ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ: ವಿಟ್ಲ, ಕೋಟೆಕಾರು ಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿಗೆ ಜಯ

ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶದಲ್ಲಿ ವಿಟ್ಲ ಮತ್ತು ಕೋಟೆಕಾರು ಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿ ಜಯ ಸಾಧಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾರವಾರ: ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶದಲ್ಲಿ ವಿಟ್ಲ ಮತ್ತು ಕೋಟೆಕಾರು ಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿ ಜಯ ಸಾಧಿಸಿದೆ.

ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ ಮತ ಎಣಿಕೆ ಪೂರ್ತಿಯಾಗಿದ್ದು ಬಿಜೆಪಿ ಮತ್ತೆ ಜಯಭೇರಿ ಬಾರಿಸಿದೆ. ಕಳೆದ ಅವಧಿಯ 12 ಸ್ಥಾನಗಳನ್ನು ಉಳಿಸಿಕೊಂಡಿತ್ತು. ಕಾಂಗ್ರೆಸ್ ಪಕ್ಷವು ಕಳೆದ ಅವಧಿಯಲ್ಲಿದ್ದ ಒಂದು ಸ್ಥಾನ ಕಳೆದುಕೊಂಡು 5 ಸ್ಥಾನ ಪಡೆದುಕೊಂಡರೆ, ಎಸ್ ಡಿಪಿಐ ಖಾತೆ ತೆರೆದಿದೆ. ಬಿಜೆಪಿ 12, ಕಾಂಗ್ರೆಸ್ 5 ಮತ್ತು ಎಸ್ ಡಿಪಿಐ ಒಂದು ಸ್ಥಾನ ಗಳಿಸಿದ್ದು ಬಿಜೆಪಿ ಆಡಳಿತದ ಗದ್ದುಗೆಗೇರಿದೆ.

ಈ ಪೈಕಿ ಮಾಜಿ ಅಧ್ಯಕ್ಷ ಅರುಣ್ ಎಂ.ವಿಟ್ಲ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರವಿಪ್ರಕಾಶ್, ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಬಂದ ಅಶೋಕ್ ಕುಮಾರ್ ಶೆಟ್ಟಿ ಗೆದ್ದ ಪ್ರಮುಖರಾಗಿದ್ದು, ಗ್ರಾ.ಪಂ. ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ, ಮಾಜಿ ಅಧ್ಯಕ್ಷ ಜಾನ್ ಡಿಸೋಜಾ ಮತ್ತು ಎಂ.ಕೆ.ಮೂಸಾ ಸೋಲು ಕಂಡಿದ್ದಾರೆ.

ಅಂತೆಯೇ ಉಳ್ಳಾಲದ ಕೋಟೆಕಾರು ಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಂಡಿದ್ದು,  17 ಸ್ಥಾನಗಳಲ್ಲಿ ಬಿಜೆಪಿ 11 ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತದೊಂದಿಗೆ ಪಟ್ಟಣ ಪಂಚಾಯತ್ ಅಧಿಕಾರ ಉಳಿಸಿಕೊಂಡಿದೆ.

ಕಳೆದ ಬಾರಿ 11 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಈ ಬಾರಿ 11 ಸ್ಥಾನಗಳನ್ನು ಪಡೆದರೆ ಕಳೆದ ಬಾರಿ 4 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ 4 ಸ್ಥಾನಗಳನ್ನು ಉಳಿಸಿಕೊಂಡಿದೆ. ಒಂದು ಸ್ಥಾನ ಪಡೆದಿದ್ದ ಎಸ್‍ಡಿಪಿಐ ಒಂದೇ ಸ್ಥಾನವನ್ನು ಉಳುಸಿ ಕೊಂಡಿದೆ. ಪಕ್ಷೇತರ ಅಭ್ಯರ್ಥಿ ಒಂದು ಸ್ಥಾನವನ್ನು ಪಡೆದುಕೊಂಡರೆ, ಕಳೆದ ಬಾರಿ ಒಂದು ಸ್ಥಾನ ಪಡೆದಿದ್ದ ಸಿಪಿಐಎಂ ಈ ಬಾರಿ ಶೂನ್ಯ ಸಂಪಾದನೆ ಮಾಡಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com