ಸಿಡಿ ತಡೆಯಾಜ್ಞೆ ತಂದ ಸಚಿವರಿಗೆ ಮಹಿಳೆಯರ ಬದುಕಿನ ಬಗ್ಗೆ ಏಕಿಷ್ಟು ಆಸಕ್ತಿ! ಕಂಡವರ ಪತ್ನಿಯರ ಲೆಕ್ಕ ಸಿಗಲಿಲ್ಲವೇ?

ಸಚಿವ ಸುಧಾಕರ್ ಮಹಿಳೆಯರ ಬಗ್ಗೆ ನೀಡಿರುವ ಹೇಳಿಕೆ ಸಂಬಂಧ ಕರ್ನಾಟಕ ಕಾಂಗ್ರೆಸ್ ಹರಿಹಾಯ್ದಿದೆ, ಇಷ್ಟಕ್ಕೂ ಸಿಡಿ ತಡೆಯಾಜ್ಞೆ ತಂದ ಸಚಿವರಿಗೆ ಮಹಿಳೆಯರ ಬದುಕಿನ ಬಗ್ಗೆ ಏಕಿಷ್ಟು ಆಸಕ್ತಿ ಎಂದು ಪ್ರಶ್ನಿಸಿದೆ.
ಕೆ.ಸುಧಾಕರ್
ಕೆ.ಸುಧಾಕರ್
Updated on

ಬೆಂಗಳೂರು: ಸಚಿವ ಸುಧಾಕರ್ ಮಹಿಳೆಯರ ಬಗ್ಗೆ ನೀಡಿರುವ ಹೇಳಿಕೆ ಸಂಬಂಧ ಕರ್ನಾಟಕ ಕಾಂಗ್ರೆಸ್ ಹರಿಹಾಯ್ದಿದೆ, ಇಷ್ಟಕ್ಕೂ ಸಿಡಿ ತಡೆಯಾಜ್ಞೆ ತಂದ ಸಚಿವರಿಗೆ ಮಹಿಳೆಯರ ಬದುಕಿನ ಬಗ್ಗೆ ಏಕಿಷ್ಟು ಆಸಕ್ತಿ ಎಂದು ಪ್ರಶ್ನಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್  ಸುಧಾಕರ್ ಅವರು ಹಿಂದೊಮ್ಮೆ 'ಯಾರೂ ಏಕಪತ್ನಿ ವ್ರತಸ್ಥರಿಲ್ಲ' ಎಂದಿದ್ದರು,ಈಗ 'ಮಹಿಳೆಯರು ವಿವಾಹವಾಗಲು ನಿರಾಕರಿಸುತ್ತಿದ್ದಾರೆ' ಎಂದಿದ್ದಾರೆ. ಸುಧಾಕರ್ ಅವರೇ, ತಮ್ಮ ಎರಡೂ ತರ್ಕದಲ್ಲಿ ವೈರುಧ್ಯವಿದೆ, ಕಂಡವರ ಪತ್ನಿಯರ ಲೆಕ್ಕ ಸಿಗಲಿಲ್ಲವೇ!?ಇಷ್ಟಕ್ಕೂ ಸಿಡಿ ತಡೆಯಾಜ್ಞೆ ತಂದ ಸಚಿವರಿಗೆ ಮಹಿಳೆಯರ ಬದುಕಿನ ಬಗ್ಗೆ ಏಕಿಷ್ಟು ಆಸಕ್ತಿ ಎಂದು ಲೇವಡಿ ಮಾಡಿದೆ.

ಮಹಿಳೆಯರ ಬಗ್ಗೆ ಸಚಿವ ಸುಧಾಕರ್ ಆಡಿದ ಮಾತು ಮಹಿಳಾ ಸ್ವಾತಂತ್ರವನ್ನು ಅಣಕಿಸುವಂತಿದೆ, ಸುಧಾಕರ್  ಅವರೇ, ಮಹಿಳೆಯರ ಬದುಕಿನ ಆಯ್ಕೆಯನ್ನು ನಿರ್ಧರಿಸಲು ನೀವು ಯಾರು? ಪುರುಷ ಯಜಮಾನಿಕೆಯನ್ನು ಮುಂದುವರೆಸುವ ಹವಣಿಕೆ ನಿಮಗೇಕೆ? ಮನುವಾದವನ್ನು ನಂಬಿದ ಬಿಜೆಪಿಯ ಮಹಿಳಾ ವಿರೋಧಿ ಕುತಂತ್ರಗಳು ಅವರ ಮಾತುಗಳಲ್ಲಿಯೇ ವ್ಯಕ್ತವಾಗುತ್ತಿದೆ ಎಂದು ಹೇಳಿದೆ.

ಆಧುನಿಕ ಮಹಿಳೆಯರು ವಿವಾಹವಾಗಲು, ಮಕ್ಕಳನ್ನು ಹೆರಲು ನಿರಾಕರಿಸುತ್ತಿದ್ದಾರೆ ಎಂದಿರುವ ಸುಧಾಕರ್ ಅವರೇ ಮದುವೆಯಾದರೂ 'ಸಿಂಗಲ್' ಆಗಿರುವ ಮೋದಿಯವರ ಬಗ್ಗೆಯೂ ಹೀಗೆ ಹೇಳುವ ಧೈರ್ಯವಿದೆಯೇ?! ಮಹಿಳೆಯರ ಬದುಕನ್ನ ನಿರ್ಧರಿಸುವ, ಅವರ ಆಯ್ಕೆಯನ್ನು ನಿಯಂತ್ರಿಸುವ, ಅವರ ಸ್ವತಂತ್ರ ಪ್ರಶ್ನಿಸುವ ಬಿಜೆಪಿಗೂ ತಾಲಿಬಾನ್‌ಗೂ ವ್ಯತ್ಯಾಸವಿಲ್ಲ ಎಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com