ಮಠಾಧೀಶರು ಭ್ರಷ್ಟಾಚಾರವನ್ನು ಬೆಂಬಲಿಸುತ್ತಿದ್ದಾರೆಯೇ? ಬಸವಶ್ರೀ ಪ್ರಶಸ್ತಿಗೆ ಬೆಲೆಯಿದೆಯೇ: ವಿಶ್ವನಾಥ್ ಸಿಡಿಮಿಡಿ

ಯಡಿಯೂರಪ್ಪ ಪರ ನಿಂತಿರುವ ಸ್ವಾಮೀಜಿಗಳು ಬೀದಿಗೆ ಬಂದು ಭ್ರಷ್ಟಾಚಾರವನ್ನು ಬೆಂಬಲಿಸುತ್ತಿದ್ದಾರೆ. ಒಬ್ಬ ವ್ಯಕ್ತಿ ಪರ ನಿಂತು ರಾಜಕಾರಣದಲ್ಲಿ ತೊಡಗಿದ್ದಾರೆ' ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು

Published: 22nd July 2021 07:59 AM  |   Last Updated: 22nd July 2021 12:37 PM   |  A+A-


H Vishwanath

ವಿಶ್ವನಾಥ್

Posted By : Shilpa D
Source : The New Indian Express

ಮೈಸೂರು: ಯಡಿಯೂರಪ್ಪ ಪರ ನಿಂತಿರುವ ಸ್ವಾಮೀಜಿಗಳು ಬೀದಿಗೆ ಬಂದು ಭ್ರಷ್ಟಾಚಾರವನ್ನು ಬೆಂಬಲಿಸುತ್ತಿದ್ದಾರೆ. ಒಬ್ಬ ವ್ಯಕ್ತಿ ಪರ ನಿಂತು ರಾಜಕಾರಣದಲ್ಲಿ ತೊಡಗಿದ್ದಾರೆ' ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು. 

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 'ಯಡಿಯೂರಪ್ಪ ಬದಲಾವಣೆಗೆ ಮುಖ್ಯ ಕಾರಣ ಭ್ರಷ್ಟಾಚಾರ. ಮಠಾಧಿಪತಿಗಳು ಜನರಿಗೆ ಯಾವ ಸಂದೇಶ ರವಾನೆ ಮಾಡುತ್ತಿದ್ದಾರೆ? ಭ್ರಷ್ಟಾಚಾರದ ಪರವಾಗಿ ಸಂದೇಶ ಕೊಡುತ್ತಿದ್ದೀರಾ? ಸ್ವಾಮೀಜಿಗಳನ್ನು ಬೀದಿಗೆ ತಂದು ತಮ್ಮ ಪರ ಮಾತಾಡಿ ಎನ್ನುವುದೂ ತಪ್ಪು. ಇದು ಯಾವ ರಾಜಕಾರಣಿಗೂ ಶೋಭೆ ತರುವುದಿಲ್ಲ. ಸಮುದಾಯದವರು ಮುಖ್ಯಮಂತ್ರಿ ಆಗಬೇಕು. ಆದರೆ, ಅವರು ಜಾತಿವಂತನಾಗಬಾರದು ನೀತಿವಂತನಾಗಬೇಕು' ಎಂದು ಹೇಳಿದರು.

ಮಠಗಳು, ಧರ್ಮಾಧಿಕಾರಿಗಳು ಸಮಾಜದ ಭಾಗವಾಗಬೇಕು. ಅದನ್ನು ಬಿಟ್ಟು, ರಾಜಕಾರಣ ಹಾಗೂ ಅಧಿಕಾರದ ಭಾಗವಾಗಬಾರದು, ಮಠಾಧೀಶರು ರಾಜಕೀಯ ವಿಚಾರಕ್ಕೂ ತಲೆ ಹಾಕಬಾರದು. ಏಕ ವ್ಯಕ್ತಿ ಹಾಗೂ ಪಕ್ಷದ ಪರವಾಗಿ ಧರ್ಮಾಧಿಕಾರಿಗಳು ನಿಲ್ಲಬಾರದು. ಇದು ಯಾರಿಗೂ ಕೂಡ ಒಳ್ಳೆಯದಲ್ಲ ಎಂದು ಟೀಕಿಸಿದರು. ಸರ್ಕಾರಗಳು ಬರುತ್ತದೆ,
ಹೋಗುತ್ತದೆ. ಜನ ಸಮುದಾಯದ ಏಳಿಗೆ ಆಗಬೇಕು. ಮಠಾಧೀಶರು ಈ ರೀತಿ ನಡೆದುಕೊಳ್ಳುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಉನ್ನತ ಸಾಧನೈದ ಬಸವ ಪ್ರಶಸ್ತಿ ನೀಡುವ ಮುರುಘಾ ಶ್ರೀಗಳೇ ರಾಜಕಾರಣಿಗಳ ಪರ ಬೀದಿಗಿಳಿದಿರೋದು ನೋವಿನ ಸಂಗತಿ ಎಂದು ವಿಶ್ವನಾಥ್‌ ಬೇಸರ ವ್ಯಕ್ತಪಡಿಸಿದರು. ಜಾತಿಯನ್ನು ವಿರೋಧಿಸುವ, ರಾಜಕಾರಣದಿಂದ ದೂರವಿರುವ ನೀವೇ ಈಗ ಸಿಎಂ ಪರ ಮಾತನಾಡಿದರೆ, ನೀವು ನೀಡುವ ಬಸವಶ್ರೀ ಪ್ರಶಸ್ತಿಗೆ ಬೆಲೆಯಿದೆಯಾ ಎಂದು ಪ್ರಶ್ನಿಸಿದರು. ನಮ್ಮ ನಮ್ಮಗಳ ಪರವಾಗಿ ನಮ್ಮ ನಮ್ಮ ಜನಾಂಗದ ಸ್ವಾಮೀಜಿಗಳನ್ನು ಬೀದಿಗೆ ತಂದು ನಿಲ್ಲಿಸುವ ರಾಜಕಾರಣಿಗಳಿಗೆ ಶೋಭಾಯಮಾನವಲ್ಲ, ಮುಖ್ಯಮಂತ್ರಿ ಅಥವಾ ನಾಯಕ ಜಾತಿವಂತನಾಗಬಾರದು ಎಂದು ಹೇಳಿದರು.


Stay up to date on all the latest ರಾಜಕೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp