ಮಗಳ ಮದುವೆಗಾಗಿ ಏಕಾಏಕಿ ರಸ್ತೆ ಸಿದ್ಧಪಡಿಸುವ ಶಕ್ತಿ ಇದೆ ಎಂದಾದರೆ, ಉಳಿದ ಕಾಮಗಾರಿ ಮುಗಿಸಲು ಇಚ್ಛಾಶಕ್ತಿ ಏಕಿಲ್ಲ?
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ, ಮಗಳ ಮದುವೆಗಾಗಿ ತುರಾತುರಿಯಲ್ಲಿ ರಸ್ತೆ ಸಿದ್ಧಪಡಿಸಿದ ಪ್ರಹ್ಲಾದ ಜೋಶಿ ಅವರೇ, ಇದೇ ಶ್ರದ್ಧೆ, ಇಚ್ಛಾಶಕ್ತಿ ಉಳಿದ ಕಾಮಗಾರಿಯಲ್ಲಿ ಏಕೆ ತೋರಲಿಲ್ಲ?
Published: 31st August 2021 11:27 AM | Last Updated: 31st August 2021 11:27 AM | A+A A-

ಪ್ರಹ್ಲಾದ್ ಜೋಶಿ
ಬೆಂಗಳೂರು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ, ಮಗಳ ಮದುವೆಗಾಗಿ ತುರಾತುರಿಯಲ್ಲಿ ರಸ್ತೆ ಸಿದ್ಧಪಡಿಸಿದ ಪ್ರಹ್ಲಾದ ಜೋಶಿ ಅವರೇ, ಇದೇ ಶ್ರದ್ಧೆ, ಇಚ್ಛಾಶಕ್ತಿ ಉಳಿದ ಕಾಮಗಾರಿಯಲ್ಲಿ ಏಕೆ ತೋರಲಿಲ್ಲ? ಎಂದು ಪ್ರಶ್ನಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ಮಗಳ ಮದುವೆಗಾಗಿ ಏಕಾಏಕಿ ರಸ್ತೆ ಸಿದ್ಧಪಡಿಸುವ ಶಕ್ತಿ ಇದೆ ಎಂದಾದರೆ, ಉಳಿದ ಕಾಮಗಾರಿ ಮುಗಿಸಲು ಮತ್ತೊಮ್ಮೆ ಹುಬ್ಬಳ್ಳಿ ಧಾರವಾಡ ಪಾಲಿಕೆ ಅಧಿಕಾರ ಕೊಡಿ ಎನ್ನಲು ನಾಚಿಕೆ ಎನಿಸುವುದಿಲ್ಲವೇ ,ಇಷ್ಟು ದಿನ ಹುಬ್ಬಳ್ಳಿ ಧಾರವಾಡದ ಪಾಲಿಕೆ ಬಿಜೆಪಿ ಆಡಳಿತದಲ್ಲಿದ್ದರೂ ನೀರಿನ ಸಮಸ್ಯೆ ಬಗೆಹರಿಯಲಿಲ್ಲ, ರಸ್ತೆ ಗುಂಡಿ ಮುಚ್ಚಲಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.
ಮತ್ತೊಮ್ಮೆ ಅಧಿಕಾರ ಕೊಟ್ಟರೆ ಕೆಲಸ ಮುಗಿಸುತ್ತೇವೆ ಎನ್ನುವ ಪ್ರಹ್ಲಾದ ಜೋಶಿ ಅವರೇ, ಒಂದು ರಸ್ತೆಯಾಗಲು ನಿಮ್ಮ ಮಗಳ ಮದುವೆ ಬರಬೇಕಾಯ್ತು! ಇನ್ನುಳಿದ ಕೆಲಸ ಪೂರೈಸಲು ಯಾರದ್ದಾದರೂ ಬಿಜೆಪಿಗರ ಮದುವೆಯೇ ಬರಬೇಕು ಎಂದು ಟೀಕಿಸಿದೆ.
ಯಾವುದೇ ಚುನಾವಣೆ ಬರಲಿ ಬಿಜೆಪಿ ಪಕ್ಷದವರು ಸುಳ್ಳಿನ ರೈಲು ಬಿಡಲು ತಯಾರಾಗುತ್ತಾರೆ! ಕೇಂದ್ರದಲ್ಲೂ, ರಾಜ್ಯದಲ್ಲೂ ಬಿಜೆಪಿ, ಸಂಸದರು, ಶಾಸಕರೂ ಬಿಜೆಪಿ, ಒಬ್ಬರು ರಾಜ್ಯದ ಸಚಿವರಾಗಿದ್ದರು, ಮತ್ತೊಬ್ಬರು ಕೇಂದ್ರ ಸಚಿವರಾಗಿದ್ದಾರೆ. ಹೀಗಿದ್ದೂ ಯಾವ ಅಭಿವೃದ್ಧಿ ಮಾಡದೆ, ಹುಬ್ಬಳ್ಳಿ ಧಾರವಾಡದ ಜನರೆದುರು ಇನ್ನೂ ಬಣ್ಣದ ರೈಲನ್ನೇ ಬಿಡುತ್ತಿದ್ದಾರೆ ಎಂದು ಲೇವಡಿ ಮಾಡಿದೆ.
ಮಗಳ ಮದುವೆಗಾಗಿ ತುರಾತುರಿಯಲ್ಲಿ ರಸ್ತೆ ಸಿದ್ಧಪಡಿಸಿದ @JoshiPralhad ಅವರೇ, ಇದೇ ಶ್ರದ್ಧೆ, ಇಚ್ಛಾಶಕ್ತಿ ಉಳಿದ ಕಾಮಗಾರಿಯಲ್ಲಿ ಏಕೆ ತೋರಲಿಲ್ಲ?
— Karnataka Congress (@INCKarnataka) August 31, 2021
ಮದುವೆಗಾಗಿ ಏಕಾಏಕಿ ರಸ್ತೆ ಸಿದ್ಧಪಡಿಸುವ ಶಕ್ತಿ ಇದೆ ಎಂದಾದರೆ, ಉಳಿದ ಕಾಮಗಾರಿ ಮುಗಿಸಲು ಮತ್ತೊಮ್ಮೆ ಹು - ದಾ ಪಾಲಿಕೆ ಅಧಿಕಾರ ಕೊಡಿ ಎನ್ನಲು ನಾಚಿಕೆ ಎನಿಸುವುದಿಲ್ಲವೇ @BJP4Karnataka!?