ವಿಧಾನಪರಿಷತ್ ಚುನಾವಣೆ: ಮಂಡ್ಯದಲ್ಲಿ  ರೈತ ಸಂಘ, ಅಂಬರೀಶ್ ಅಭಿಮಾನಿಗಳ ಬೆಂಬಲ ಪಡೆಯಲು ಅಭ್ಯರ್ಥಿಗಳ ಕಸರತ್ತು!

ಮಂಡ್ಯದಲ್ಲಿ ವಿಧಾನಪರಿಷತ್ ಚುನಾವಣಾ ಪ್ರಚಾರದ ಬಿಸಿ ಹೆಚ್ಚುತ್ತಿದ್ದು, ಪ್ರತಿಷ್ಠಿತ ಸ್ಥಾನವನ್ನು ಗೆಲ್ಲಲು  ಮೂರು ಪ್ರಮುಖ ರಾಜಕೀಯ ಪಕ್ಷಗಳು ಕರ್ನಾಟಕ ರಾಜ್ಯ ರೈತ ಸಂಘ (ಕೆಆರ್‌ಆರ್‌ಎಸ್) ಮತ್ತು ಅಂಬರೀಶ್ ಅವರ ಅಭಿಮಾನಿಗಳ ಮನ ಸೆಳೆಯಲು ಮುಂದಾಗಿದ್ದಾರೆ. 
ಅಂಬರೀಶ್
ಅಂಬರೀಶ್
Updated on

ಮೈಸೂರು: ಮಂಡ್ಯದಲ್ಲಿ ವಿಧಾನಪರಿಷತ್ ಚುನಾವಣಾ ಪ್ರಚಾರದ ಬಿಸಿ ಹೆಚ್ಚುತ್ತಿದ್ದು, ಪ್ರತಿಷ್ಠಿತ ಸ್ಥಾನವನ್ನು ಗೆಲ್ಲಲು  ಮೂರು ಪ್ರಮುಖ ರಾಜಕೀಯ ಪಕ್ಷಗಳು ಕರ್ನಾಟಕ ರಾಜ್ಯ ರೈತ ಸಂಘ (ಕೆಆರ್‌ಆರ್‌ಎಸ್) ಮತ್ತು ಅಂಬರೀಶ್ ಅವರ ಅಭಿಮಾನಿಗಳ ಮನ ಸೆಳೆಯಲು ಮುಂದಾಗಿದ್ದಾರೆ. 

ಇದರಿಂದ ರಾಜಕೀಯ ಪಕ್ಷಗಳಷ್ಟೇ ಅಲ್ಲ, ಸ್ಥಳೀಯ ನಾಯಕರೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು, ಅಭ್ಯರ್ಥಿಯನ್ನು ಗೆಲ್ಲಿಸಲು ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಜನತಾದಳ (ಜಾತ್ಯತೀತ) ಹಾಲಿ ಸದಸ್ಯ ಅಪ್ಪಾಜಿಗೌಡ, ಬಿಜೆಪಿಯಿಂದ ಬೂಕಹಳ್ಳಿ ಮಂಜು ಮತ್ತು ಕಾಂಗ್ರೆಸ್‌ ದಿನೇಶ್ ಗೂಳಿಗೌಡ ಅವರನ್ನು ಕಣಕ್ಕಿಳಿಸಿದೆ.

ಅಪ್ಪಾಜಿಗೌಡ ಅವರನ್ನು ಹೊರತುಪಡಿಸಿ ಉಳಿದ ಇಬ್ಬರು ಹೊಸ ಮುಖಗಳು ಜೆಡಿಎಸ್ ವಿರುದ್ಧ ಸಕ್ಕರೆ ನಾಡಿನಲ್ಲಿ  ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.  ಏಳು ಹಾಲಿ ಶಾಸಕರನ್ನು ಹೊಂದಿರುವ ಜೆಡಿಎಸ್  ಜಿಲ್ಲೆಯಲ್ಲಿ ಭದ್ರ ನೆಲೆ ಹೊಂದಿದೆ. ಕುಮಾರಸ್ವಾಮಿ ಅವರ ಮೇಲಿನ ಅಭಿಮಾನ ಮತ್ತು ಮಂಡ್ಯದ ಜನತೆ ಮತ್ತು ರೈತರ ಮೇಲಿನ ಅವರ ಬದ್ಧತೆಯನ್ನು ಮುಂದಿಟ್ಟು ಜೆಡಿಎಸ್ ಚುನಾವಣೆ ಎದುರಿಸುತ್ತಿದೆ. 

ಪರಿಷತ್ ಚುನಾವಣೆಯಲ್ಲಿ ಗೆಲುವು ಮುಂಬರುವ ತಾಲೂಕ್, ಜಿಲ್ಲಾ ಪಂಚಾಯಿತಿ ಮತ್ತು ಸಾರ್ವತ್ರಿಕ ಚುನಾವಣೆಯ ಟ್ರೆಂಡ್ ಆಗಲಿದೆ ಎಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಶಾಸಕರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ ನೇತೃತ್ವದಲ್ಲಿ ದಿನೇಶ್ ಗೂಳಿಗೌಡರ ಪ್ರಚಾರವನ್ನು ಕಾಂಗ್ರೆಸ್  ಚುರುಕುಗೊಳಿಸಿದೆ. 

ಕಾಂಗ್ರೆಸ್ ತನ್ನ ಸಾಂಪ್ರದಾಯಿಕ ಮತದಾರರನ್ನು ಸಜ್ಜುಗೊಳಿಸುವುದರ ಹೊರತಾಗಿ, ಆಡಳಿತ ವಿರೋಧಿ ಅಧಿಕಾರವನ್ನು ಅವಲಂಬಿಸಿದೆ ಮತ್ತು ಹಾಲಿ ಸದಸ್ಯರು ಕಾರ್ಯನಿರ್ವಹಣೆ ಮಾಡದ ಆರೋಪವನ್ನು ಮಾಡುತ್ತಿದೆ. 4,250 ಮತದಾರರಿರುವ ಸುಮಾರು 370 ಪಂಚಾಯಿತಿ ಸದಸ್ಯರನ್ನು ಹೊಂದಿರುವ ರೈತ ಸಂಘದ ಬಾಗಿಲು  ಬಡಿಯುತ್ತಿದ್ದಾರೆ. ನಿರ್ಣಾಯಕ ಮತಗಳನ್ನು ಗಳಿಸಲು ಕೆಆರ್‌ಆರ್‌ಎಸ್ ನಾಯಕಿ ಸುನೀತಾ ಪುಟ್ಟಣ್ಣಯ್ಯ ಮತ್ತಿತರರನ್ನು ಭೇಟಿ ಮಾಡಿದ್ದಾರೆ.

ಮತ್ತೊಂದೆಡೆ ಸಚಿವ ನಾರಾಯಣಗೌಡ, ಶತಾಯಗತಾಯ ಬಿಜೆಪಿ ಅಭ್ಯರ್ಥಿ ಮಂಜು ಗೆಲುವಿಗೆ ಮುಂದಾಗಿದ್ದಾರೆ. ಕೆಆರ್ ಪೇಟೆ ಮತ್ತು ಇತರ ತಾಲೂಕುಗಳಲ್ಲಿ ಬಹುಮತವಿದೆ ಎಂದು ಹೇಳಿಕೊಂಡು ಜೆಡಿಎಸ್ ಮತ್ತು ಕಾಂಗ್ರೆಸ್ ಮತಗಳನ್ನು ಸೆಳೆಯಲು ಯತ್ನಿಸುತ್ತಿದ್ದಾರೆ.   ಮಂಜು ಅವರು ವೈಯಕ್ತಿಕವಾಗಿ ಕೆಲವು ಸ್ಥಳೀಯ ರೈತ ಸಂಘದ ಮುಖಂಡರಿಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. 

ಏತನ್ಮಧ್ಯೆ, ಮಂಡ್ಯ ಸಂಸದೆ ಸುಮಲತಾ ಅವರು ಯಾವುದೇ ಅಭ್ಯರ್ಥಿಗೆ ಬೆಂಬಲ ನೀಡದೆ ತಟಸ್ಥರಾಗಿರಲು ನಿರ್ಧರಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಜನರು ತಮ್ಮನ್ನು ಬೆಂಬಲಿಸಿದ್ದಾರೆ ಮತ್ತು ನಿರ್ದಿಷ್ಟ ಅಭ್ಯರ್ಥಿಯನ್ನು ಬೆಂಬಲಿಸುವ ಮನಸ್ಥಿತಿಯಲ್ಲಿಲ್ಲ ಎಂದು ಸುಮಲತಾ ಹೇಳಿದ್ದಾರೆ.  ನಾನು ಉತ್ತಮ ಅಭ್ಯರ್ಥಿಗೆ ಮತ ಹಾಕುತ್ತೇನೆ ಎಂದು ಅವರು ಹೇಳಿದ್ದಾರೆ. 

ಇದರ ಹೊರತಾಗಿಯೂ, ಬಿಜೆಪಿ ತನ್ನ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಒತ್ತಾಯಿಸಿದೆ ಮತ್ತು ಕಾಂಗ್ರೆಸ್ ನಾಯಕರು ಅವರ ಅನುಯಾಯಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆಯನ್ನು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಳ್ಳಿಹಾಕಿದ್ದರೂ, ಈ ಕುರಿತು ನಿರ್ಧಾರ ಕೈಗೊಳ್ಳಲು ಮುಖಂಡರು ಹಾಗೂ ಪದಾಧಿಕಾರಿಗಳ ಸಭೆ  ಕರ್ನಾಟಕ ರಾಜ್ಯ ರೈತ ಸಂಘ ಕರೆದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com