ಕಾಂಗ್ರೆಸ್ ವರಿಷ್ಠರಿಗೆ ಡಿಕೆ ಶಿವಕುಮಾರ್ ಆಪ್ತ; ಹಾಗಾದರೆ ಬಿಟ್ ಕಾಯಿನ್ ರೂವಾರಿಗಳಾರು? ಜಾಯಿನ್‌ ದ ಡಾಟ್ಸ್..!

ರಾಜ್ಯ ರಾಜಕೀಯದಲ್ಲಿ ಬಿಟ್ ಕಾಯಿನ್ ಬಡಿದಾಟ ಜೋರಾಗಿಯೇ ನಡೆಯುತ್ತಿದೆ, ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. ಈ ಸಂಬಂಧ ಬಿಜೆಪಿ ಮತ್ತೆ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದೆ.
ರಾಹುಲ್ ಗಾಂಧಿ, ಡಿಕೆ ಶಿವಕುಮಾರ್ ಮತ್ತು ವಾದ್ರಾ
ರಾಹುಲ್ ಗಾಂಧಿ, ಡಿಕೆ ಶಿವಕುಮಾರ್ ಮತ್ತು ವಾದ್ರಾ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಿಟ್ ಕಾಯಿನ್ ಬಡಿದಾಟ ಜೋರಾಗಿಯೇ ನಡೆಯುತ್ತಿದೆ, ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. ಈ ಸಂಬಂಧ ಬಿಜೆಪಿ ಮತ್ತೆ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದೆ.

ಮೊಹಮ್ಮದ್ ನಲಪಾಡ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಆಪ್ತ, ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ, ಪ್ರಭಾವಿ ಅಳಿಯ ರಾಬರ್ಟ್ ವಾದ್ರಾಗೆ ಆಪ್ತರಾಗಿದ್ದಾರೆ. ಹಾಗಾದರೆ ಈ ಪ್ರಕರಣದ ರೂವಾರಿಗಳು..‌.? ಜಾಯಿನ್‌ ದ ಡಾಟ್ಸ್...ಎಂದು ಟ್ವೀಟ್ ಮಾಡಿದೆ.

ಬಿಟ್ ಕಾಯಿನ್ ವಿಚಾರ ಮೊದಲು ಪ್ರಸ್ತಾಪಿಸಿದ್ದು ಸಿದ್ದರಾಮಯ್ಯ. ಡಿಕೆಶಿ ಬಣದ ನಲಪಾಡ್‌ಗೆ ಅಧಿಕಾರ ತಪ್ಪಿಸುವುದು, ವಿನಾಕಾರಣ ಒಂದು ರಾಜಕೀಯದ ಹುಯಿಲೆಬ್ಬಿಸುವುದೇ ಇದರ ಉದ್ದೇಶ. ಬಿಟ್ ಕಾಯಿನ್ ವಿಚಾರ ಕಾಂಗ್ರೆಸ್ ನಾಯಕರಿಬ್ಬರ ನಡುವೆ ಇರುವ ರಾಜಕೀಯ ವೈಷಮ್ಯದ ಪ್ರತಿಫಲನವಷ್ಟೇ. ಅದರಿಂದಾಚೆಗೆ ಬೇರೇನಿಲ್ಲ ಎಂದು ಹೇಳಿದೆ.

ಶಂಕಿತ ಬಿಟ್ ಕಾಯಿನ್ ಹಗರಣದಿಂದ ಸಿದ್ದರಾಮಯ್ಯ ಒಂದೇ ಕಲ್ಲಿನಲ್ಲಿ ಹಲವು ಹಕ್ಕಿ ಹೊಡೆದಿದ್ದಾರೆ. ತಮ್ಮನ್ನು ಸುತ್ತಿಕೊಂಡ ದಲಿತ ವಿರೋಧಿ ಆರೋಪದಿಂದ ತಪ್ಪಿಸಿಕೊಳ್ಳುವುದು. ಬಿಜೆಪಿ ವಿರುದ್ಧ ಸಲ್ಲದ ಅಪಪ್ರಚಾರ ನಡೆಸುವುದು.  ಡಿಕೆಶಿ ವಿರುದ್ಧ ಮಾತನಾಡಿದ್ದತಮ್ಮ ಆಪ್ತ ಉಗ್ರಪ್ಪ ಅವರನ್ನು ಶಿಸ್ತುಕ್ರಮದಿಂದ ರಕ್ಷಿಸುವುದು. ಮೊಹಮ್ಮದ್ ನಲಪಾಡ್ ಅವರಿಗೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತಪ್ಪಿಸುವುದು,  ಡಿಕೆಶಿ ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವುದು ಎಂದು ಬಿಜೆಪಿ ಟೀಕಿಸಿದೆ.

ಜನವರಿಯಲ್ಲಿ ನನಗೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸಿಗುತ್ತದೆ ಎಂಬ ಕಾರಣಕ್ಕಾಗಿ ನನ್ನನ್ನು ಸಿಲುಕಿಸಲಾಗುತ್ತಿದೆ ಎಂದು ನಲಪಾಡ್ ಆರೋಪಿಸುತ್ತಿದ್ದಾರೆ. ತಮ್ಮ ಆಪ್ತನ ಪುತ್ರ ರಕ್ಷಾ ರಾಮಯ್ಯಗಾಗಿ ಸಿದ್ದರಾಮಯ್ಯ ಅವರು ನಲಪಾಡ್ ವಿರೋಧಿಸಿದ್ದು ರಾಜ್ಯಕ್ಕೆ ತಿಳಿದಿದೆ. ಹಾಗಾದರೆ ಇದರ ಹಿಂದಿರುವುದು!? ಏನು ಎಂದು ಬಿಜೆಪಿ ಪ್ರಶ್ನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com