ಮೈಸೂರು ಪಾಲಿಕೆ ವಾರ್ಡ್ 36 ಮತ್ತು ಕೋಲಾರ 12ನೇ ವಾರ್ಡ್ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು 

ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 36ರ ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಕಾಂಗ್ರೆಸ್ ನ ರಜನಿ ಅಣ್ಣಯ್ಯ ಗೆಲುವು ಕಂಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು
ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು
Updated on

ಮೈಸೂರು: ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 36ರ ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಕಾಂಗ್ರೆಸ್ ನ ರಜನಿ ಅಣ್ಣಯ್ಯ ಗೆಲುವು ಕಂಡಿದ್ದಾರೆ.

ರಜನಿ ಅಣ್ಣಯ್ಯ ಅವರು ಒಟ್ಟು ಸಾವಿರದ 997 ಮತಗಳ ಅಂತರದೊಂದಿಗೆ ಗೆಲುವು ಕಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಲೀಲಾವತಿ, ಬಿಜೆಪಿಯ ಶೋಭಾ ಸ್ಪರ್ಧಿಸಿದ್ದರು. ರಜನಿಯವರಿಗೆ 4 ಸಾವಿರದ 113 ಮತಗಳು ಬಂದಿದ್ದರೆ, ಜೆಡಿಎಸ್ ನ ಲೀಲಾವತಿಯವರಿಗೆ 2,116 ಮತಗಳು, ಬಿಜೆಪಿಯ ಶೋಭಾ ಅವರಿಗೆ 601 ಮತಗಳಷ್ಟೇ ಬಂದಿವೆ. ಈ ಹಿಂದೆ ಈ ವಾರ್ಡ್ ಜೆಡಿಎಸ್ ತೆಕ್ಕೆಯಲ್ಲಿತ್ತು.


ಇನ್ನು ಕೆಜಿಎಫ್ ಮಹಾನಗರ ಪಾಲಿಕೆಯ 12ನೇ ವಾರ್ಡ್ ಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೊನಿಶಾ 696 ಮತಗಳೊಂದಿಗೆ ಗೆಲುವು ಸಾಧಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿ ಜಯದೇವಿ 338 ಮತಗಳನ್ನು ಗಳಿಸಿದರೆ, ಬಿಜೆಪಿಯ ನಂದಿನಿ ದೇವಿ 293 ಮತಗಳನ್ನು ಗಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com