'1978 ರ ಚಿಕ್ಕಮಗಳೂರು ಚುನಾವಣೆಯಲ್ಲಿ ಇಂದಿರಾ ಗಾಂಧಿ ವಿಜಯದ ಹಿಂದಿನ ಮಾಸ್ಟರ್ ಮೈಂಡ್ ಪ್ರಣಬ್ ಮುಖರ್ಜಿ'

1978 ರಲ್ಲಿ ಚಿಕ್ಕಮಗಳೂರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಾಜಿ ಪ್ರದಾನಿ ಇಂದಿರಾ ಗಾಂಧಿ ಅವರ ಗೆಲುವಿಗಾಗಿ ಕರ್ನಾಟಕದಾದ್ಯಂತ ಸಂಚರಿಸಿದ್ದ ದಿವಂಗತ ಪ್ರಣಬ್ ಮುಖರ್ಜಿ ಗೆಲುವಿಗೆ ಕಾರಣರಾಗಿದ್ದರು.

Published: 01st September 2020 11:03 AM  |   Last Updated: 01st September 2020 11:03 AM   |  A+A-


Pranab Mukharjee and indira gandhi

ಪ್ರಣಬ್ ಮುಖರ್ಜಿ ಮತ್ತು ಇಂದಿರಾ ಗಾಂಧಿ

Posted By : Shilpa D
Source : The New Indian Express

ಬೆಂಗಳೂರು: 1978 ರಲ್ಲಿ ಚಿಕ್ಕಮಗಳೂರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಾಜಿ ಪ್ರದಾನಿ ಇಂದಿರಾ ಗಾಂಧಿ ಅವರ ಗೆಲುವಿಗಾಗಿ ಕರ್ನಾಟಕದಾದ್ಯಂತ ಸಂಚರಿಸಿದ್ದ ದಿವಂಗತ ಪ್ರಣಬ್ ಮುಖರ್ಜಿ ಗೆಲುವಿಗೆ ಕಾರಣರಾಗಿದ್ದರು.

ಈ ಐತಿಹಾಸಿಕ ಗೆಲುವಿನಿಂದ ಕಾಂಗ್ರೆಸ್ ಪಕ್ಷದ ಹಣೆ ಬರಹವೇ ಬದಲಾಗಿ ಹೋಯಿತು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣವಾಯಿತು. ಆ ವರ್ಷ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿಯೂ ಪ್ರಣಬ್ ಮುಖರ್ಜಿ ರಾಜ್ಯ ಘಟಕಕ್ಕೆ ಸಹಾಯ ಮಾಡಿದ್ದರು,

ಸೋಮವಾರ ಪ್ರಣಬ್ ಮುಖರ್ಜಿ ಅವರ ನಿಧನದ ನಂತರ ಕರ್ನಾಟಕದ ಹಲವು ರಾಜಕಾರಣಿಗಳು ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ.

ಯಾವುದೇ ಕಠಿಣ ಪರಿಸ್ಥಿತಿಯ ಸಮಸ್ಯೆಯನ್ನು ಬಗೆಹರಿಸಬಲ್ಲ ಚಾಣಾಕ್ಯ ಅವರಾಗಿದ್ದರು, 1978 ರಲ್ಲಿ ಕರ್ನಾಟಕದಾದ್ಯಂತ ಪ್ರವಾಸ ಮಾಡಿದ್ದರು. ಪಕ್ಷ ಈ ಸಂದರ್ಭದಲ್ಲಿ ತುಂಬಾ ಸಂದಿಗ್ಧತೆಯ ಪರಿಸ್ಥಿತಿಯಲ್ಲಿತ್ತು ಎಂದು ಮಾಜಿ ಸಂಸದ ಎಂ ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಆ ವೇಳೆ ಮೊಯ್ಲಿ ವಿಧಾನಸಭೆ ಸದಸ್ಯರಾಗಿದ್ದು ಚಿಕ್ಕಮಗಳೂರುಲೋಕಸಭೆ ಚುನಾವಣೆಯಲ್ಲಿ ಪ್ರಣಬ್ ಮುಖರ್ಜಿ ಮತ್ತು ಇಂದಿರಾ ಗಾಂಧಿ ಅವರ ಜೊತೆ ಪ್ರಚಾರದಲ್ಲಿ ಪಾಲ್ಗೋಂಡಿದ್ದರು.

ಸುಮಾರು 8ರಿಂದ 9 ದಿನಗಳ ಕಾಲ ಕರ್ನಾಟಕದಾದ್ಯಂತ ಪ್ರವಾಸ ಮಾಡಿದ್ದೇವು,ಬೀದರ್ ನಿಂದ ಕಾರವಾರದವರೆಗೂ ಸಂಚರಿಸಿದ್ದೆವು. ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಮತ್ತೆ ಬರಲು ಪ್ರಣಬ್ ಮುಖರ್ಜಿ ಪ್ರಮುಖ ಪಾತ್ರ ವಹಿಸಿದ್ದರು. ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಪ್ರಣಬ್ ಪಾತ್ರ ಮಹತ್ವದ್ದಾಗಿತ್ತು ಎಂದು ಮೊಯ್ಲಿ ತಿಳಿಸಿದ್ದಾರೆ.

ಅದಾದ ನಂತರ ನನಗೆ ಅನೇಕ ಹುದ್ದೆಗಳು ಸಿಗಲು ಮತ್ತು ಅವರು ಕಾರಣರಾಗಿದ್ದರು, ಅವರು ನನ್ನ ರಾಜಕೀಯ ಗುರುಗಳು, ಅಂತವರ ನಿಧನದಿಂದ ತುಂಬಲಾರದ ನಷ್ಟ ಉಂಟಾಗಿದೆ ಎಂದು ಮೊಯ್ಲಿ ಸ್ಮರಿಸಿದ್ದಾರೆ. 
 

Stay up to date on all the latest ರಾಜಕೀಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp