ಯಡಿಯೂರಪ್ಪ ಗುಡುಗಿಗೆ ಬೆದರಿದ 'ಸೈನಿಕ'; ಸಿಡಿ ಸಂಸ್ಕೃತಿ ಡಿಕೆಶಿ ಅವರಿಗೆ ಚೆನ್ನಾಗಿ ಗೊತ್ತು: ಯೋಗೇಶ್ವರ್

ನನ್ನ ‌ನೋವನ್ನು ಎಲ್ಲಿ ಹೇಳಿಕೊಳ್ಳಬೇಕೋ ಅಲ್ಲಿ ಹೇಳಿಕೊಂಡಿದ್ದೇನೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ಸಚಿವ ಯೋಗೇಶ್ವರ್ ಹೇಳಿದ್ದಾರೆ.
ಯೋಗೇಶ್ವರ್
ಯೋಗೇಶ್ವರ್

ಬೆಂಗಳೂರು: ನನ್ನ ‌ನೋವನ್ನು ಎಲ್ಲಿ ಹೇಳಿಕೊಳ್ಳಬೇಕೋ ಅಲ್ಲಿ ಹೇಳಿಕೊಂಡಿದ್ದೇನೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ಸಚಿವ ಯೋಗೇಶ್ವರ್ ಹೇಳಿದ್ದಾರೆ.

ಸೋಮವಾರ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಚಿವ ಯೋಗೇಶ್ವರ್ ಅವರ ಕೊಠಡಿಗೆ ತೆರಳಿದ್ದ ಮಾಧ್ಯಮಗಳು ಪ್ರತಿಕ್ರಿಯೆಗಾಗಿ ಮುಗಿಬಿದ್ದವು, ಈ ವೇಳೆ ನಗುತ್ತಲೇ ಉತ್ತರಿಸಿದ ಯೋಗೇಶ್ವರ್ ನನ್ನ ನೋವನ್ನು ಎಲ್ಲಿ ಹೇಳಬೇಕೋ ಅಲ್ಲಿ ಹೇಳಿದ್ದೇನೆ ಎಂದರು, 

ಮಾಧ್ಯಮಗಳು ಪದೇ ಪದೇ ಪ್ರಶ್ನಿಸಿದರೂ ಅವರು ಈ ಸಂಬಂಧ ತುಟಿ ಬಿಚ್ಚಲಿಲ್ಲ, ಪಕ್ಷದ ಶಿಸ್ತಿನ ರೇಖೆಯನ್ನು ದಾಟಬಾರದು, ಒಂದು ವೇಳೆ ಮತ್ತ ಇದೇ ರಿಪೀಟ್ ಆದರೆ ಸಚಿವ ಸ್ಥಾನ ಕಳೆದುಕೊಳ್ಳಬಹುದು ಎಂದು ಹೈಕಮಾಂಡ್ ಎಚ್ಚರಿಕೆ ನೀಡಿರಬೇಕೆಂಬ ಊಹಾಪೂಹಗಳು ಕೇಳಿ ಬರುತ್ತಿವೆ.

ಸಿಎಂ ರಾಜಿನಾಮೆ ಹೇಳಿಕೆಗೆ ಮಾತ್ರವಲ್ಲ, ಚುನಾವಣೆಯಲ್ಲಿ ಸೋತು ಸಚಿವ ಸ್ಥಾನಕ್ಕಾಗಿ ಭಿಕ್ಷೆ ಬೇಡುತ್ತಿದ್ದರು ಎಂಬ ರೇಣುಕಾಚಾರ್ಯ ಹೇಳಿಕೆಗೂ ಯೋಗೇಶ್ವರ್ ಪ್ರತಿಕ್ರಿಯಿಸಿಲಿಲ್ಲ.

ಇನ್ನೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆಗೆ ಖಾರವಾಗಿ ಉತ್ತರಿಸಿರುವ ಯೋಗೇಶ್ವರ್,  ಡಿಕೆಶಿ ನನ್ನ ರಾಜಕೀಯ ವಿರೋಧಿ. ಸಿಡಿ ಸಂಸ್ಕೃತಿ ಅವರಿಗೆ ಚೆನ್ನಾಗಿ ಗೊತ್ತು‌. ನಮ್ಮ ಜಿಲ್ಲೆಯ ಎಲ್ ಎನ್ ಮೂರ್ತಿ ಅನ್ನೋರು ಯಾರು ಯಾರಿಗೆ ಸಿಡಿ ತೋರಿಸುತ್ತಿದ್ದರು ಎಂದು ಬರೆದಿದ್ದಾರೆ ಎಂದು ಯೋಗೇಶ್ವರ್ ಮಾರ್ಮಿಕವಾಗಿ ನುಡಿದರು.

ರಮೇಶ್ ಜಾರಕಿಹೊಳಿ ಸಿಡಿ ಹಗರಣದ ಹಿಂದೆ ಯಾರು ಇದ್ದರು ಎಂಬುದು ಎಲ್ಲರಿಗೂ ಗೊತ್ತಿದೆ‌. ನಾನು ಜೆಎಸ್ ಎಸ್ ಮಠಕ್ಕೆ, ಆದಿ ಚುಂಚನಗಿರಿ ಮಠಕ್ಕೆ ಹೋಗುತ್ತಲೇ ಇರುತ್ತೇನೆ. ನಾನು ಹೋಗಿ ಬಂದ ತಕ್ಷಣ ಅವರು ಹೋಗುತ್ತಾರೆ. ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ.

ಡಿ.ಕೆ.ಶಿವಕುಮಾರ್‌ಗೆ ಏಕೆ ನಮ್ಮ ಪಕ್ಷದ ಉಸಾಬರಿ ಬೇಕು ಎಂದು ಪ್ರಶ್ನಿಸಿದ ಅವರು, ಡಿ. ಕೆ. ಶಿವಕುಮಾರ್ ಅವರು ನಮ್ಮ ಪಕ್ಷದ ಸಾಮಾನ್ಯ ಸದಸ್ಯರಾಗಿ ನೋಂದಣಿ ಮಾಡಿಕೊಳ್ಳುವುದು ಸೂಕ್ತ ಎಂದು ಸಚಿವ ಸಿ. ಪಿ. ಯೋಗೇಶ್ವರ್ ಲೇವಡಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com