ಸ್ವಾಮೀಜಿಗಳು ರಾಜಕೀಯದಿಂದ ದೂರ ಉಳಿಯಬೇಕು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ನಾಯಕತ್ವ ಬದಲಾವಣೆ ವಿಚಾರ ಸಂಬಂಧ ಪ್ರತಿಭಟನೆಗಿಳಿದಿರುವ ವೀರಶೈವ-ಲಿಂಗಾಯತ ಮಠಗಳ ಸ್ವಾಮೀಜಿಗಳ ವಿರುದ್ಧ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.
Published: 26th July 2021 07:02 AM | Last Updated: 26th July 2021 07:31 AM | A+A A-

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ವಿಜಯಪುರ: ನಾಯಕತ್ವ ಬದಲಾವಣೆ ವಿಚಾರ ಸಂಬಂಧ ಪ್ರತಿಭಟನೆಗಿಳಿದಿರುವ ವೀರಶೈವ-ಲಿಂಗಾಯತ ಮಠಗಳ ಸ್ವಾಮೀಜಿಗಳ ವಿರುದ್ಧ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮಠದ ಮುಖ್ಯಸ್ಥರ ನೇಮಕ ವಿಚಾರದಲ್ಲಿ ರಾಜಕೀಯ ಮಧ್ಯೆ ಪ್ರವೇಶ ಮಾಡುವುದಿಲ್ಲ. ಹಾಗೆಯೇ ಸ್ವಾಮೀಜಿಗಳೂ ಕೂಡ ರಾಜಕೀಯ ನೇಮಕಾತಿ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬಾರದು ಎಂದು ಹೇಳಿದ್ದಾರೆ.
ವೀರಶೈವ-ಲಿಂಗಾಯತ ಸಮುದಾಯದ ಮಠಾಧೀಶರು ಒಬ್ಬ ನಿರ್ದಿಷ್ಟ ನಾಯಕನಿಗಾಗಿ ಲಾಬಿ ಮಾಡುತ್ತಿದ್ದರೆ, ಇದು ಇತರ ಸಮುದಾಯಗಳ ಧಾರ್ಮಿಕ ಮುಖ್ಯಸ್ಥರ ಮೇಲೆ ಪರಿಣಾಮ ಬೀರುತ್ತದೆ. ಇದು ರಾಜ್ಯದಲ್ಲಿ ಅಭೂತಪೂರ್ವ ರಾಜಕೀಯ ಪ್ರಕ್ಷುಬ್ಧತೆಗೆ ಕಾರಣವಾಗಬಹುದು. ಇದು ನಮ್ಮ ಸಮುದಾಯಕ್ಕೆ ಕೆಟ್ಟ ಹೆಸರು ತಂದುಕೊಡಲಿದೆ ಎಂದು ತಿಳಿಸಿದ್ದಾರೆ.
ಮಠಾಧೀಶರು, ಧಾರ್ಮಿಕ ಮುಖ್ಯಸ್ಥರು, ಸಂತರು, ಹಿಂದೂ ಕಾರ್ಯಕರ್ತರು, ದೇವಾಲಯಗಳು ಮತ್ತು ಮಠಗಳ ಮೇಲೆ ದಾಳಿ ಮಾಡಿದಾಗ ಎಲ್ಲಾ ಹಿಂದೂಗಳ ಪರವಾಗಿ ಧ್ವನಿ ಎತ್ತಬೇಕು ಮತ್ತು ಹೋರಾಡಬೇಕು... ಒಬ್ಬ ವ್ಯಕ್ತಿಯ ಸಲುವಾಗಿ (ಯಡಿಯೂರಪ್ಪ) ಅಲ್ಲ ಎಂದಿದ್ದಾರೆ.