
ಮೈಸೂರು: ಶಿಲ್ಪಾ ನಾಗ್ ಹೆಗಲ ಮೇಲೆ ಬಂದೂಕು ಇಟ್ಟು ರೋಹಿಣಿ ಸಿಂಧೂರಿಗೆ ಶೂಟ್ ಮಾಡಿದ್ದಾರೆ, ಹಾಸನದಿಂದ ಮೈಸೂರಿಗೆ ಬಂದು ಪ್ರೆಸ್‌ಮೀಟ್ ಮಾಡುತ್ತಾರೆ. ಏನಾಗಿದೆ ಮೈಸೂರಿಗೆ? ಎಂದು ಬಿಜೆಪಿ ಮುಖಂಡ ಎಚ್ ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ವಿಶ್ವನಾಥ್, ಭೂ ಹಗರಣದ ಆರೋಪ ಎದುರಿಸುತ್ತಿರುವ ಕಳಂಕಿತರು ಮತ್ತು ಮೈಸೂರಿನ ಪ್ರಾದೇಶಿಕ ಆಯುಕ್ತರ (ಆರ್‌ಸಿ) ನಡುವೆ ಒಳಒಪ್ಪಂದ ಆಗಿದ್ದು, ಎಲ್ಲ ಹಗರಣಗಳನ್ನೂ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ’ ಎಂದು.ವಿಶ್ವನಾಥ್ ಆರೋಪಿಸಿದ್ದಾರೆ.
‘ಶಾಸಕ ಸಾ.ರಾ.ಮಹೇಶ್ ರಾಜಕಾಲುವೆ ಒತ್ತುವರಿ ಮಾಡಿ ಕಲ್ಯಾಣಮಂಟಪ ನಿರ್ಮಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರು ತನಿಖೆಗೆ ತಂಡವನ್ನು ರಚಿಸಿದ್ದಾರೆ. ಅವರು ಯಾವ ರೀತಿಯ ವರದಿ ನೀಡುವರು ಎಂಬುದು ನಮಗೆ ಗೊತ್ತಿದೆ. ಒಳ ಒಪ್ಪಂದ ನಡೆದು ವರದಿ ಈಗಲೇ ಸಿದ್ಧವಾಗಿದೆ. ಸೋಮವಾರ ವರದಿ ಸಲ್ಲಿಸಲಿದ್ದಾರೆ. ಆ ವರದಿಯು ಕಳಂಕಿತರಿಗೆ ಕ್ಲೀನ್‌ಚಿಟ್ ನೀಡಲಿದೆ’ ಎಂದು ತಿಳಿಸಿದರು.
ರಾಜಕಾಲುವೆ ಮೇಲೆ ಕಲ್ಯಾಣ ಮಂಟಪ ನಿರ್ಮಾಣ ಆಗಿದೆ. ಒಂದು ಗುಂಟೆ ಅಲ್ಲ ಸಾವಿರಾರು ಎಕರೆ ಹೋಗಿದೆ. ಎಲ್ಲಾ ಜನಪ್ರತಿನಿಧಿಗಳು ಒಟ್ಟಾಗಿ ಸೇರಿ ಕೊರೋನಾ ಓಡಿಸುವ ಬದಲು ಅಧಿಕಾರಿಗಳನ್ನು ಓಡಿಸಿದರು ಎಂದು ವ್ಯಂಗ್ಯವಾಡಿದ್ದಾರೆ.
ಈಗ ರಿಯಲ್ ಎಸ್ಟೇಟ್ ಇಂಡಸ್ಟ್ರಿಯಾಗಿದೆ. ಸಾ.ರಾ ಮಹೇಶ್ ಯಾವ ಇಂಡಸ್ಟ್ರಿಯಲಿಸ್ವ್? ಎಂಡಿಎ ಅಧ್ಯಕ್ಷ ಯಾವ ಇಂಡಸ್ಟ್ರಿ ಮಾಡಿದ್ದಾರೆ?ಎಷ್ಟುಜನಕ್ಕೆ ಉದ್ಯೋಗ ನೀಡಿದ್ದಾರೆ? ಶಿಲ್ಪಾ ನಾಗ್ ಇಲ್ಲಿ ಬಲಿಪಶುವಾಗಿದ್ದಾರೆ.
‘ಆರ್‌ಸಿ ಕಚೇರಿ ಮುಂದೆ ಗುರುವಾರ ನಡೆದದ್ದು ಹೈಡ್ರಾಮಾ ಅಲ್ಲದೆ ಬೇರೇನೂ ಅಲ್ಲ. ಇಂತಹ ಸಂದರ್ಭದಲ್ಲಿ ಪ್ರಾದೇಶಿಕ ಆಯುಕ್ತರು ಮನವಿ ಸ್ವೀಕರಿಸಿ ಪರಿಶೀಲನೆ ನಡೆಸುತ್ತೇನೆ ಎನ್ನಬೇಕಿತ್ತು. ಆದರೆ ಸ್ಥಳದಲ್ಲೇ ಸಮಿತಿ ರಚನೆ ಮಾಡಿ ಮೂರು ದಿನಗಳಲ್ಲಿ ತನಿಖೆ ಮಾಡಿಸುತ್ತೇನೆ ಎಂದಿದ್ದಾರೆ. ಅವರ ಕಾರ್ಯವೈಖರಿ ನೋಡಿ ಮೈಸೂರಿನ ಜನ ಬೆರಗಾಗಿದ್ದಾರೆ. ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಂಡಿದ್ದಾರೆ’ ಎಂದು ಅನುಮಾನ ವ್ಯಕ್ತಪಡಿಸಿದರು.
Advertisement