ಕೊನೆಯ 4 ದಿನಗಳಲ್ಲಿ ಎಲ್ಲ ಬದಲಾಯ್ತು, ಡಿಕೆಶಿಗೆ ಕಠೋರ ಉತ್ತರ ನೀಡುತ್ತೇನೆ, ಸಿದ್ದರಾಮಯ್ಯ ವೇಸ್ಟ್ ಬಾಡಿ: ರಮೇಶ್ ಜಾರಕಿಹೊಳಿ

ವಿಧಾನ ಪರಿಷತ್ ಚುನಾವಣೆ 2021ರಲ್ಲಿ ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ಸೋತು ಪಕ್ಷಕ್ಕೆ ತೀವ್ರ ಮುಜುಗರವಾಗಿದೆ. ಸಾಹುಕಾರ್ ಸೋದರರು ಇದ್ದರೂ ಕೊನೆ ಕ್ಷಣದಲ್ಲಿ ಲಖನ್ ಜಾರಕಿಹೊಳಿ ಸ್ವತಂತ್ರವಾಗಿ ಸ್ಪರ್ಧಿಸಿ ಚುನಾವಣಾ ಕಣದ ಚಿತ್ರಣವೇ ಸಂಪೂರ್ಣ ಬದಲಾಗಿ ಹೋಯಿತು.
ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ
Updated on

ಬೆಳಗಾವಿ: ವಿಧಾನ ಪರಿಷತ್ ಚುನಾವಣೆ 2021ರಲ್ಲಿ ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ಸೋತು ಪಕ್ಷಕ್ಕೆ ತೀವ್ರ ಮುಜುಗರವಾಗಿದೆ. ಸಾಹುಕಾರ್ ಸೋದರರು ಇದ್ದರೂ ಕೊನೆ ಕ್ಷಣದಲ್ಲಿ ಲಖನ್ ಜಾರಕಿಹೊಳಿ ಸ್ವತಂತ್ರವಾಗಿ ಸ್ಪರ್ಧಿಸಿ ಚುನಾವಣಾ ಕಣದ ಚಿತ್ರಣವೇ ಸಂಪೂರ್ಣ ಬದಲಾಗಿ ಹೋಯಿತು. ಬೆಳಗಾವಿ ಸೋಲು ಬಿಜೆಪಿ ನಾಯಕರಿಗೆ ತೀವ್ರ ಹತಾಶೆ ಮತ್ತು ಒಳಗೊಳಗೆ ಭಿನ್ನಾಭಿಪ್ರಾಯಕ್ಕೆ ಕೂಡ ಕಾರಣವಾಗಿದೆ ಎನ್ನಬಹುದು. 

ಪಕ್ಷದ ಸೋಲಿನ ಬಗ್ಗೆ ಇಂದು ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಾಯಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಬಿಜೆಪಿ ನಾಯಕರಿಂದ, ಸಂಘದಿಂದ ನನಗೆ ಫೋನ್ ಬಂತು. ಲಕ್ಷ್ಮೀ ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ ಪೋನ್ ಬಂದಿದೆ. ಹೀಗಾಗಿ ನಾನು ಸದ್ಯಕ್ಕೆ ಏನೂ ಮಾತನಾಡುವುದಿಲ್ಲ. ನಾನು ದೊಡ್ಡ ಬಾಂಬ್ ಸಿಡಿಸಬಹುದು ಆದರೆ ಎನೂ ಹೇಳಲ್ಲ. ನಮ್ಮ ಪಕ್ಷ ಸೋಲಬಾರದಿತ್ತು ಸೋತಿದೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಹೇಳುತ್ತೇನೆ ಎಂದು ಹೇಳಿದರು.

ನಮ್ಮ ಪಕ್ಷದಲ್ಲಿ ಏನಾಗಿದೆ ಎನಿಲ್ಲ ಎಂಬುದು ನಮ್ಮ ವರಿಷ್ಠರ ಜತೆಗೆ ಮಾತನಾಡಿದ್ದೇನೆ. ಯಾಕೆ ಸೋತಿದೆ ಎಂಬುದು ಚರ್ಚೆ ಮಾಡಿ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ‌. ಡಿಕೆ ಶಿವಕುಮಾರ್ ಬಗ್ಗೆ ಬಹಳ ಕಠೋರವಾಗಿ ಹೇಳುವವನಿದ್ದೆ. ಕೊನೆಯ ಮೂರು ದಿನಗಳಲ್ಲಿ ಜಿಲ್ಲೆಯ ಚಿತ್ರಣ ಬದಲಾಯಿತು. ಬಿಜೆಪಿಗೆ ಹೋಗುವ ಕುರಿತು ಲಖನ್ ಜಾರಕಿಹೊಳಿ‌ ತೀರ್ಮಾನ ತೆಗೆದುಕೊಳ್ಳಬೇಕು. ಲಖನ್ ಜಾರಕಿಹೊಳಿ‌ ಕೊನೆಯ ಮೂರು ದಿನ ನಮ್ಮ ಕೈಗೆ ಸಿಗಲಿಲ್ಲ‌. ಚುನಾವಣೆ ಚಿತ್ರಣ ಬದಲಾಗಿದ್ದಕ್ಕೆ ನಾನು ಬಿಜೆಪಿ ಪಕ್ಷದ ಪರ ಪ್ರಚಾರ ಮಾಡಿದೆ. ಕಾಂಗ್ರೆಸ್ ಅಭ್ಯರ್ಥಿ ಪರ ಅವರು ಮಾಡಿದ್ರೂ ಪಕ್ಷೇತರ ಅಭ್ಯರ್ಥಿ ಲಖನ್ ಪ್ರಚಾರ ಮಾಡಿದರು.

ಸೋಲನ್ನ ರಮೇಶ್ ಜಾರಕಿಹೊಳಿ‌ ತಲೆಗೆ ಕಟ್ಟುತ್ತಿದ್ದಾರೆ ಎಂಬ ಪ್ರಶ್ನೆ ಎದುರಾಗಿದೆ. ಗುಡ್ಡಕ್ಕೆ ಶಕ್ತಿ ಹೊರುವ ತಾಕತ್ತು ಇದೆ ಬಿಡಿ. ಸಂಚು ನಡೆದಿರುವ ಬಗ್ಗೆ ಕನ್ಫರ್ಮ್ ಇಲ್ಲ, ವಿಚಾರ ಮಾಡಿ ಮಾತಾಡ್ತೇನಿ. ಸೋಲಿನ ಪಟ್ಟ ಕಟ್ಟಲು ಲೀಡರ್ ಆದವರಿಗೆ ಕಟ್ಟುತ್ತಾರೆ. ನಾನು ಕಾಂಗ್ರೆಸ್ ಸೋಲಿಸುತ್ತೇನೆ ಅಂತಾ ಹಠಕ್ಕೆ ಬಿದ್ದಿದ್ದು ನಿಜ. ಇವತ್ತು ಅವರ ಪಕ್ಷ ಗೆದ್ದಿದೆ ಅದರ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಎಲ್ಲಿ ತಪ್ಪಿದೆ ಎಂಬುದು ಆಂತರಿಕವಾಗಿ ಚರ್ಚೆ ಮಾಡುತ್ತೇವೆ. ಕೆಲವೇ ದಿನಗಳಲ್ಲಿ ಬಹಿರಂಗವಾಗಿ ಡಿಕೆಶಿ ಹೇಳಿಕೆ ಬಗ್ಗೆ ಕಠೋರ ಉತ್ತರ ಕೊಡುತ್ತೇನೆ ಎಂದರು.  

ಸಿದ್ದರಾಮಯ್ಯ ವೇಸ್ಟ್ ಬಾಡಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಭಯ ಹುಟ್ಟಿದೆ. ಸಿದ್ದರಾಮಯ್ಯ ವೇಸ್ಟ್ ಬಾಡಿ ಹಿಂದುಳಿದವರ ಪ್ರಮುಖ ನಾಯಕ ಹೊರ ಬೀಳುತ್ತಿದ್ದಾನೆ. ಕುರುಬರೆಲ್ಲರೂ ಸಿದ್ದರಾಮಯ್ಯರನ್ನು ರಿಜೆಕ್ಟ್ ಮಾಡಿದ್ದಾರೆ. ಹೀಗಾಗಿ ತನಗೆ ಚ್ಯುತಿ ಬರುತ್ತೆ ಎಂದು ಅವರು ಹೆದರಿದ್ದಾರೆ. ಸಿದ್ದರಾಮಯ್ಯರದ್ದು ಮುಗಿದ ಕಥೆ, ಮುಂದಿನ ಬಾರಿ ಸೋಲ್ತಾನೆ ಎಂದು ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

ನಮ್ಮ ಪಕ್ಷ ಸೋಲಬಾರದಿತ್ತು, ಸೋತಿದೆ, ಮುಂದಿನ ದಿನಗಳಲ್ಲಿ ಎಲ್ಲ ಹೇಳುತ್ತೇನೆ ಎಂದು ಮಾರ್ಮಿಕವಾಗಿ ರಮೇಶ್ ಜಾರಕಿಹೊಳಿ ಉತ್ತರಿಸಿದರು. 

ಇನ್ನು ಪಕ್ಷದಲ್ಲಿದ್ದುಕೊಂಡೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಅಭ್ಯರ್ಥಿಯ ಸೋಲಿಗೆ ಕಾರಣರಾಗಿರುವ ಜಾರಕಿಹೊಳಿ ಬ್ರದರ್ಸ್ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕಾರ್ಯಕರ್ತರಿಂದ ಬೆಳಗಾವಿಯಲ್ಲಿ ಕೇಳಿಬರುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com