'ಜನತೆಗೆ ಬದುಕುವ ಚಿಂತೆ, ಬಿಜೆಪಿಗೆ ಕುರ್ಚಿ ಕಿತ್ತಾಟದ್ದೇ ಚಿಂತೆ, ಈ ಸರ್ಕಾರ ಭ್ರಷ್ಟಾಚಾರದ ಸಂತೆ'

ಕೊರೋನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಟೀಕಿಸುತ್ತಿರುವ ಕಾಂಗ್ರೆಸ್ ಮತ್ತೆ ಬಿಜೆಪಿ ವಿರುದ್ಧ ಹರಿಹಾಯ್ದಿದೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಬಿಜೆಪಿಗೆ ಸದಾ ಕುರ್ಚಿಯದ್ದೇ ಚಿಂತೆ ಎಂದು ಲೇವಡಿ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೋನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಟೀಕಿಸುತ್ತಿರುವ ಕಾಂಗ್ರೆಸ್ ಮತ್ತೆ ಬಿಜೆಪಿ ವಿರುದ್ಧ ಹರಿಹಾಯ್ದಿದೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಬಿಜೆಪಿಗೆ ಸದಾ ಕುರ್ಚಿಯದ್ದೇ ಚಿಂತೆ ಎಂದು ಲೇವಡಿ ಮಾಡಿದೆ.

ಜನರಿಗೆ ಬದುಕುವ ಚಿಂತೆಯಾದರೆ, ಬಿಜೆಪಿಗೆ ಕುರ್ಚಿ ಕಿತ್ತಾಟದ್ದೇ ಚಿಂತೆಯಾಗಿದೆ. ಇಡೀ ರಾಜ್ಯ ಸರ್ಕಾರ ಭ್ರಷ್ಟಾಚಾರದ ಸಂತೆ ಎಂದು ಕಾಂಗ್ರೆಸ್‌ ಟೀಕಿಸಿದೆ. ಬಿಜೆಪಿಯವರು ಒಬ್ಬೊಬ್ಬರಾಗಿ ದೆಹಲಿ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಆ್ಯಂಫೋಟೆರಿಸಿನ್-ಬಿ ತರುವುದಕ್ಕೆ ಅಲ್ಲ, ಲಸಿಕೆ ತರುವುದಕ್ಕೆ ಅಲ್ಲ, ಜಿಎಸ್‌ಟಿ ಪಾಲು ಕೇಳುವುದಕ್ಕೂ ಅಲ್ಲ. ಇವರ ದೆಹಲಿ ದಂಡಯಾತ್ರೆ!, ಕುರ್ಚಿ ಕಿತ್ತಾಟಕ್ಕೆ ಇರುವ ಆಸಕ್ತಿ ಕೊರೊನಾ ನಿರ್ವಹಣೆಗಿಲ್ಲ’ ಎಂದು ಕಿಡಿಕಾರಿದೆ.

‘ಸದ್ಯ ಸರ್ಕಾರದ ಲೆಕ್ಕಕ್ಕೆ ಸಿಕ್ಕಿರುವ ಅಂಕಿ ಅಂಶದ ಪ್ರಕಾರ ರಾಜ್ಯದಲ್ಲಿ 1370 ಕಪ್ಪು ಶಿಲೀಂಧ್ರ (ಬ್ಲ್ಯಾಕ್‌ ಫಂಗಸ್) ಪ್ರಕರಣಗಳಿವೆ. ಆದರೆ, ಒಬ್ಬ ವ್ಯಕ್ತಿಯ ಚಿಕಿತ್ಸೆಗೆ 90 ವಯಲ್ಸ್ ಬೇಕಾಗಬಹುದು, ಇಷ್ಟು ಸೋಂಕಿತರಿಗೆ ಕೇವಲ 1930 ವಯಲ್ಸ್ ಆ್ಯಂಫೋಟೆರಿಸಿನ್-ಬಿ ಸಾಲುತ್ತದೆಯೇ? ಕೇಂದ್ರ ಸರ್ಕಾರ ಇಂತಹ ಘೋರ ಅನ್ಯಾಯಕ್ಕೂ ತಲೆಬಾಗಿ ನಿಲ್ಲುವ ಬಿಜೆಪಿಗೆ ಜನರ ಬಗ್ಗೆ ಕನಿಷ್ಠ ಕಾಳಜಿ ಇಲ್ಲದಿರುವುದು ದುರಂತವೇ ಸರಿ’ ಎಂದು ಕಾಂಗ್ರೆಸ್‌ ಮತ್ತೊಂದು ಟ್ವೀಟ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com