ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಕಾರ ನಾಯಕತ್ವ ಅಂದರೆ‌ ಗೂಂಡಾಗಿರಿ ಮಾಡುವುದು: ಸಿ.ಟಿ. ರವಿ

ಬಿಜೆಪಿಗೆ ಜೆಡಿಎಸ್ ಬೆಂಬಲ ಬಗ್ಗೆ ಯಡಿಯೂರಪ್ಪ ಮಾತಾಡಿದ್ದಾರೆ. ಜೆಡಿಎಸ್ ಬೆಂಬಲ ಬಗ್ಗೆ ನಾನು ಮಾತಾಡಲ್ಲ. ರಾಜಕೀಯದಲ್ಲಿ ಶತ್ರುಗಳು ಅಂತ ಇರಲ್ಲ.
ಸಿಟಿ ರವಿ
ಸಿಟಿ ರವಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಕಾರ ನಾಯಕತ್ವ ಅಂದರೆ‌ ಗೂಂಡಾಗಿರಿ ಮಾಡೋದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ. ತಮ್ಮ ಸರ್ಕಾರಿ ನಿವಾಸ ಸೆವೆನ್ ಮಿನಿಸ್ಟರ್ಸ್ ಕ್ವಾಟರ್ಸ್ ನಲ್ಲಿ ಪಕ್ಷದ ಎಸ್ಸಿ ಮೋರ್ಚಾ ಪದಾಧಿಕಾರಿಗಳ ಜೊತೆ ಸಂವಾದ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ದುಡ್ಡು ಮಾಡಿರೋರೇ ನಿಲ್ಬೇಕು ಅನ್ನೋದು ಅವರ ಮನಸ್ಥಿತಿ. ನಮ್ಮದು ಕೇಡರ್ ಆಧಾರಿತ ಪಕ್ಷ ಎಂದು ಹೇಳಿದರು.

ಬಿಜೆಪಿ ಸೇರದೇ ಇದ್ದುದಕ್ಕೆ ಜೈಲು ಸೇರುವಂತಾಯಿತು ಎಂಬ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ ಸಿ.ಟಿ ರವಿ, ಡಿಕೆಶಿ ಕಾಂಗ್ರೆಸ್ ನಲ್ಲಿ ಅಕ್ರಮ ಆಸ್ತಿ ಮಾಡಿಕೊಂಡಿದ್ರು ಅಂತ ಒಪ್ಕೊಂಡ ಹಾಗಾಯ್ತು. ಅವರು ಜೈಲಿಗೆ ಹೋಗಿದ್ದು ಬಿಜೆಪಿಗೆ ಹೋಗ್ಲಿಲ್ಲ ಅಂತ ಅಲ್ಲ. ಬಿಜೆಪಿಗೆ ಹೋಗ್ಲಿಲ್ಲ ಅಂತ ಎಫ್ಐಆರ್, ಚಾರ್ಜ್ ಶೀಟ್ ಹಾಕ್ಲಿಲ್ಲ. ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಚಾರ್ಜ್ ಶೀಟ್, ಎಫ್ಐಆರ್ ಹಾಕಲಾಗಿದೆ ಎಂದು ಹೇಳಿದರು.

ಪರಿಷತ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುತ್ತೆ. ಬಿಜೆಪಿಗೆ ಕಾಂಗ್ರೆಸ್ ಏಳು ದಶಕಗಳಿಂದಲೂ ವಿರೋಧ ಪಕ್ಷ. ಮೊದಲ ಆದ್ಯತೆ ಬಿಜೆಪಿ ಗೆಲ್ಸೋದು, ಎರಡನೇ ಆದ್ಯತೆ ಕಾಂಗ್ರೆಸ್ ನ ಸೋಲಿಸೋದು. ಬಿಜೆಪಿಗೆ ಜೆಡಿಎಸ್ ಬೆಂಬಲ ಬಗ್ಗೆ ಯಡಿಯೂರಪ್ಪ ಮಾತಾಡಿದ್ದಾರೆ. ಜೆಡಿಎಸ್ ಬೆಂಬಲ ಬಗ್ಗೆ ನಾನು ಮಾತಾಡಲ್ಲ. ರಾಜಕೀಯದಲ್ಲಿ ಶತ್ರುಗಳು ಅಂತ ಇರಲ್ಲ. ರಾಜಕೀಯ ವಿರೋಧಿಗಳು ಇದ್ದಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com