆ. ಶಿರಾ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ 25 ಸಾವಿರ ಮತಗಳಿಂದ ಮತ್ತು ಆರ್ ಆರ್ ನಗರ ಕ್ಷೇತ್ರದಲ್ಲಿ 65 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಕೆಆರ್ ಪೇಟೆ ಕ್ಷೇತ್ರದ ಈಗ ಅಭಿವೃದ್ಧಿಯಲ್ಲಿ ಮಾದರಿಯಾಗಿದೆ,ವಿಜಯೇಂದ್ರ ಎಲ್ಲಿ ಕಾಲಿಡುತ್ತಾರೋ ಅಲ್ಲಿ ಗೆಲುವು ನಿಶ್ಛಿತ, ನಾನು ಶಾಸಕನಾಗಿ ಮತ್ತೆ ಆಯ್ಕೆಯಾದ ಮೇಲೆ ಯಥೇಚ್ಚ ಪ್ರಮಾಣದಲ್ಲಿ ಅನುದಾನ ಹರಿದು ಬಂದಿದೆ. ನಾನು ಸಚಿವನಾಗಿ ಮೂರು ಖಾತೆಗಳನ್ನು ನಿರ್ವಹಿಸುತ್ತಿದ್ದೇನೆ ಎಂದು ಸಚಿವ ಕೆ,ಆರ್ ನಾರಾಯಣ ಗೌಡ ತಿಳಿಸಿದರು.

ಕೇಸರಿ ಪಕ್ಷವು ಕಳಪೆಯಾಗಿರುವ ಕ್ಷೇತ್ರದ ಇತಿಹಾಸದಲ್ಲಿ ಮೊದಲ ಬಾರಿಗೆ, ಸಿಎಂ ರ್ಯಾಲಿಗೆ ಹೆಚ್ಚಿನ ಪ್ರಮಾಣದಲ್ಲಿ ಜನ ಸೇರಿದ್ದಾರೆ.ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಜನ ಕೇಸರಿ ಶಾಲುಗಳನ್ನು ಹಾಕಿಕೊಂಡಿದ್ದರು. "ಈ ರ್ಯಾಲಿ ನನಗೆ ಮಹತ್ವದ್ದಾಗಿದೆ ಏಕೆಂದರೆ ಮುಖ್ಯಮಂತ್ರಿ ನನಗೆ ದೊಡ್ಡ ಹಾದಿಯನ್ನು ನೀಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com