'ವಿಶ್ವನಾಥ್ ನಾಲಿಗೆ ಸಂಸ್ಕೃತಿ ಇಡೀ ರಾಜ್ಯದ ಜನತೆಗೆ ಗೊತ್ತಿದೆ; ಅವರ ಬಗ್ಗೆ ಮಾತನಾಡಿದರೆ ನನ್ನ ಬಾಯಿ ಹೊಲಸಾಗುತ್ತದೆ'

ವಿಶ್ವನಾಥ್ ಹಿರಿಯರು. ಅವರ ಬಾಯಲ್ಲಿ ಅಂತಹ ಶಬ್ಧ ಬರಬಾರದು.‌ ಅವರ ಬಗ್ಗೆ ಮಾತನಾಡಿದರೆ ನನ್ನ ಬಾಯಿ ಹೊಲಸಾಗುತ್ತದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೇಣುಕಾಚಾರ್ಯ
ರೇಣುಕಾಚಾರ್ಯ
Updated on: 

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ಎಸ್. ಎಂ ಕೃಷ್ಣ, ಸಿದ್ದರಾಮಯ್ಯ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಇದೀಗ ಯಡಿಯೂರಪ್ಪ ಸೇರಿದಂತೆ ಯಾರನ್ನು ಬಿಟ್ಟಿಲ್ಲ, ಎಲ್ಲರ ಬಗ್ಗೆಯೂ‌ ಹಗುರವಾಗಿ ಮಾತನಾಡಿದ್ದಾರೆ.

ವಿಶ್ವನಾಥ್ ಹಿರಿಯರು. ಅವರ ಬಾಯಲ್ಲಿ ಅಂತಹ ಶಬ್ಧ ಬರಬಾರದು.‌ ಅವರ ಬಗ್ಗೆ ಮಾತನಾಡಿದರೆ ನನ್ನ ಬಾಯಿ ಹೊಲಸಾಗುತ್ತದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿಶ್ವನಾಥ್ ಅವರೇ ನಿಮ್ಮ ನಾಲಿಗೆ ಸಂಸ್ಕೃತಿ ಇಡೀ ರಾಜ್ಯದ ಜನತೆಗೆ ಗೊತ್ತಿದೆ, ನೀವು ಯಾವ ಪಕ್ಷದಲ್ಲಿರುತ್ತಿರೋ ಆ ಪಕ್ಷದ ನಾಯಕರ ವಿರುದ್ಧವೇ ಮಾತನಾಡುವುದು ನಿಮ್ಮ ಚಾಳಿ" ಎಂದು ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.

ಮುಖ್ಯಮಂತ್ರಿಗಳ ಬಗ್ಗೆ ನೀವು ಹೀಗೆ ಹಗುರವಾಗಿ ಮಾತನಾಡಬಾರದು ಎಂದು ತಾಕೀತು ಮಾಡಿದ ರೇಣುಕಾಚಾರ್ಯ, ವಿಶ್ವನಾಥ್ ಅವರು ಯಾವ ಪಕ್ಷಕ್ಕೂ ನಿಷ್ಠವಾಗಿಲ್ಲ ಎಂದು ಹೇಳಿದ್ದು ನಿಜ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಭದ್ರಾ ಮೇಲ್ದಂಡೆ ಯೋಜನೆ ಕುರಿತು ವಿಶ್ವನಾಥ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಶಾಸಕ ರಾಜೂಗೌಡ, ನಿಮ್ಮ ಹೇಳಿಕೆಯಲ್ಲಿ ಯಾವುದೇ ಸತ್ಯವಿಲ್ಲ, ನಿಮ್ಮ ಹೇಳಿಕೆಯಿಂದ ಪಕ್ಷಕ್ಕೆ ಹಾನಿ ಮಾಡಬೇಡಿ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com