ಬೊಮ್ಮಾಯಿ ಭೇಟಿ ಬಳಿಕ ಹೆಚ್ ಡಿ ದೇವೇಗೌಡ ಹೇಳಿದ್ದಿಷ್ಟು...

ಸಿಎಂ ಬಸವರಾಜ ಬೊಮ್ಮಾಯಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದು, ಸೌಹಾರ್ದಯುತ ಮಾತುಕತೆ ನಡೆಸಿದ್ದಾರೆ. 
ಹೆಚ್ ಡಿ ದೇವೇಗೌಡ- ಸಿಎಂ ಬೊಮ್ಮಾಯಿ ಭೇಟಿ
ಹೆಚ್ ಡಿ ದೇವೇಗೌಡ- ಸಿಎಂ ಬೊಮ್ಮಾಯಿ ಭೇಟಿ

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದು, ಸೌಹಾರ್ದಯುತ ಮಾತುಕತೆ ನಡೆಸಿದ್ದಾರೆ. 

ಬೊಮ್ಮಾಯಿ ಭೇಟಿ ಬಳಿಕ ಪ್ರತಿಕ್ರಿಯೆ ನೀಡಿರುವ ಹೆಚ್ ಡಿ ದೇವೇಗೌಡ, ಸಿಎಂ ಬೊಮ್ಮಾಯಿ ಅವರಿಗೆ ನಮ್ಮ ಸಹಕಾರ ಇರುತ್ತದೆ ಎಂದು ಹೇಳಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರದ ಬಗ್ಗೆಯೂ ಮಾತನಾಡಿರುವ ಅವರು, ನಾವು ರಾಜ್ಯಸಭೆಯಲ್ಲೂ ಸರ್ಕಾರಕ್ಕೆ ಸಹಕಾರ ಕೊಡುತ್ತೇವೆ ಆದರೆ ಕೇಂದ್ರ ಸರ್ಕಾರದಿಂದ ಸಮಸ್ಯೆ ಇರಬಾರದು ಎಂದು  ದೇವೇಗೌಡ ತಿಳಿಸಿದ್ದಾರೆ.

75 ವರ್ಷಗಳಾದವರಿಗೆ ಪ್ರಮುಖ ಹುದ್ದೆಗಳನ್ನು ನೀಡುವಂತಿಲ್ಲ ಎಂಬ ನಿಬಂಧನೆಯ ಆಧಾರದಲ್ಲಿ ಯಡಿಯೂರಪ್ಪ ಅವರಿಂದ ರಾಜೀನಾಮೆ ಪಡೆಯಲಾಗಿದೆ. ಈಗ ಬೊಮ್ಮಾಯಿ ಸಿಎಂ ಆಗಿದ್ದಾರೆ. ಯಡಿಯೂರಪ್ಪ ಅವರ ಆಶೀರ್ವಾದ ಇಲ್ಲದೇ ಸರ್ಕಾರ ನಡೆಯುವುದಿಲ್ಲ. ಅವರ ಆಶೀರ್ವಾದ ಅಗತ್ಯ, ಯಡಿಯೂರಪ್ಪ ಅವರಿಂದಲೇ ಬೊಮ್ಮಾಯಿ ಸಿಎಂ ಆಗಿದ್ದಾರೆ ಬೊಮ್ಮಾಯಿಗೆ ನಮ್ಮ ಸಹಕಾರ ಇರುತ್ತೆ ಎಂದು ತಿಳಿಸಿದರು.

ಇನ್ನು ಜನತಾದಳದಿಂದ ಹೋದವರು ಸಿಎಂ ಆಗುತ್ತಿದ್ದಾರೆ ಎಂಬ ಹೇಳಿಕೆಗಳ ಬಗ್ಗೆಯೂ ದೇವೇಗೌಡ ಪ್ರತಿಕ್ರಿಯಿಸಿದ್ದು, ಎಲ್ಲರೂ ಸಿಎಂ ಆಗಲು ಆಗಲ್ಲ ಎಂದಿದ್ದಾರೆ. ಸಿದ್ದರಾಮಯ್ಯ ಅವರ ಜೊತೆ ಜನತಾದಳದಿಂದ ಬಹಳಷ್ಟು ಮಂದಿ ಹೋದರು ಅವರೆಲ್ಲರೂ ಸಿಎಂ ಆಗಿದ್ದಾರಾ? ಎಲ್ಲರೂ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ಬೊಮ್ಮಾಯಿ ಬಿಜೆಪಿಯಲ್ಲಿ ನಡೆದುಕೊಂಡ ರೀತಿಯನ್ನು ನೋಡಿ ಅವರನ್ನು ಈ ಹುದ್ದೆಗೆ ಆಯ್ಕೆ ಮಾಡಿದ್ದಾರೆ ಎಂದು ದೇವೇಗೌಡ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com