'ಸಿಎಂ ಆಗಿ ಸುದೀರ್ಘ ಕಾಲ ರಾಜ್ಯದ ಆಡಳಿತ ನಡೆಸುವ ಹೆಬ್ಬಯಕೆ ಹೊಂದಿದ್ದ ದೇವೇಗೌಡರಿಗೆ ಪ್ರಧಾನಿಯಾಗಲು ಮನಸ್ಸಿರಲಿಲ್ಲ!'

ಅದು 1996ನೇ ಇಸವಿ, ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ ದೇವೇಗೌಡ ಅವರನ್ನು ದೇಶದ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು.
ಎಚ್.ಡಿ ದೇವೇಗೌಡ
ಎಚ್.ಡಿ ದೇವೇಗೌಡ
Updated on

ಬೆಂಗಳೂರು: ಅದು 1996ನೇ ಇಸವಿ, ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ ದೇವೇಗೌಡ ಅವರನ್ನು ದೇಶದ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು.

ಆದರೆ ಕರ್ನಾಟಕ ರಾಜಕೀಯದಲ್ಲಿ ಮುಂದುವರಿಯಲು , ತಮ್ಮ ವೃತ್ತಿಜೀವನವನ್ನು ರಾಜ್ಯದಲ್ಲೇ ಮುಂದುವರಿಸಲು ಬಯಸಿದ್ದ ಅವರು ಉನ್ನತ ಹುದ್ದೆಯನ್ನು ಅಲಂಕರಿಸಲು ಹಿಂಜರಿದಿದ್ದರು ಎಂಬುದು ಅನೇಕರಿಗೆ ತಿಳಿದಿಲ್ಲ.

ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಆತ್ಮ ಚರಿತ್ರೆ ಬರೆದಿದ್ದು, ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಪಬ್ಲಿಷ್ ಮಾಡಿರುವ ಫರ್ರೋಸ್ ಇನ್ ಎ ಫೀಲ್ಡ್: ದಿ ಅನ್ ಎಕ್ಸ್‌ಪ್ಲೋರ್ಡ್ ಲೈಫ್ ಆಫ್ ಎಚ್‌ಡಿ ದೇವೇಗೌಡ ಎಂಬ ಪುಸ್ತಕ ಶೀಘ್ರವೇ ಬಿಡುಗಡೆಯಾಗಲಿದೆ.

ಪುಸ್ತಕದಲ್ಲಿ ಉಲ್ಲೇಖಿಸಿರುವಂತೆ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಅಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಜ್ಯೋತಿ ಬಸು ಅವರಲ್ಲಿ ಒಂದು ವಿನಂತಿ ಮಾಡಿಕೊಂಡಿದ್ದರು.  ಸರ್,  ನಾನು ಮುಖ್ಯಮಂತ್ರಿಯಾಗಿ 2 ವರ್ಷ ಕಳೆದಿಲ್ಲ, ನನ್ನ ರಾಜಕೀಯ ವೃತ್ತಿ ಜೀವನ ಥಟ್ ಎಂದು ಮುಗಿದು ಹೋಗುತ್ತದೆ, ಏಕೆಂದರೇ ಕಾಂಗ್ರೆಸ್ ಪಕ್ಷ ನಮಗೆ ಹೆಚ್ಚು ಕಾಲ ಸರ್ಕಾರ ನಡೆಸಲು ಬಿಡುವುದಿಲ್ಲನಿಮ್ಮಂತೆ ನಾನು ಇರುತ್ತೇನೆ, ನಾನು ಕರ್ನಾಟಕವನ್ನು ಹಲವು ವರ್ಷಗಳ ಆಳಲು ಬಯಸುತ್ತೇನೆ ಎಂದು ಹೇಳಿದ್ದರಂತೆ.

1994 ರಲ್ಲಿ ರಾಜ್ಯದ ಸಿಎಂ ಸ್ಥಾನ ಅಲಂಕರಿಸುವ ಸಲುವಾಗ ದೇವೇಗೌಡರು ಸುದೀರ್ಘ ಕಾಲಗಳ ಹೋರಾಟ ನಡೆಸಿದ್ದರು, ರಾಜಕೀಯದಲ್ಲಿ ಉತ್ತುಂಗ ಸ್ಥಿತಿಯಲ್ಲಿದ್ದ ದೇವೇಗೌಡರಿಗೆ ಪ್ರಧಾನಿ ಹುದ್ದೆ ಅರಸಿ ಬಂದಿತ್ತು. 1996 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು, ತಮ್ಮ ಪ್ರಧಾನಿ ಹುದ್ದೆಗೆ ರಾಜಿನಾಮೆ ನೀಡಿದ ನಂಂತರ, ದೇವೇಗೌಡರ ಜನತಾ ದಳ ಪಕ್ಷವೂ ಲೋಕಸಭೆ ಚುನಾವಣೆಯಲ್ಲಿ 16 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.

ಯುನೈಟೆಡ್ ಫ್ರಂಟ್ ನಾಯಕರು ತಮ್ಮ ಹೆಸರನ್ನು ಸ್ಥಾನಕ್ಕೆ ಪ್ರಸ್ತಾಪಿಸಿದಾಗ ದೇವೇಗೌಡರು ಆಘಾತಕ್ಕೊಳಗಾದರು.  ಸಮ್ಮಿಶ್ರ ಸರ್ಕಾರಕ್ಕೆ ಕಾಂಗ್ರೆಸ್ ತನ್ನ ಬೆಂಬಲವನ್ನು ದೀರ್ಘಕಾಲದವರೆಗೆ ಮುಂದುವರಿಸುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಅವರ ಊಹೆ ಸರಿ ಎಂದು ಅವರ ರಾಜಕೀಯ ಚಾಣಾಕ್ಷತೆ ಸಾಬೀತು ಪಡಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com