ಬುಧವಾರ ಸಂಪುಟ ವಿಸ್ತರಣೆ, ಮೊದಲ ಹಂತದಲ್ಲಿ 15 ಸಚಿವರ ಪ್ರಮಾಣ ವಚನ ಸಾಧ್ಯತೆ

ರಾಜ್ಯದಲ್ಲಿ ನೂತನ ಸಂಪುಟ ರಚನೆಯ ಸರ್ಕಸ್ ಇಂದು ಅಥವಾ ನಾಳೆಯೊಳಗೆ ಪೂರ್ಣವಾಗಲಿದ್ದು, ಮೊದಲ ಹಂತದಲ್ಲಿ 15 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ದೆಹಲಿ ಮೂಲಗಳು ಹೇಳಿವೆ.
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ನವದೆಹಲಿ: ರಾಜ್ಯದಲ್ಲಿ ನೂತನ ಸಂಪುಟ ರಚನೆಯ ಸರ್ಕಸ್ ಇಂದು ಅಥವಾ ನಾಳೆಯೊಳಗೆ ಪೂರ್ಣವಾಗಲಿದ್ದು, ಮೊದಲ ಹಂತದಲ್ಲಿ 15 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ದೆಹಲಿ ಮೂಲಗಳು ಹೇಳಿವೆ.

ದೆಹಲಿಯಲ್ಲಿ ಸುದ್ದಿಗಾರರ ಜೊತೆ ಜೊತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಂಭಾವ್ಯ ಸಚಿವರ ಪಟ್ಟಿ ಇಂದು ಅಥವಾ ನಾಳೆಯೊಳಗೆ ಸಿದ್ದವಾಗಲಿದೆ. ನೂತನ ಸಚಿವರ ಪಟ್ಟಿಗೆ ಹೈಕಮಾಂಡ್ ಒಪ್ಪಿಗೆ ನೀಡಿದರೆ ಬುಧವಾರ ಸಂಪುಟ ವಿಸ್ತರಣೆಯಾಗಲಿದೆ ಎಂದರು.

ಈಗಿರುವಂತಹ ರಾಜಕೀಯ ಸನ್ನಿವೇಶದಲ್ಲಿ ಎಲ್ಲರನ್ನು ಸೇರಿಸಿಕೊಂಡು ಹೋಗುವಂತಹ ಒಮ್ಮತದ ನಿರ್ಧಾರ ಕೈಗೊಳ್ಳಬೇಕಿದೆ. ಆದರೆ ಎಲ್ಲಾ ಶಾಸಕರಿಗೂ ಮಂತ್ರಿ ಪದವಿ ಕೊಡಲು ಆಗುವುದಿಲ್ಲ. ಪ್ರಾದೇಶಿಕವಾಗಿಯೂ ಆಯ್ಕೆ ಮಾಡಬೇಕಿದೆ ಎಂದರು.

ವರಿಷ್ಠರನ್ನು ಭೇಟಿ ಮಾಡುತ್ತಿದ್ದೇನೆ. ಬಿಜೆಪಿ ಹೈಕಮಾಂಡ್ ನಿರ್ಧಾರದಂತೆ ಸಂಪುಟ ರಚನೆ ಆಗಲಿದೆ. ಸಮುದಾಯದ ದೃಷ್ಠಿಯಿಂದ, ಹಳಬರನ್ನು ಎಷ್ಟು ಜನರನ್ನು ಮುಂದುವರೆಸಬೇಕು. ಎಷ್ಟು ಜನರಿಗೆ ಮೊದಲ ಹಂತದಲ್ಲಿ ಸಚಿವ ಸ್ಥಾನಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು. ಎಷ್ಟು ಹಂತದಲ್ಲಿ ಸಚಿವ ಸಂಪುಟ ರಚನೆ ಮಾಡಬೇಕು. ಎಷ್ಟು ಜನರಿಗೆ ಡಿಸಿಎಂ ಸ್ಥಾನ ಕೊಡಬೇಕು ಎನ್ನುವ ಕುರಿತಂತೆ ಇಂದು ಚರ್ಚೆಯಾಗಲಿದ್ದು ನಂತರವಷ್ಟೆ ಅಂತಿಮವಾಗಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com