ಸಂಪುಟ ರಚನೆ ಕುರಿತು ಯತ್ನಾಳ್ ಬೆದರಿಕೆ ಹಾಕಬಾರದು: ಕೆ.ಎಸ್.ಈಶ್ವರಪ್ಪ

ವಿಜಯಪುರದ ಜಿಲ್ಲೆಯವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಿದಿದ್ದರೆ, ಬಿಜೆಪಿ ಸರ್ವನಾಶವಾಗುತ್ತದೆ ಎಂಬ ಬೆದರಿಕೆಯ ಹೇಳಿಕೆಗಳನ್ನು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಅವರು ನೀಡುವುದು ಸರಿಯಲ್ಲ ಎಂದು ಕೆ.ಎಸ್.ಈಶ್ವರಪ್ಪ ಅವರು ಹೇಳಿದ್ದಾರೆ. 
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ

ವಿಜಯಪುರ: ವಿಜಯಪುರದ ಜಿಲ್ಲೆಯವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಿದಿದ್ದರೆ, ಬಿಜೆಪಿ ಸರ್ವನಾಶವಾಗುತ್ತದೆ ಎಂಬ ಬೆದರಿಕೆಯ ಹೇಳಿಕೆಗಳನ್ನು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಅವರು ನೀಡುವುದು ಸರಿಯಲ್ಲ ಎಂದು ಕೆ.ಎಸ್.ಈಶ್ವರಪ್ಪ ಅವರು ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸ್ನೇಹಿತನಾಗಿ ಹೇಳುತ್ತೇನೆ. ಬಹಿರಂಗ ಹೇಳಿಕೆ ‌ಕೊಟ್ಟು ಅವರೇ ಹಾಳಾಗುತ್ತಿದ್ದಾರೆ. ಅವರು ನನ್ನ ಆತ್ಮೀಯ ಸ್ನೇಹಿತ. ಹಾಗಾಗಿ ಬಹಿರಂಗ ಹೇಳಿಕೆ ಕೊಡುವುದನ್ನು ತಕ್ಷಣ ನಿಲ್ಲಿಸಬೇಕೆಂದು ಬುದ್ದಿವಾದ ಹೇಳಿದ್ದಾರೆ.

ಕೇಂದ್ರೀಯ ನಾಯಕರು ರಾಜ್ಯದಲ್ಲಿ ಕಳೆದ ಮೂರುಗಳಿಂದ ಇದ್ದು, ಶಾಸಕರು ಅವರೊಂದಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದಾಗಿದೆ. ತಮ್ಮ ದೂರುಗಳನ್ನು ಅವರ ಬಳಿ ಏಕೆ ಯತ್ನಾಳ್ ಹೇಳುತ್ತಿಲ್ಲ? ಸಾಕಷ್ಟು ಬಾರಿ ನಾನು ಯತ್ನಾಳ್ ಜೊತೆಗೆ ಮಾತನಾಡಿದ್ದೇನೆ. ಪಕ್ಷದ ನಿರ್ಧಾರಕ್ಕೆ ತಲೆಬಾಗುವಂತೆ ತಿಳಿಸಿದ್ದೇನೆ. ಮತ್ತೊಮ್ಮೆ ಮಾತನಾಡುವ ಪ್ರಯತ್ನ ಮಾಡುತ್ತೇನೆಂದು ತಿಳಿಸಿದ್ದಾರೆ. 

ಬೊಮ್ಮಾಯಿಯವರ ಉತ್ತಮ ಆಡಳಿತದ ಜೊತೆಗೆ ಮುಂದಿನ ಚುನಾವಣೆ ಎದುರಿಸುತ್ತೇನೆ. ಬಹುಮತ ಪಡೆಯುವತ್ತ ಶ್ರಮ ಪಡುತ್ತೇನೆ. ಆಡಳಿತ ಪಕ್ಷವಾಗಿದ್ದರೂ, ಬಿಜೆಪಿಗೆ ಬಹುಮತ ಪಡೆಯಲು ಸಾಧ್ಯವಾಗುತ್ತಿಲ್ಲ. ಯಾವುದೇ ಪಕ್ಷದ ಸಹಾಯ ಅಥವಾ ನಾಯಕರ ಸಹಾಯವಿಲ್ಲದೆ ಸರ್ಕಾರ ರಚನೆ ಮಾಡುವುದನ್ನು ನಾವು ಬಯಸುತ್ತಿದ್ದೇವೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com