ಕಲಬುರಗಿ ಪಾಲಿಕೆ: ಹೆಚ್ಚು ಸೀಟು ಗೆದ್ದರೂ ಮೇಯರ್ ಅಧಿಕಾರ ಹಿಡಿಯುವಲ್ಲಿ ಕಾಂಗ್ರೆಸ್ ಗೆ ಹಿನ್ನಡೆ, ಆಟ ಇನ್ನೂ ಬಾಕಿ ಉಳಿಸಿಕೊಂಡ ಬಿಜೆಪಿ

5 ಸದಸ್ಯ ಬಲದ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗಳಿಸಿದರೂ ಕೂಡ ಕಾಂಗ್ರೆಸ್ ಬಹುಮತ ಪಡೆಯುವಲ್ಲಿ 4 ಸೀಟುಗಳಿಗೆ ವಿಫಲವಾಗಿ ಅಧಿಕಾರ ಪಡೆಯುವಲ್ಲಿ ಸೋತಿದೆ.
ಬಿಜೆಪಿ ಕಾರ್ಯಕರ್ತರ ಸಂಭ್ರಮ
ಬಿಜೆಪಿ ಕಾರ್ಯಕರ್ತರ ಸಂಭ್ರಮ

ಕಲಬುರಗಿ: 55 ಸದಸ್ಯ ಬಲದ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗಳಿಸಿದರೂ ಕೂಡ ಕಾಂಗ್ರೆಸ್ ಬಹುಮತ ಪಡೆಯುವಲ್ಲಿ 4 ಸೀಟುಗಳಿಗೆ ವಿಫಲವಾಗಿ ಅಧಿಕಾರ ಪಡೆಯುವಲ್ಲಿ ಸೋತಿದೆ. ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ 27 ಸೀಟುಗಳನ್ನು ಗೆದ್ದರೆ ಬಿಜೆಪಿ 23 ಸೀಟುಗಳನ್ನು ಗೆದ್ದು ಎರಡು ರಾಷ್ಟ್ರೀಯ ಪಕ್ಷಗಳು ಪ್ರಬಲ ಪೈಪೋಟಿ ನಡೆಸಿವೆ. ಇನ್ನು ಜೆಡಿಎಸ್ ನಾಲ್ಕು ಸೀಟುಗಳನ್ನು ಗೆದ್ದುಕೊಂಡಿದೆ.ಓರ್ವ ಸ್ವತಂತ್ರ ಅಭ್ಯರ್ಥಿ ಗೆದ್ದಿದ್ದಾರೆ.

ಮೇಯರ್ ಚುನಾವಣೆಯನ್ನು ಗೆಲ್ಲಬೇಕಾದರೆ ಚುನಾವಣೆಯಲ್ಲಿ ನಿಂತ ಅಭ್ಯರ್ಥಿಗಳು ಗೆದ್ದ ಕಾರ್ಪೊರೇಟರ್ ಗಳಿಂದ 31 ಮತಗಳನ್ನು ಪಡೆಯಬೇಕು. ಚುನಾಯಿತ ಕಾರ್ಪೊರೇಟರ್ ಗಳ ಜೊತೆಗೆ ಕಲಬುರಗಿಯ ಇಬ್ಬರು ಶಾಸಕರು, ಸ್ಥಳೀಯ ವಿಧಾನ ಪರಿಷತ್ ಸದಸ್ಯರು, ಸಂಸದ ಡಾ ಉಮೇಶ್ ಜಾಧವ್ ಮತ್ತು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಕೂಡ ಮತದಾನದ ಹಕ್ಕು ಹೊಂದಿದ್ದಾರೆ.

27 ಸೀಟುಗಳು, ಕಲಬುರಗಿ ಉತ್ತರ ಶಾಸಕ ಕನೀಝ್ ಫಾತಿಮ ಮತ್ತು ರಾಜ್ಯ ಸಭಾ ಸದಸ್ಯ ಖರ್ಗೆಯವರ ಮತಗಳನ್ನು ಸೇರಿಸಿದರೂ ಕಾಂಗ್ರೆಸ್ ಎರಡು ಮತಗಳಲ್ಲಿ ಮೇಯರ್ ಚುನಾವಣೆಗೆ ಹಿನ್ನಡೆ ಅನುಭವಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com