ಬೆಳಗಾವಿ: ಕಾಂಗ್ರೆಸ್ ಜಾತಿ ರಾಜಕಾರಣ ಮಾಡುವುದಿಲ್ಲ. ಏನಿದ್ದರೂ ನೀತಿ ಮೇಲೆ ರಾಜಕಾರಣ ಮಾಡುವ ಮೂಲಕ ಮತ ಕೇಳುತ್ತೇವೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತರು ನಮ್ಮವರೇ, ಮರಾಠರು ನಮ್ಮ ಅಣ್ಣ, ತಮ್ಮಂದಿರಂತೆ. ನಮಗೆ ಎಲ್ಲರೂ ಒಂದೇ. ಬಿಜೆಪಿಯವರೇ ಅವರನ್ನು ಬೇರೆ ಬೇರೆ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಹಕ್ಕು ಹೊಂದಿರುವ ಎಲ್ಲರೂ ಒಂದೇ. ನಾವು ಜಾತಿ ಮೇಲೆ ರಾಜಕಾರಣ ಮಾಡಲ್ಲ. ನೀತಿ ಮೇಲೆ ಮಾಡುತ್ತೇವೆಂದು ಹೇಳಿದ್ದಾರೆ.
ಇದೇ ವೇಳೆ ಬಿಜೆಪಿ ಸರ್ಕಾರವನ್ನು ತೆಗೆದುಕೊಂಡ ಅವರು, ಈ ಸರ್ಕಾರ ಬಂದ ಮೇಲೆ ಸುವರ್ಣಸೌಧದಲ್ಲಿ ಎರಡು ವರ್ಷದಲ್ಲಿ ಒಂದು ಸಣ್ಣ ಸಭೆ ಕೂಡ ಮಾಡಿಲ್ಲ. ಆಗ ಉಮೇಶಅ ಕತ್ತಿ ಪ್ರತ್ಯೇಕ ರಾಜ್ಯ ಮಾಡುತ್ತೇವೆ ಎಂದಿದ್ದರು. ಈಗ ಅವರ ಮಾತೇ ಇಲ್ಲ ಎಂದು ಲೇವಡಿ ಮಾಡಿದರು.
ಕೊರೋನಾ ಸಮಯದಲ್ಲಿ ಕಷ್ಟ ಇದ್ದವರಿಗೆ ನ್ಯಾಯ ಕೊಡಲಾಗಿಲ್ಲ. ಆಂತರಿಕ ಕಚ್ಚಾಟ ಶುರುವಾಗಿ ಸರ್ಕಾರದ ಆಡಳಿತ ಯಂತ್ರ ಕುಸಿದುಹೋಗಿದೆ ಎಂದಿದ್ದಾರೆ.
Advertisement