ಬಿಜೆಪಿ ಅವಧಿಯಲ್ಲಿ ಬೆಲೆ‌ ಕಳೆದುಕೊಂಡಿರುವುದೆಂದರೆ ಅದು ಮನುಷ್ಯನ ಜೀವ: ಡಿ.ಕೆ. ಶಿವಕುಮಾರ್

ಬಿಜೆಪಿಯ ಅಧಿಕಾರಾವಧಿಯಲ್ಲಿ ಬೆಲೆ ಕಳೆದುಕೊಂಡಿರುವುದು ಎಂದರೆ ಅದು ಮನುಷ್ಯನ ಜೀವ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಶನಿವಾರ ಹೇಳಿದ್ದಾರೆ.
ಡಿಕೆ.ಶಿವಕುಮಾರ್
ಡಿಕೆ.ಶಿವಕುಮಾರ್
Updated on

ಬೆಂಗಳೂರು: ಬಿಜೆಪಿಯ ಅಧಿಕಾರಾವಧಿಯಲ್ಲಿ ಬೆಲೆ ಕಳೆದುಕೊಂಡಿರುವುದು ಎಂದರೆ ಅದು ಮನುಷ್ಯನ ಜೀವ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಶನಿವಾರ ಹೇಳಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. 

ನಮ್ಮ‌ ಆಹಾರವನ್ನು‌ ಸಾಗಿಸುವ ಟ್ರಕ್‌ಗಳು ಡೀಸೆಲ್ ಮೂಲಕ ಚಲಿಸುತ್ತವೆ.‌ ರೈತರು ನೀರಾವರಿ ಪಂಪ್‌ಗಳಿಗಾಗಿ ಡೀಸೆಲ್ ಬಳಸುತ್ತಾರೆ. ಹೆಚ್ಚುತ್ತಿರುವ ಡೀಸೆಲ್-ಪೆಟ್ರೋಲ್ ಬೆಲೆಯಿಂದ ಎಲ್ಲದರ ಬೆಲೆಯೂ‌ ಏರಿಕೆಯಾಗಿದೆ. ಬಿಜೆಪಿಯ ಅವಧಿಯಲ್ಲಿ ಬೆಲೆ‌ ಕಳೆದುಕೊಂಡಿರುವುದೆಂದರೆ ಅದು ಮನುಷ್ಯನ ಜೀವ ಎಂದು ಹೇಳಿದ್ದಾರೆ. 

ಇಂಧನ ದರ ಏರಿಕೆಯ ವಿರುದ್ಧದ ಪ್ರತಿಭಟನೆಗೆ ಜನರ ಅಭೂತಪೂರ್ವ ಪ್ರತಿಕ್ರಿಯೆ ಕಂಡು ಸಂತೋಷವೆನಿಸುತ್ತಿದೆ. ಜನರ ಭಾವನೆಗೆ ಧ್ವನಿಯಾದ ನಮ್ಮನ್ನು ಸುಮ್ಮನಾಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಪೆಟ್ರೋಲ್-ಡೀಸೆಲ್ ಮೇಲಿನ ತೆರಿಗೆಯನ್ನು ಬಿಜೆಪಿ ಈ ಕೂಡಲೇ ಕಡಿಮೆಮಾಡಬೇಕೆಂದು ಆಗ್ರಹಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com