ಬೊಮ್ಮಾಯಿ ಬಿಎಸ್ ವೈ ರಬ್ಬರ್ ಸ್ಟಾಂಪ್ ಆಗಲ್ಲ: ಯತ್ನಾಳ್

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪಕ್ಷದ ವರಿಷ್ಠರ ಮೇಲೆ ನಿರಂತರ ಒತ್ತಡವೇ ಕಾರಣ ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಡಿಯೂರಪ್ಪ ಅವರ ರಬ್ಬರ್ ಸ್ಟಾಂಪ್ ಆಗಲ್ಲ ಎಂದು ಹಿರಿಯ ಬಿಜೆಪಿ ಮುಖಂಡ ಬಸವರಾಜ್ ಪಾಟೀಲ್ ಯತ್ನಾಳ್ ಹುಬ್ಬಳ್ಳಿಯಲ್ಲಿಂದು ಹೇಳಿದರು. 
ಸಿಎಂ ಬೊಮ್ಮಾಯಿ, ಯತ್ನಾಳ್
ಸಿಎಂ ಬೊಮ್ಮಾಯಿ, ಯತ್ನಾಳ್

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪಕ್ಷದ ವರಿಷ್ಠರ ಮೇಲೆ ನಿರಂತರ ಒತ್ತಡವೇ ಕಾರಣ ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಡಿಯೂರಪ್ಪ ಅವರ ರಬ್ಬರ್ ಸ್ಟಾಂಪ್ ಆಗಲ್ಲ ಎಂದು ಹಿರಿಯ ಬಿಜೆಪಿ ಮುಖಂಡ ಬಸವರಾಜ್ ಪಾಟೀಲ್ ಯತ್ನಾಳ್ ಹುಬ್ಬಳ್ಳಿಯಲ್ಲಿಂದು ಹೇಳಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬ ಮುಖಂಡರು ತನ್ನದೇ ಆದ ಛಾಪು ಮೂಡಿಸಲು ಬಯಸುತ್ತಾರೆ, ಬೊಮ್ಮಾಯಿ ಇದಕ್ಕೆ ಹೊರತಾಗಿಲ್ಲ. ಮೂರ್ನಾಲ್ಕು ತಿಂಗಳ ಕಾಲ ಅವರು ಆಡಳಿತ ನಡೆಸಲು ಬಿಡಬೇಕು ಎಂದು ಹೇಳಿದ ಯತ್ನಾಳ್, ಕೇಂದ್ರದ ವರಿಷ್ಠರಿಗೆ ವಿಧೇಯರಾಗಿಲ್ಲ, ಶಾಸಕರ ಮಾತನ್ನು ಕೇಳುತ್ತಿಲ್ಲ ಎಂದು  ಮುಖ್ಯಮಂತ್ರಿಯನ್ನು ಬಲವಂತದಿಂದ ಬದಲಾಯಿಸಬಾರದು ಎಂದರು.

ಬೊಮ್ಮಾಯಿ ಎರಡೂ ವರ್ಷ ಮುಖ್ಯಮಂತ್ರಿ ಅವಧಿಯನ್ನು ಪೂರ್ಣಗೊಳಿಸಲು ಚಾಮುಂಡೇಶ್ವರಿ ದೇವತೆಯಲ್ಲಿ ಪ್ರಾರ್ಥಿಸುವುದಾಗಿ ಹೇಳಿದ ಯತ್ನಾಳ್, ಪ್ರತಿಯೊಬ್ಬರು ಅವರಿಗೆ ಸಹಕರಿಸಬೇಕು, ಸಚಿವ ಸ್ಥಾನ ಸಿಗದ ಶಾಸಕರು, ಅಗತ್ಯವಾದ ಖಾತೆ ಸಿಗದ ಸಚಿವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುವುದು ನ್ಯಾಯಯುತವಾಗಿರುವುದಿಲ್ಲ, ಸಚಿವರು, ಶಾಸಕರ ಕುಂದುಕೊರತೆಗಳನ್ನು ನೋಡಿಕೊಳ್ಳುವುದರಲ್ಲಿ ಮುಖ್ಯಮಂತ್ರಿ ನಿರತರಾದರೆ, ಜನರ ಸಮಸ್ಯೆಯನ್ನು ಆಲಿಸುವವರು ಯಾರು ಎಂದು ಅವರು ಪ್ರಶ್ನಿಸಿದರು. ತಾವು ಇಷ್ಟ ಪಟ್ಟ ಖಾತೆ ಸಿಗದೆ ಅಸಮಾಧಾನಗೊಂಡಿರುವವರ ಹಿಂದಿರುವ ಸೂತ್ರದಾರ ಯಾರು ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ ಎಂದು ಪರೋಕ್ಷವಾಗಿ ಯಡಿಯೂರಪ್ಪ ಅವರ ವಿರುದ್ಧವೂ ವಾಗ್ದಾಳಿ ನಡೆಸಿದರು.

ಯಡಿಯೂರಪ್ಪ ಅವರನ್ನು ವಿರೋಧಿಸಿದ್ದರಿಂದ ಸಚಿವ ಸ್ಥಾನ ಸಿಗಲಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ್, ಅರವಿಂದ್ ಬೆಲ್ಲದ್ ಅಥವಾ ಯತ್ನಾಳ್ ತಮ್ಮ ಬೇಡಿಕೆಗಳೊಂದಿಗೆ ಹೊರಗೆ ಬಂದಿದ್ದಾರೆ. ಅದೇ ಶಕ್ತಿಗಳು ರಮೇಶ್ ಜಾರಕಿಹೊಳಿ ಭವಿಷ್ಯವನ್ನು ಸಂಪೂರ್ಣವಾಗಿ ಹಾಳು ಮಾಡಿದ್ದಾರೆ.  ನಾವು ವಿರೋಧಿಸಿದ್ದರಿಂದ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು ಎಂದು ಹೇಳಲು ಸರಿಯಾಗಿದೆ. ನಾಯಕತ್ವ ಬದಲಾವಣೆಗೆ ವೇದಿಕೆಯನ್ನು ಸೃಷ್ಟಿಸಿದ ನಂತರ  ಬೇರೆಯವರು ಮುಖ್ಯಮಂತ್ರಿಯಾಗಿದ್ದಕ್ಕೆ ಪಶ್ಚ್ಯಾತಾಪ ಪಡುವುದಿಲ್ಲ ಎಂದರು. 

1990 ರ ದಶಕದ ಆರಂಭದಲ್ಲಿ ಈದ್ಗಾ ಆಂದೋಲನ ಮತ್ತು ಚಳುವಳಿಗಾರರ ಮೇಲೆ ಪೋಲಿಸ್ ದಾಳಿಯನ್ನು ನಿಗ್ರಹಿಸುವ ಹಿಂದಿನ ಶಕ್ತಿಯಾಗಿದ್ದರಿಂದ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದರಿಂದ ಹಿಂದೂ ಹೋರಾಟಗಾರರಿಗೆ ನೋವಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ,ಬೊಮ್ಮಾಯಿ ಹಿಂದೂ ವಿರೋಧಿ ನಿರ್ಣಯ ಕೈಗೊಂಡರೆ ಹೋರಾಟಗಾರರು , ಹೋರಾಟಕ್ಕೆ ಧುಮುಕ್ಕುತ್ತಾರೆ ಎಂದು ಹೇಳಿದ ಯತ್ನಾಳ್,  ಪಕ್ಷದ ವರಿಷ್ಠರು ತೆಗೆದುಕೊಂಡಿರುವ ನಿರ್ಧಾರವನ್ನು  ಒಪ್ಪಿಕೊಂಡಿದ್ದೇನೆ, ಪ್ರತಿಯೊಂದು ವಿಷಯವೂ ಅವರ ಇಚ್ಛೆಯಂತೆ ನಡೆಯುವುದಿಲ್ಲ ಮತ್ತು ಪ್ರತಿ ಸಮಸ್ಯೆಗೆ ಪರಿಹಾರ ಇರುತ್ತದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com