ಬಸವರಾಜ ಬೊಮ್ಮಾಯಿ ಸೇರಿ 10 ವರ್ಷಗಳಲ್ಲಿ ಆರು ಮುಖ್ಯಮಂತ್ರಿಗಳನ್ನು ಪಡೆದ 'ಹೆಗ್ಗಳಿಕೆ' ಕರ್ನಾಟಕದ್ದು! 

ಈ ವರ್ಷಗಳಲ್ಲಿ ಎಂಟು ಬಾರಿ ಮುಖ್ಯಮಂತ್ರಿಗಳ ಬದಲಾವಣೆಗೆ ರಾಜ್ಯ ಸಾಕ್ಷಿಯಾಯಿತು, ಬಿಎಸ್ ಯಡಿಯೂರಪ್ಪ ಅವರು 2011 ರಿಂದ ಮೂರು ಬಾರಿ ಸಿಎಂ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿಗಳು
ಕರ್ನಾಟಕದ ಮುಖ್ಯಮಂತ್ರಿಗಳು

ಬೆಂಗಳೂರು: ಕಳೆದ 10 ವರ್ಷಗಳಲ್ಲಿ ರಾಜ್ಯದಲ್ಲಿ ಆರು ಮಂದಿ ಮುಖ್ಯಮಂತ್ರಿಗಳು ಬಂದು ಮನೆಗೆ ಹೋಗಿದ್ದಾರೆ. 

ಈ ವರ್ಷಗಳಲ್ಲಿ ಎಂಟು ಬಾರಿ ಮುಖ್ಯಮಂತ್ರಿಗಳ ಬದಲಾವಣೆಗೆ ರಾಜ್ಯ ಸಾಕ್ಷಿಯಾಯಿತು, ಬಿಎಸ್ ಯಡಿಯೂರಪ್ಪ ಅವರು 2011 ರಿಂದ ಮೂರು ಬಾರಿ ಸಿಎಂ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಸಿದ್ದರಾಮಯ್ಯ ಹೊರತು ಈ ಪಡಿಸಿ ಈ ಅವಧಿಯಲ್ಲಿ ಸಿಎಂ ಆದವರೂ ಯಾರೋಬ್ಬರು ಪೂರ್ಣಾವಧಿ ಪೂರೈಸಲಿಲ್ಲ. ಜಗದೀಶ್ ಶೆಟ್ಟರ್ 304 ದಿನ ಮುಖ್ಯಮಂತ್ರಿಯಾಗಿದ್ದರು.

ಆರು ಸಿಎಂ ಗಳಲ್ಲಿ ಮೂವರು ಲಿಂಗಾಯತ ಸಮುದಾಯದವರಾಗಿದ್ದರು ಅವರು ಬಿಜೆಪಿಯವರಾಗಿದ್ದರು.  ಇಬ್ಬರು ಒಕ್ಕಲಿಗ, ಮತ್ತು ಕಾಂಗ್ರೆಸ್ ಸಿದ್ದರಾಮಯ್ಯ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಆರು ಸಿಎಂ ಗಳಲ್ಲಿ ಇಬ್ಬರು ಉತ್ತರ ಕರ್ನಾಟಕದವರು, ಉತ್ತರ ಕರ್ನಾಟಕದನರು ಇಬ್ಬರು ನಾಯಕರು ಸಿಎಂ ಆದ ವೇಳೆ ಬಿಜೆಪಿ ಅಧಿಕಾರದಲ್ಲಿತ್ತು.  2008 ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ 2011ರ ವರೆಗೂ ಸೇವೆ ಸಲ್ಲಿಸಿದರು. 

ಅದಾದ ನಂತರ 2011 ರಿಂದ 2013ರವರೆಗೆ ಡಿವಿ ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಸಿಎಂ ಆಗಿ ಅಧಿಕಾರ ಪೂರೈಸಿದರು. 2013 ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಪೂರೈಸಿದರು.

2018ರ ವಿಧಾನಸಭೆ ಚುನಾವಣೆ ನಂತರ ಯಡಿಯೂರಪ್ಪ ಮೂರನೆ ಬಾರಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು.  ಆದರೆ ಬಹುಮತ ಸಾಬೀತು ಪಡಿಸುವಲ್ಲಿ ವಿಫಲರಾದರು. ಅದಾದ ನಂತರ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿತು.  2019 ರಲ್ಲಿ ಕಾಂಗ್ರೆಸ್ -ಜೆಡಿಎಸ್ ಶಾಸಕರು ಪಕ್ಷ ತೊರೆದು ಬಿಜೆಪಿ ಸೇರಿದ ಕಾರಣ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಯಡಿಯೂರಪ್ಪ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯುವಂತಾಯಿತು.

ಎರಡು ವರ್ಷ ಸಿಎಂ ಆಗಿ ಅಧಿಕಾರ ಪೂರೈಸಿದ ನಂತರ ಸೋಮವಾರ ರಾಜಿನಾಮೆ ನೀಡಿದರು. ಸದ್ಯ ಬಿಜೆಪಿ 61 ವರ್ಷದ ಬಸವರಾಜ ಬೊಮ್ಮಾಯಿ ಅವರ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಿದ್ದಾರೆ. ಬುಧವಾರ ಬೊಮ್ಮಾಯಿ ಅಧಿಕಾರ ಸ್ವೀಕರಿಸಲಿದ್ದು ಕಳೆದ 10 ವರ್ಷಗಳಲ್ಲಿ ಆರನೇ ಸಿಎಂ ಆಗಿ ಪದಗ್ರಹಣ ಮಾಡಲಿದ್ದಾರೆ.

ಬಿಎಸ್ ಯಡಿಯೂರಪ್ಪ- ಶಿಕಾರಿಪುರ ಕ್ಷೇತ್ರ

ಡಿವಿ ಸದಾನಂದಗೌಡ-ಎಂಎಲ್ ಸಿ

ಜಗದೀಶ್ ಶೆಟ್ಟರ್ -ಹುಬ್ಬಳ್ಳಿ-ಧಾರವಾಡ ಸೆಂಟ್ರಲ್

ಸಿದ್ದರಾಮಯ್ಯ- ವರುಣಾ(ಮೈಸೂರು)

ಎಚ್.ಡಿ ಕುಮಾರಸ್ವಾಮಿ -ಚನ್ನಪಟ್ಟಣ

ಬಸವರಾಜ ಬೊಮ್ಮಾಯಿ-ಶಿಗ್ಗಾವಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com