'ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಮೋದಿಯಂತ ನಾಯಕರಿರುವಾಗ ಪಕ್ಷ ಸಂಘಟನೆ ಕಷ್ಟದ ಕೆಲಸವಲ್ಲ'

ಪ್ರವಾಸೋದ್ಯಮ, ಯುವ ಸಬಲೀಕರಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿರುವ ಸಿ.ಟಿ.ರವಿ ಅವರನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಸಿ.ಟಿ ರವಿ
ಸಿ.ಟಿ ರವಿ

ಬೆಂಗಳೂರು: ಪ್ರವಾಸೋದ್ಯಮ, ಯುವ ಸಬಲೀಕರಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿರುವ ಸಿ.ಟಿ.ರವಿ ಅವರನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.  ತಮ್ಮ ನೇಮಕ ಮತ್ತು ಇತರ ವಿಷಯಗಳ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಪ್ರ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದೀರಿ, ನಿಮ್ಮ ಮುಂದಿನ ಯೋಜನೆ ಏನು?
1988 ರಲ್ಲಿ ನಾನು ಚಿಕ್ಕಮಗಳೂರು ಹೋಬಳಿ ಕಾರ್ಯದರ್ಶಿಯಾಗಿದ್ದೆ, ಇಂದು ನಾನು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದೇನೆ, ಪೋಸ್ಟರ್‌ಗಳು ಮತ್ತು ಧ್ವಜಗಳನ್ನು ಹಾಕುವ ಮೂಲಕ ಮತ್ತು ಮೈಕ್ರೊಫೋನ್ ಪ್ರಕಟಣೆಗಳನ್ನು ಮಾಡುವ ಮೂಲಕ ನಾನು ಅತ್ಯಂತ ಕೆಳ ಮಟ್ಟದಿಂದ ಬಂದಿದ್ದೇನೆ. ಸದ್ಯ ನನಗೆ ಈ ಜವಾಬ್ದಾರಿ ನೀಡಿದ್ದಾರೆ, ನನ್ನ ಅನುಭವ ಮತ್ತು ಹಿರಿಯರ ನಿರ್ದೇಶನದ ಮೇರೆಗೆ ನಾನು ಇಲ್ಲಿದ್ದೇನೆ.

ಪ್ರ. ಉತ್ತರ ಪ್ರದೇಶ, ಬಿಹಾರ ಮತ್ತು ರಾಜಸ್ತಾನ ಹಾಗೂ  ಮಧ್ಯಪ್ರದೇಶಗಳಲ್ಲಿ ಹಿಂದಿ ಭಾಷೆ ನಿಮಗೆ ಸವಾಲಾಗಿಲ್ಲವೇ?
ಹಿಂದಿಯಲ್ಲಿ ಮಾತನಾಡುವಷ್ಟು ನಾನು ಸಮರ್ಥನಾಗಿದ್ದೇನೆ, ಹಿಂದಿಯಲ್ಲಿ ನಿರರ್ಗಳವಾಗಿ ಭಾಷಣ ಮಾಡಲು ನನಗೆ ಸಾಧ್ಯವಿಲ್ಲ, ಆದರೆ ನಾನು ಕಲಿಯಲು ಸಿದ್ಧನಿದ್ದೇನೆ.

ಪ್ರ. ಸಾಂಪ್ರದಾಯಿಕವಾಗಿ ಬಿಜೆಪಿ ಬಲಹೀನವಾಗಿರುವ ದಕ್ಷಿಣ ಮತ್ತು ಈಶಾನ್ಯ ರಾಜ್ಯಗಳಲ್ಲಿ ಹೇಗೆ ಪಕ್ಷದ ಬಲವರ್ಧನೆ ಮಾಡುವಿರಿ?
ಯಾವುದೇ ಪಕ್ಷವಾದರೂ ಐದು ಪ್ರಮುಖ ಅಂಶ ಮುಖ್ಯವಾಗಿದೆ. ಸಂಘಟನೆ, ನಾಕತ್ವ, ಪರಿಸ್ಥಿತಿ, ನಿರ್ವಹಣೆ ಮತ್ತು ಸಂಪನ್ಮೂಲ, ಎಲ್ಲಿ ಅವಶ್ಯಕತೆಯಿದೆಯೋ ಅಲ್ಲಿ ನಾನು ಪಕ್ಷವನ್ನು ಕಟ್ಟಲು ಪ್ರತ್ನಿಸುತ್ತೇನೆ, ಅದೊಂದು ಕಾಲದಲ್ಲಿ ಜನಸಂಘ ಮತ್ತು ಅದರ ತತ್ವಗಳ ಬಗ್ಗೆ ತಿಳಿದಿರಲಿಲ್ಲ,ಸದ್ಯ ನಾವು ಹಲವು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದೇವೆ, ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಚ್ಚುಗೆ ಪಡೆದ ಪ್ರಧಾನಿ ನರೇಂದ್ರ ಮೋದಿ ಅವರು ಇರುವಾಗ ನಮಗೆ ಕಷ್ಟವಾಗುವುದಿಲ್ಲ.


ಪ್ರ. ಚಿಕ್ಕಮಗಳೂರು ಜಿಲ್ಲೆಯಿಂದ ಇದೇ ಮೊದಲ ಬಾರಿಗೆ ಉನ್ನತ ಸ್ಥಾನ ಅಲಂಕರಿಸಿದ್ದೀರಿ, ನಿಮ್ಮ ಮುಂದಿನ ನಡೆ ಏನು?ಜಗನ್ನಾಥ ರಾವ್ ಜೋಶಿ ಮತ್ತು ಅನಂತ್ ಕುಮಾರ್ ಅವರಂತ ದೈತ್ಯ ನಾಯಕರಿದ್ದ ಪಕ್ಷ ನಮ್ಮದು, ಅವರಂತ ಕೌಶಲ್ಯ, ಸಾಮರ್ಥ್ಯ ನನಗಿಲ್ಲ, ಆದರೆ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತೇನೆ.

ಹಳೇ ಮೈಸೂರು ಭಾಗದ ಪ್ರಥಮ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದೀರಿ, ಈ ಭಾಗಗಳಲ್ಲಿ ಪಕ್ಷ ಸದೃಡವಾಗಿಸಲು ಹೇಗೆ ಸಹಾಯವಾಗಲಿದೆ?
ಹಳೇ ಮೈಸೂರು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಬಿಜೆಪಿ ಪ್ರಬಲವಾಗಿದೆ,ಮಂಡ್ಯದಲ್ಲೂ ಬಿಜೆಪಿ ಸದೃಢವಾಗಿದೆ, ಕೆಆರ್ ಪೇಟೆಯಲ್ಲಿ ಶಾಸಕರಿದ್ದಾರೆ, ಚಿಕ್ಕಬಳ್ಳಾಪುರ ಮತ್ತು ತುಮಕೂರುಗಳಲ್ಲಿ ನಮ್ಮ ಶಾಸಕರಿದ್ದಾರೆ, ರಾಮನಗರದಲ್ಲಿ ಪಕ್ಷವನ್ನು ಸದೃಢಗೊಳಿಸುವ ಅವಶ್ಯಕತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com