ಪ್ರಧಾನಿ ಮೋದಿ ಚಿಲ್ಲರೆ ಮನುಷ್ಯ ಅಲ್ಲ, ಚಿನ್ನದ ಗಟ್ಟಿ: ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಈಶ್ವರಪ್ಪ ತಿರುಗೇಟು

ಪ್ರಧಾನಿ ಮೋದಿ ಚಿಲ್ಲರೆ ಮನುಷ್ಯ ಅಲ್ಲ. ಚಿನ್ನದ ಗಟ್ಟಿ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಕೆಎಸ್ ಈಶ್ವರಪ್ಪ
ಕೆಎಸ್ ಈಶ್ವರಪ್ಪ

ಕಲಬುರಗಿ: ಪ್ರಧಾನಿ ಮೋದಿ ಚಿಲ್ಲರೆ ಮನುಷ್ಯ ಅಲ್ಲ. ಚಿನ್ನದ ಗಟ್ಟಿ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಮೋದಿ ಚಿಲ್ಲರೆ ಮನುಷ್ಯ ಅವರ ಮಾತಿಗೆ ಬೆಲೆ ಕೊಡಬೇಡಿ ಎಂಬ ಖರ್ಗೆ ಅವರ ಹೇಳಿಕೆಯನ್ನು ಖಂಡಿಸಿದ ಸಚಿವರು, ಪ್ರಧಾನಿ ಮೋದಿ ಚಿಲ್ಲರೆ ಮನುಷ್ಯ ಅಲ್ಲ. ಚಿನ್ನದ ಗಟ್ಟಿ. ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಬಾಯ್ತಪ್ಪಿ ಹೇಳಿಕೆ ನೀಡಿದ್ದರೆ ಕ್ಷಮೆಯಾಚಿಸಲಿ. ಇಲ್ಲದಿದ್ದರೇ ಮೋದಿ ಚಿಲ್ಲರೆ ಎಂಬುದರ ಬಗ್ಗೆ ವಿವರಣೆ ಕೊಡಲಿ ಎಂದು ಆಗ್ರಹಿಸಿದರು.

ಖರ್ಗೆ ಅವರ ಮೇಲೆ ತುಂಬಾ ಗೌರವ ಇದೆ. ಮೋದಿ ವಿರುದ್ಧ ಖರ್ಗೆ ಮಾತಾಡಿರುವುದು ನನಗೆ ಅತ್ಯಂತ ನೋವಾಗಿದೆ. ನನ್ನ ರಾಜಕೀಯ ಜೀವನದಲ್ಲಿ ಎಂದು ಸಹ ಇಷ್ಟು ಬೇಸರವಾಗಿರಲಿಲ್ಲ. ಆದರೆ, ವಿಶ್ವವೇ ಮೆಚ್ಚಿದ ನಾಯಕನ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹಾಗೇ ಮಾತನಾಡಬಾರದಿತ್ತು. ಖರ್ಗೆಯವರ ಮಾತು ಅವರಿಗೆ ಸರಿಯನಿಸಿದರೆ ನಾನು ಏನನ್ನು ಹೇಳುವುದಿಲ್ಲ. ಖರ್ಗೆ ಅವರು ಕ್ಷಮೆ ಕೇಳಿದರೆ ಅವರ ಗೌರವ ಮತ್ತಷ್ಟು ಹೆಚ್ಚಾಗಲಿದೆ ಎಂದರು.

ಬಿಜೆಪಿಯ ಶಾಸಕರು ಸಿಂಹ ಇದ್ದಹಾಗೆ, ನಮ್ಮ ಶಾಸಕರು ಮಾರಾಟದ ವಸ್ತುಗಳಲ್ಲ. ಬಿಜೆಪಿಯ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮಾತೇ ಇಲ್ಲ. 40 ಅಲ್ಲ, 4 ಜನ ಶಾಸಕರನ್ನು ಕಾಂಗ್ರೆಸ್ ಪಕ್ಷ ಸೆಳೆಯಲಿ ನೋಡೋಣ ಎಂದು ಈಶ್ವರಪ್ಪ ಸವಾಲು ಹಾಕಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com