ವಿಧಾನ ಪರಿಷತ್ ಚುನಾವಣೆ: ದೇವೇಗೌಡರ ಸೋಲು, ತುಮಕೂರಿನ ಜಾತಿ ಸಮೀಕರಣ ಬಿಜೆಪಿ ಗೆಲುವಿಗೆ ವರದಾನ!
ವಿಧಾನ ಪರಿಷತ್ ಚುನಾವಣೆಗೆ ಇನ್ನೂ ಕೇವಲ 10 ದಿನಗಳು ಮಾತ್ರ ಬಾಕಿ ಉಳಿದಿದೆ, ತುಮಕೂರು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಯಾಗಿಸಲು ಮಾಜಿ ಪಿಎಂ ದೇವೇಗೌಡರ ಅಂಶಗಳು ಪ್ರಮಖ ಪಾತ್ರ ವಹಿಸುವ ಸೂಚನೆಗಳು ದೊರಕಿವೆ.
Published: 01st December 2021 01:16 PM | Last Updated: 01st December 2021 02:12 PM | A+A A-

ಕಾಂಗ್ರೆಸ್ ನಾಯಕ ರಾಜಣ್ಣ ಕೆಎನ್ನ
ತುಮಕೂರು: ವಿಧಾನ ಪರಿಷತ್ ಚುನಾವಣೆಗೆ ಇನ್ನೂ ಕೇವಲ 10 ದಿನಗಳು ಮಾತ್ರ ಬಾಕಿ ಉಳಿದಿದೆ, ತುಮಕೂರು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಯಾಗಿಸಲು ಮಾಜಿ ಪಿಎಂ ದೇವೇಗೌಡರ ಅಂಶಗಳು ಪ್ರಮಖ ಪಾತ್ರ ವಹಿಸುವ ಸೂಚನೆಗಳು ದೊರಕಿವೆ.
2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದರೂ ತುಮಕೂರು ಕ್ಷೇತ್ರದಲ್ಲಿ ಗೌಡರು ಸೋತಿದ್ದರು. ಮಾಜಿ ಶಾಸಕ ಹಾಗೂ ಬಂಡಾಯ ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ಅವರ ‘ಪಿತೂರಿ’ ಇದಕ್ಕೆ ಕಾರಣ ಎೆಬುದು ಬಹಿರಂಗ ಸತ್ಯ, ಹೀಗಾಗಿ ಒಕ್ಕಲಿಗರು, ದಲಿತರು ಅದರ ಸೇಡು ತೀರಿಸಿಕೊಳ್ಳಲು ಹವಣಿಸಿದ್ದಾರೆ.
ಇದಕ್ಕೆ ಸಾಕ್ಷಿ ಎಂಬಂತೆ ಎಸ್ ಟಿ ನಾಯಕ ಸಮುದಾಯದ ಮಾಜಿ ಕೆಎಎಸ್ ಅಧಿಕಾರಿ ಅನಿಲ್ ಕುಮಾರ್. ಅದೇ ಸಮುದಾಯಕ್ಕೆ ಸೇರಿದ ರಾಜಣ್ಣ ಪುತ್ರ ಆರ್ ರಾಜೇಂದ್ರ ವಿರುದ್ಧ ಸಮರ ಸಾರಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಸಕ್ಕರೆ ಗೊಲ್ಲಹಳ್ಳಿಯಿಂದ ಕುಂಚಟಿಗ ಒಕ್ಕಲಿಗ, ಎನ್ ಲೋಕೇಶ್ ಅಲಿಯಾಸ್ ಲೋಕೇಶ್ ಗೌಡ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ
ನಾವು ಜಾತಿಯೊಳಗಿರುವ ಉಪಪಂಗಡಗಳನ್ನು ವಿಭಜಿಸಲು ಹೋಗುವುಗದಿಲ್ಲ, ಹೀಗಾಗಿ ಲೋಕೇಶ್ ಗೌಡರನ್ನು ಬೆಂಬಲಿಸುತ್ತೇವೆ, ರಾಜಣ್ಣನವರ ಪುತ್ರನನ್ನು ಸೋಲಿಸುವುದೇ ನಮ್ಮ ಗುರಿಯಾಗಿದೆ ಎಂದು ತುರುವೆಕೆರೆ ಮಾಜಿ ಶಾಸಕ ಎಂಟಿ ಕೃಷ್ಣಪ್ಪ ಬೆಂಬಲಿಗೆ ನರಸೇಗೌಡ ಎಂಬುವರು ತಿಳಿಸಿದ್ದಾರೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ಭಂಡಾಸುರ, ಸಿದ್ದರಾಮಯ್ಯ ಮಂಡಾಸುರ: ಸಿಎಂ ಖುರ್ಚಿಗಾಗಿ ಇಬ್ಬರು ಅಸುರರ ಕಚ್ಚಾಟ
ಕಳೆದ ಬಾರಿ ಜೆಡಿಎಸ್, ಬಂಡಾಯ ನಾಯಕ ಬಿಇಎಂಎಲ್ ಕಾಂತರಾಜು ಅವರನ್ನು ಕಣಕ್ಕಳಿಸಿತ್ತು. ಆ ವೇಳೆ ಜೆಡಿಎಸ್ ನ ಎಲ್ಲ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡಿದ್ದರು. ಆದರೆ ಈ ಬಾರಿ ಕಾಂತರಾಜು ಮತ್ತು ಗುಬ್ಬಿ ಶಾಸಕ ಬಂಡಾಯವೆದಿದ್ದಿದ್ದಾರೆ. ಹೀಗಾಗಿ ಕೆಲ ಒಕ್ಕಲಿಗ ನಾಯಕರು ಬಿಜೆಪಿ ಅಭ್ಯರ್ಥಿ ತಮ್ಮ ಸಮುದಾಯದವರೆಂಬ ಕಾರಣಕ್ಕೆ ಬಿಜೆಪಿ ಬೆಂಬಲಿಸುತ್ತಿದ್ದಾರೆ.
ಉಪಮುಖ್ಯಮಂತ್ರಿಯಾಗಿದ್ದ ವೇಳೆ ಡಾ.ಜಿ ಪರಮೇಶ್ವರ್ ಜೀರೋ ಟ್ರಾಫಿಕ್ ಪಡೆಯುತ್ತಾರೆ ಎಂಬ ಕಾರಣಕ್ಕೆ ಕೆಎನ್ ರಾಜಣ್ಣ ಪರಮೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಅಹಿಂದ ಮತದಾರರು ಒಗ್ಗಟ್ಟಾಗಿ ಹೋರಾಟ ನಡೆಸಿದರೆ ಮಾತ್ರ ಕಾಂಗ್ರೆಸ್‌ಗೆ ಗೆ ಗೆಲುವು ಸಾಧ್ಯ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ.