ಮೂಲ ಬಿಜೆಪಿಗರು ಹಾಲಿದ್ದಂತೆ, ಹೊರಗಿನಿಂದ ಬಂದವರು ಜೇನಿದ್ದಂತೆ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ: ಕೆ ಎಸ್ ಈಶ್ವರಪ್ಪ 

ರಾಜ್ಯದ ಬಿಜೆಪಿ ನಾಯಕರಲ್ಲಿ ಅಸಮಾಧಾನ ಎಂಬ ಪ್ರಶ್ನೆಯೇ ಇಲ್ಲ, ಇನ್ನೆರಡು ಮೂರು ದಿನಗಳಲ್ಲಿ ಕೇಂದ್ರದ ನಾಯಕರು ರಾಜ್ಯಕ್ಕೆ ಬಂದು ಅಸಮಾಧಾನ ಏನೇನಿದೆ ಎಂದು ತಿಳಿದುಕೊಂಡು ನಾಯಕರನ್ನು ಕರೆದು ಕೂರಿಸಿ ಚರ್ಚೆ ಮಾಡಿ ಬಗೆಹರಿಸುತ್ತಾರೆ. ಇಲ್ಲಿ ವಲಸಿಗರು, ಮೂಲದಿಂದಲೇ ಇರುವವರು ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹಿರಿಯ ನಾಯಕ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾ
ಬಾಗಲಕೋಟೆ ಬದಾಮಿ ಬನಶಂಕರಮ್ಮ  ಕ್ಷೇತ್ರಕ್ಕೆ ಕುಟುಂಬ ಸಮೇತವಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಕೆ ಎಸ್ ಈಶ್ವರಪ್ಪ
ಬಾಗಲಕೋಟೆ ಬದಾಮಿ ಬನಶಂಕರಮ್ಮ  ಕ್ಷೇತ್ರಕ್ಕೆ ಕುಟುಂಬ ಸಮೇತವಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಕೆ ಎಸ್ ಈಶ್ವರಪ್ಪ

ಬಾಗಲಕೋಟೆ: ರಾಜ್ಯದ ಬಿಜೆಪಿ ನಾಯಕರಲ್ಲಿ ಅಸಮಾಧಾನ ಎಂಬ ಪ್ರಶ್ನೆಯೇ ಇಲ್ಲ, ಇನ್ನೆರಡು ಮೂರು ದಿನಗಳಲ್ಲಿ ಕೇಂದ್ರದ ನಾಯಕರು ರಾಜ್ಯಕ್ಕೆ ಬಂದು ಅಸಮಾಧಾನ ಏನೇನಿದೆ ಎಂದು ತಿಳಿದುಕೊಂಡು ನಾಯಕರನ್ನು ಕರೆದು ಕೂರಿಸಿ ಚರ್ಚೆ ಮಾಡಿ ಬಗೆಹರಿಸುತ್ತಾರೆ. ಇಲ್ಲಿ ವಲಸಿಗರು, ಮೂಲದಿಂದಲೇ ಇರುವವರು ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹಿರಿಯ ನಾಯಕ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ಬಾಗಲಕೋಟೆಯಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಹಾಲಿದ್ದಂತೆ.ಹೊಸಬರು ಬಂದು ಸೇರ್ಪಡೆಗೊಂಡವರು ಜೇನಿದ್ದಂತೆ. ಹಾಲು-ಜೇನು ಸೇರಿದರೆ  ಎಷ್ಟು ಸವಿಯಿರುತ್ತದೆಯೋ ಹಾಗೆಯೇ ಇಡೀ ದೇಶದಲ್ಲಿ ಬಿಜೆಪಿಗೆ ಯಾರ್ಯಾರು ಬಂದು ಸೇರಿದ್ದಾರೆಯೋ ಅವರೆಲ್ಲರನ್ನೂ ಒಗ್ಗೂಡಿಸಿಕೊಂಡು ಒಟ್ಟಾಗಿದ್ದೇವೆಯೇ ವಿನಃ ಯಾವುದೇ ವಿಷಯದಲ್ಲಿಯೂ ಗೊಂದಲವಿಲ್ಲ, ಇನ್ನು ಒಂದೂವರೆ ವರ್ಷದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಉತ್ತಮ ಆಡಳಿತ ನೀಡಿ ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನೂತನ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಯಾರಿಗೆ ಸ್ಥಾನ ಸಿಗಲಿದೆ ಎಂಬುವುದು ಇನ್ನೂ ಕುತೂಹಲಕಾರಿಯಾಗಿದೆ. ಈ ನಡುವೆ ಕೆ.ಎಸ್‌ ಈಶ್ವರಪ್ಪ ಅವರು ಡಿಸಿಎಂ ಪಟ್ಟಕ್ಕಾಗಿ ಲಾಬಿ ನಡೆಸುತ್ತಿದ್ದರೂ ಸಚಿವ ಸಂಪುಟದಲ್ಲಿ ಸ್ಥಾನ ಸಿಗುತ್ತಾ ಎಂಬ ಪ್ರಶ್ನೆಯ ಬೆನ್ನಲ್ಲೇ ಈಶ್ವರಪ್ಪ ದೇವರ ಮೊರೆ ಹೋಗಿದ್ದಾರೆ.

ಇಂದು ಬೆಳಗ್ಗೆ ಬಾಗಲಕೋಟೆ ಬದಾಮಿ ಬನಶಂಕರಮ್ಮ  ಕ್ಷೇತ್ರಕ್ಕೆ ಕುಟುಂಬ ಸಮೇತವಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಪತ್ರಕರ್ತರ ಜೊತೆ ಎಂದಿನಂತೆ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ.

ಕಲ್ಲಡ್ಕ ಪ್ರಭಾಕರ ಭಟ್ ರು ನಮ್ಮಲ್ಲಿ ಅನೇಕರನ್ನು ಬೆಳೆಸಿದವರು, ನಿನ್ನೆ ಅವರು ಬೆಂಗಳೂರಿಗೆ ಬಂದಿದ್ದ ವೇಳೆ ನನ್ನನ್ನು ಭೇಟಿ ಮಾಡಲು ಬಂದರು, ಅದರಲ್ಲೇನೂ ವಿಶೇಷವಿಲ್ಲ ಎಂದರು. ಎಲ್ಲಾ ಸಮುದಾಯದ ಸ್ವಾಮೀಜಿಗಳು, ಕಾರ್ಯಕರ್ತರು ನಮ್ಮ ಮನೆಗೆ ಬರುತ್ತಾರೆ, ಫೋನ್ ಕರೆ ಮಾಡುತ್ತಾರೆ, ಉಪ ಮುಖ್ಯಮಂತ್ರಿ ಹುದ್ದೆ ಸಿಕ್ಕಿದರೆ ಸಂತೋಷ, ಕೇಂದ್ರ ನಾಯಕರು ಪರಿಗಣಿಸಿದರೆ ಒಪ್ಪಿಕೊಳ್ಳುತ್ತೇನೆ, ಹಾಗೆಂದು ಯಾವುದೇ ಅಸಮಾಧಾನ ಇಲ್ಲ ಎಂದಿದ್ದಾರೆ.

ಕಾಂಗ್ರೆಸ್ ಎಷ್ಟು ದಲಿತರನ್ನು ಮುಖ್ಯಮಂತ್ರಿ ಮಾಡಿದೆ?: ತಾಕತ್ತಿದ್ದರೆ ದಲಿತರನ್ನು ಮುಖ್ಯಮಂತ್ರಿ ಮಾಡಿ ಎಂದು ಹೇಳುವ ಕಾಂಗ್ರೆಸ್ ಸ್ವಾತಂತ್ರ್ಯ ಬಂದ ನಂತರ ಎಷ್ಟು ದಲಿತ ನಾಯಕರನ್ನು ಮುಖ್ಯಮಂತ್ರಿ ಮಾಡಿದೆ, ಹಗೆ ರಾಜಕೀಯದಿಂದ ಮುಖ್ಯಮಂತ್ರಿ ಆಗುವ ಅವಕಾಶವಿದ್ದ ಡಾ ಜಿ ಪರಮೇಶ್ವರ್ ಅವರನ್ನು ಸೋಲಿಸಿಬಿಟ್ಟು ಅನ್ಯಾಯ ಮಾಡಿದರು, ಹಾಗಿರುವಾಗ ಬಿಜೆಪಿ ಬಗ್ಗೆ ಹೇಳಲು ಎಷ್ಟು ಹಕ್ಕು ಇದೆ, ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಈಶ್ವರಪ್ಪ ಖಡಾಖಂಡಿತವಾಗಿ ಹೇಳಿದ್ದಾರೆ.

ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆ: ಕಾಂಗ್ರೆಸ್ ನಾಯಕರಲ್ಲಿ ಗುಂಪುಗಾರಿಕೆ, ಭಿನ್ನಮತ ಇರುವುದೇ ಹೊರತು ಬಿಜೆಪಿಯಲ್ಲಲ್ಲ, ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ, ಪರಮೇಶ್ವರ್, ಎಂ ಬಿ ಪಾಟೀಲ್ ಇವರು ನಾಲ್ವರು ಮತ್ತು ಇವರ ಬೆಂಬಲಿಗರು ನಾವೇ ಮುಖ್ಯಮಂತ್ರಿ, ನಮ್ಮ ನಾಯಕರೇ ಮುಖ್ಯಮಂತ್ರಿಗಳು ಎನ್ನುತ್ತಿದ್ದಾರೆ, ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯುತ್ತಿದ್ದಾರೆ. 

ಈ ನಾಲ್ವರು ನಾಯಕರು ಮೈಸೂರಿನ ಚಾಮುಂಡಿ ಬೆಟ್ಟದ ಮುಂದೆ ಹೋಗಿ ಹೇಳಲಿ, ನಾವು ಗುಂಪುಗಾರಿಕೆ ಮಾಡುವುದಿಲ್ಲ ಎಂದು ನೋಡೋಣ ಎಂದು ಈಶ್ವರಪ್ಪ ಸವಾಲು ಹಾಕಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com