ಬಿಎಸ್‌ವೈ ನನ್ನ ನಡುವೆ ವೈಯಕ್ತಿಕ ಮೈತ್ರಿಯಾಗಿದೆ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ
ಬಿಎಸ್ ಯಡಿಯೂಪ್ಪ ಮತ್ತು ನನ್ನ ನಡುವೆ ವೈಯಕ್ತಿಕ ಮೈತ್ರಿ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಭಾನುವಾರ ಹೇಳಿದ್ದಾರೆ.
Published: 05th December 2021 02:02 PM | Last Updated: 05th December 2021 02:02 PM | A+A A-

ಹೆಚ್.ಡಿ.ಕುಮಾರಸ್ವಾಮಿ
ಮೈಸೂರು: ಬಿಎಸ್ ಯಡಿಯೂಪ್ಪ ಮತ್ತು ನನ್ನ ನಡುವೆ ವೈಯಕ್ತಿಕ ಮೈತ್ರಿ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಭಾನುವಾರ ಹೇಳಿದ್ದಾರೆ.
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಮೈತ್ರಿ ವಿಚಾರವಾಗಿ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿಎಸ್ ಯಡಿಯೂಪ್ಪ ಮತ್ತು ನನ್ನ ನಡುವೆ ವೈಯಕ್ತಿಕ ಮೈತ್ರಿ ಆಗಿದೆ. ಈವರೆಗೆ ಯಡಿಯೂರಪ್ಪ ಮಾತ್ರ ನನಗೆ ಕರೆ ಮಾಡಿ ಬೆಂಬಲ ಕೇಳಿದ್ದಾರೆಂದು ಹೇಳಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ ಕೂಡ ಅದು ಅವರ ವೈಯಕ್ತಿಕ ಹೇಳಿಕೆ ಎಂದಿದ್ದಾರೆ. ಆದರೆ, ಕಾಂಗ್ರೆಸ್ ಬಹಿರಂಗವಾಗಿಯೇ ನಮಗೆ ಯಾರ ಬೆಂಬಲವೂ ಬೇಡ ಎಂದಿದ್ದಾರೆ. ಬೇಡ ಎಂದವರಿಗೆ ನಾವೇ ಹೋಗಿ ಬೆಂಬಲ ಕೊಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ ಈ ಮೂಲಕ ಬಿಜೆಪಿ ಜೊತೆ ಮೈತ್ರಿ ಸುಳಿವು ನೀಡಿದ್ದಾರೆ.
ಈ ಎಲ್ಲಾ ಅಂಶ ಮುಂದಿಟ್ಟುಕೊಂಡು ನಾಳೆ ಬೆಂಬಲದ ತೀರ್ಮಾನ ಮಾಡುವೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಹೇಳುತ್ತೇನೆ ಎಂದಿದ್ದಾರೆ.