ಕಾಂಗ್ರೆಸ್ ಲಿಂಗಾಯತ ನಾಯಕರ ಸಭೆ: ಸಮುದಾಯದ ಮತಗಳ ಸೆಳೆಯಲು ಯತ್ನ

ವೀರಶೈವ ಲಿಂಗಾಯತ ಸಮುದಾಯದ ಮತಗಳನ್ನು ಕಾಂಗ್ರೆಸ್‌ನತ್ತ ಸೆಳೆಯುವುದು ಹಾಗೂ ಸಮುದಾಯದ ಎರಡನೇ ಹಂತದ ನಾಯಕರಿಗೆ ಪ್ರಾತಿನಿಧ್ಯ ಸಿಗುವಂತೆ ಮಾಡುವ ಕುರಿತು ಕಾಂಗ್ರೆಸ್‌ನ ವೀರಶೈವ ಲಿಂಗಾಯತ ಸಮುದಾಯದ ನಾಯಕರು ಗುರುವಾರ ನಗರದಲ್ಲಿ ಸಭೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಲಿಂಗಾಯತ ಸಭೆ
ಲಿಂಗಾಯತ ಸಭೆ

ಬೆಂಗಳೂರು: ವೀರಶೈವ ಲಿಂಗಾಯತ ಸಮುದಾಯದ ಮತಗಳನ್ನು ಕಾಂಗ್ರೆಸ್‌ನತ್ತ ಸೆಳೆಯುವುದು ಹಾಗೂ ಸಮುದಾಯದ ಎರಡನೇ ಹಂತದ ನಾಯಕರಿಗೆ ಪ್ರಾತಿನಿಧ್ಯ ಸಿಗುವಂತೆ ಮಾಡುವ ಕುರಿತು ಕಾಂಗ್ರೆಸ್‌ನ ವೀರಶೈವ ಲಿಂಗಾಯತ ಸಮುದಾಯದ ನಾಯಕರು ಗುರುವಾರ ನಗರದಲ್ಲಿ ಸಭೆ ನಡೆಸಿದ್ದಾರೆಂದು ತಿಳಿದುಬಂದಿದೆ. 

ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಈಶ್ವರ್ ಖಂಡ್ರೆ ಮತ್ತು ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಈ ಸಭೆ ನಡೆಸಿದ್ದು, 2023ರ ವಿಧಾನಸಭೆ ಚುನಾವಣೆ ತಯಾರಿ ಕುರಿತು ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ. 

ಯಡಿಯೂರಪ್ಪ ಅವರನ್ನು ಅಗೌರವದಿಂದ ನಡೆಸಿಕೊಂಡಿದ್ದು ಹಾಗೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದನ್ನೇ ಲಾಭವಾಗಿ ಮಾಡಿಕೊಳ್ಳಲು ಕಾಂಗ್ರೆಸ್ ಯತ್ನಿಸುತ್ತಿದೆ. 

ಸಭೆ ಕುರಿತು ಮಾತನಾಡಿರುವ ಯುವ ಕಾಂಗ್ರೆಸ್ ಮಾಡಿ ಅಧ್ಯಕ್ಷ ಬಸನಗೌಡ ಬಾದರ್ಲಿಯವರು, ಹೆಚ್ಚೆಚ್ಚು ಲಿಂಗಾಯತರನ್ನು ಕಾಂಗ್ರೆಸ್'ಗೆ ಸೆಳೆದು, ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡುತ್ತೇವೆಂದು ಹೇಳಿದ್ದಾರೆ. 

ಸಭೆಯಲ್ಲಿ ವಿಜಯ ಮತ್ತಿಕಟ್ಟಿ, ಆನಂದ ಅಂಗಡಿ ಗದ್ದೆದೇವರಮಠ, ಶರಣಪ್ಪ ಮತ್ತೂರು, ಚಂದ್ರಶೇಖರ ಪಾಟೀಲ್, ನಾಗರಾಜ್ ಚೆಬ್ಬಿ, ಅಲ್ಲಮಪ್ರಭು ಪಾಟೀಲ್, ಅನಿಲ್ ಪಾಟೀಲ್, ಪ್ರಕಾಶ್ ಕೋಳಿವಾಡ, ಅನಿಲ್ ಕುಮಾರ್ ತಡಕಲ್, ಮಹಾಂತೇಶ್ ಎಂ ಪಿ ಪ್ರಕಾಶ್, ಲತಾ ಎಂ ಪಿ ಪ್ರಕಾಶ್, ಅರುಣ್ ಎಂ ಬಿ ಪಾಟೀಲ್, ದಿನೇಶ್ ಶಿವಮೊಗ್ಗ, ಇತರರು ಪಾಲ್ಗೊಂಡಿರುವುದು ಕಂಡು ಬಂದಿತ್ತು. 

ಸಭೆಯ ಬಳಿಕ ಮಾತನಾಡಿದ ಮಾಜಿ ಎಂಎಲ್‌ಸಿ ನಾಗರಾಜ್ ಛಬ್ಬಿ, ಎರಡನೇ ಹಂತದ ಕಾರ್ಯಕರ್ತರ ಸಭೆ ಆಗಿದೆ. ನಮ್ಮಲ್ಲಿ ನಾಯಕತ್ವದ ಕೊರತೆಯಿದೆ. ಪಕ್ಷದಲ್ಲಿ ಇರುವ ನಾಯಕತ್ವ ತೆಗೆದುಕೊಂಡು ಹೈಕಮಾಂಡ್‌ಗೆ ಮುಟ್ಟಿಸುವ ಕೊರತೆ ಆಗಿದೆ. ಈ ನಿಟ್ಟಿನಲ್ಲಿ ನಾಯಕತ್ವ ಕೊರತೆ ನೀಗಿಸುವ ಬಗ್ಗೆ ಚರ್ಚೆ ಆಗಿದೆ ಎಂದು ತಿಳಿಸಿದರು.

ಮುಂಬರುವ ದಿನಗಳಲ್ಲಿ ಅವಕಾಶ ವಂಚಿತರಿಗೆ ಅವಕಾಶ ಸಿಗಬೇಕು. ಈ ಕೆಲಸವನ್ನು ನಾಯಕರು ಮಾಡಬೇಕು. ಅದಕ್ಕಾಗಿ ಇವತ್ತು ನಾವು ಇಲ್ಲಿ ಸೇರಿ ಸಭೆ ಮಾಡಿದ್ದೇವೆ. ಇದನ್ನು ಹೈಕಮಾಂಡ್ ಗಮನ ಹರಿಸಬೇಕು. ಹೆಚ್ಚಿನ ಆದ್ಯತೆಯನ್ನು ಸಮುದಾಯದ ಕಾರ್ಯಕರ್ತರಿಗೆ ಕೊಡಬೇಕು ಎಂದು ಒತ್ತಾಯಿಸಿದರು.

ಬಸವನಗೌಡ ಬಾದರ್ಲಿ ಬಹಳ ದಿನದಿಂದ ಈ ಹೋರಾಟ ಮಾಡಿದ್ದಾರೆ. ನಾನು ಎರಡು ದಿನಗಳಿಂದ ಅವರ ಜೊತೆ ಸೇರಿಕೊಂಡಿದ್ದೇನೆ. ಈ ಹೋರಾಟ ಸದ್ಯಕ್ಕೆ ಮುಗಿಯುವುದಿಲ್ಲ. ಮುಂದಿನ ದಿನಗಳಲ್ಲಿ ನಾವು ಇದನ್ನು ಮುಂದೆ ತೆಗೆದುಕೊಂಡು ಹೋಗುತ್ತೇವೆ. ಡಿಕೆ ಶಿವಕುಮಾರ್‌ ಅವರು ಅನೇಕ ಸಹಕಾರ ಕೊಟ್ಟಿದ್ದಾರೆ. ಸಮುದಾಯದ ಶ್ರೀಗಳು ಸಹ ಡಿಕೆ ಶಿವಕುಮಾರ್‌ ಅವರನ್ನು ಭೇಟಿ‌ ಮಾಡಿದ್ದಾರೆ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೂ ನಾವು ಮನವಿ ‌ಮಾಡುತ್ತೇವೆ. ಅವರೂ ನಮ್ಮ ಸಮಾಜದ ಜೊತೆ ಇದ್ದಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com